ಕೋಲಕಾತಾದ ಪ್ರಖರ ಹಿಂದುತ್ವನಿಷ್ಠ ನಾಯಕ ಪಿನಾಕಿ ಗಂಗೋಪಾಧ್ಯಾಯ ಅವರ ಹೇಳಿಕೆ
ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋಲಲಿದೆ ಎಂಬ ಸುಳಿವು

ಕೋಲಕಾತಾ (ಬಂಗಾಳ) – ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಘೋಷಿಸಿರುವ ಆಸ್ತಿಯ ಬಗ್ಗೆ ಕೂಲಂಕಷ ತನಿಖೆಯಾಗಬೇಕು. ಅವರ ಆಸ್ತಿಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿ ಪ್ರಕಟವಾಗಿದ್ದರೂ, ಅವರ ಬ್ಯಾಂಕ್ ಖಾತೆಗಳಲ್ಲಿನ ಉಳಿತಾಯ ಹಣ (ಬ್ಯಾಂಕ್ ಬ್ಯಾಲೆನ್ಸ್) ಇಷ್ಟೊಂದು ಕಡಿಮೆಯಿರಲು ಹೇಗೆ ಸಾಧ್ಯ? ಎಂದು ಕೋಲಕಾತಾದ ಪ್ರಖರ ಹಿಂದುತ್ವನಿಷ್ಠ ನಾಯಕ ಪಿನಾಕಿ ಗಂಗೋಪಾಧ್ಯಾಯ ಅವರು ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡುತ್ತಾ ಪ್ರಶ್ನಿಸಿದ್ದಾರೆ. ಮಾತು ಮುಂದುವರೆಸುತ್ತಾ, ಬ್ಯಾನರ್ಜಿಯವರು ತಮ್ಮ ನಿವೃತ್ತಿ ವೇತನವನ್ನು ಸುರಕ್ಷಿತವಾಗಿರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದಿದ್ದಾರೆ. ಇದರ ಮೂಲಕ ತೃಣಮೂಲ ಕಾಂಗ್ರೆಸ್ ಖಂಡಿತವಾಗಿಯೂ ಸೋಲಲಿದೆ ಎಂಬ ಪರೋಕ್ಷ ಸೂಚನೆಯನ್ನು ಗಂಗೋಪಾಧ್ಯಾಯ ನೀಡಿದ್ದಾರೆ.
ಭವಾನಿಪುರ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಸೋಲಲಿದೆ ಎಂದು ಗಂಗೋಪಾಧ್ಯಾಯ ದಾವೆ ಮಾಡಿದ್ದಾರೆ. ಪಕ್ಷವು ತನ್ನ ‘ನಿಶ್ಚಿತ ಮತದಾರರು’ ಮತ್ತು ಸ್ಥಳೀಯ ಜನರ ಬೆಂಬಲವನ್ನು ಕಳೆದುಕೊಂಡಿದೆ. ಇದೇ ಕ್ಷೇತ್ರದಿಂದ ಮಮತಾ ಬ್ಯಾನರ್ಜಿಯವರು ಚುನಾಯಿತರಾಗುತ್ತಾರೆ ಎಂಬುದು ಗಮನಾರ್ಹ.
ಗಂಗೋಪಾಧ್ಯಾಯ ಅವರು ಪ್ರಸ್ತಾಪಿಸಿದ ಕೆಲವು ಪ್ರಮುಖ ಅಂಶಗಳು!
1. ಆಗಸ್ಟ್ 2024 ರಲ್ಲಿ ಕೋಲಕಾತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ಮಹಿಳಾ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ, ಆಕೆಯ ತಾಯಿಯ ಮೇಲೆಯೂ ಹಲ್ಲೆಯಾಗಿತ್ತು. ಈ ಘಟನೆಯು ರಾಜ್ಯ ಆಡಳಿತದ ಸಾಮೂಹಿಕ ವೈಫಲ್ಯವಾಗಿದೆ.
2. ರಾಜ್ಯದ ಶಾಲೆಗಳಲ್ಲಿ, ವಿಶೇಷವಾಗಿ ಉತ್ತರಪಾರಾ ಭಾಗದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಘಟನೆಗಳು ರಾಜ್ಯದ ಪೊಲೀಸ್ ವ್ಯವಸ್ಥೆ ಮತ್ತು ಭದ್ರತಾ ವ್ಯವಸ್ಥೆಯು ಸಂಪೂರ್ಣವಾಗಿ ವಿಫಲವಾಗಿರುವುದರ ಸಂಕೇತವಾಗಿದೆ.
3. ಕಳೆದ 15 ವರ್ಷಗಳಲ್ಲಿ ಬಂಗಾಳದ ‘ಭದ್ರಲೋಕ್’ (ಸುಸಂಸ್ಕೃತ ಅಥವಾ ಸಭ್ಯ ಜನ) ಸಂಸ್ಕೃತಿಯು ನಾಶವಾಗುತ್ತಿರುವುದಕ್ಕೆ ಸಂಪೂರ್ಣವಾಗಿ ತೃಣಮೂಲ ಕಾಂಗ್ರೆಸ್ಸೇ ಹೊಣೆಯಾಗಿದೆ.
4. ರಾಜ್ಯದ ಜಾಂಗೀಪಾರಾದಂತಹ ಕ್ಷೇತ್ರಗಳಲ್ಲಿನ ಶೇ. 23 ರಷ್ಟು ಮುಸ್ಲಿಂ ಮತಗಳ ಬಗ್ಗೆ ಪ್ರಸ್ತಾಪಿಸಿದ ಗಂಗೋಪಾಧ್ಯಾಯ, ಮುಸ್ಲಿಮರು ತೃಣಮೂಲ ಕಾಂಗ್ರೆಸ್‌ನ ಮತಬ್ಯಾಂಕ್ ಆಗಿರುವುದನ್ನು ನಿಲ್ಲಿಸಬೇಕು. ಅವರು ಇತರ ರಾಜ್ಯಗಳಲ್ಲಿ ಭಾಜಪ ಮಾಡಿರುವ ಅಭಿವೃದ್ಧಿಯನ್ನು ಗಮನಿಸಬೇಕು ಎಂದು ಹೇಳಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”