೫ ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆ

ಜಕಾರ್ತಾ (ಇಂಡೋನೇಷ್ಯಾ) – ಇಂಡೋನೇಷ್ಯಾದ ಬಾಂಟನ್ ಪ್ರಾಂತ್ಯದಲ್ಲಿ ದೈವನಿಂದನೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಘಟನೆಯು ಕಳ್ಳತನದ ಆರೋಪ ಮತ್ತು ನಂತರ ಕುರಾನ್ ಮೇಲೆ ಕಾಲಿಟ್ಟು ಪ್ರಮಾಣ ಮಾಡುವ ವಿವಾದಕ್ಕೆ ಸಂಬಂಧಿಸಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ದೇಶಾದ್ಯಂತ ಆಕ್ರೋಶದ ಅಲೆ ಎದ್ದಿದೆ. ಪೊಲೀಸರು ಲೆಬಾಕ್ ಜಿಲ್ಲೆಯಲ್ಲಿ ದೈವನಿಂದನೆ ಕಾಯ್ದೆಯಡಿ ಕ್ರಮ ಕೈಗೊಂಡು ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ.
🚨 Indonesia: Two women arrested for taking an oath by stepping on the Quran. Reports say they could face up to 5 years in prison.
⚖️ Indonesia acts swiftly when the religious sentiments of its majority are hurt.
🇮🇳 Meanwhile in India, repeated insults to the religious beliefs… pic.twitter.com/SmIdjaN1ZM
— Sanatan Prabhat (@SanatanPrabhat) April 15, 2026
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಏಪ್ರಿಲ್ ೮ ರಂದು ಬ್ಯೂಟಿ ಪಾರ್ಲರ್ ಮಾಲೀಕಿಯೊಬ್ಬರು ಮಹಿಳಾ ಗ್ರಾಹಕಿಯ ಮೇಲೆ ಕಳ್ಳತನದ ಆರೋಪ ಹೊರಿಸಿದ್ದರು. ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸಲು ಆಕೆಗೆ ಕುರಾನ್ ಮೇಲೆ ಕಾಲಿಟ್ಟು ಪ್ರಮಾಣ ಮಾಡುವಂತೆ ಕೇಳಲಾಯಿತು. ಆ ಗ್ರಾಹಕಿ ಹಾಗೆ ಮಾಡಿದಾಗ ಮಾಲೀಕಿಯು ಈ ಸಂಪೂರ್ಣ ಘಟನೆಯ ವಿಡಿಯೋ ಮಾಡಿದ್ದಳು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ನಂತರ ಇಂಡೋನೇಷ್ಯಾದ ಜನರ ಆಕ್ರೋಶ ಕಟ್ಟೆಯೊಡೆದಿದೆ. ಇಬ್ಬರೂ ಮಹಿಳೆಯರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ದೈವನಿಂದನೆ ಕಾಯ್ದೆಯಡಿ ದೋಷಿಗಳೆಂದು ಸಾಬೀತಾದರೆ ಅವರಿಗೆ ೫ ವರ್ಷಗಳವರೆಗೆ ಜೈಲು ಶಿಕ್ಷೆಯಾಗಬಹುದೆಂದು ಪೊಲೀಸರು ತಿಳಿಸಿದ್ದಾರೆ.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !