
ನವ ದೆಹಲಿ – ಭಾರತದಲ್ಲಿ ವಿವಾಹಬಾಹ್ಯ ಸಂಬಂಧಗಳಿಗಾಗಿ ಬಳಸಲಾಗುವ ‘ಗ್ಲೀಡನ್’ ಆಪ್ ನ ಬಳಕೆದಾರರ ಸಂಖ್ಯೆ ೪೦ ಲಕ್ಷದ ಗಡಿ ತಲುಪಿದೆ. ವಿಶೇಷವಾಗಿ ಮೆಟ್ರೋ ನಗರಗಳಲ್ಲಿ ಬಳಕೆದಾರರ ಸಂಖ್ಯೆ ಅಧಿಕವಾಗಿರುವುದು ಕಂಡುಬಂದಿದೆ. ಬೆಂಗಳೂರಿನಲ್ಲಿ ಶೇ. ೧೮, ಭಾಗ್ಯನಗರದಲ್ಲಿ (ಹೈದರಾಬಾದ್) ಶೇ. ೧೭ ಮತ್ತು ದೆಹಲಿಯಲ್ಲಿ ಶೇ. ೧೧ ರಷ್ಟು ಬಳಕೆದಾರರಿರುವುದು ಇದಕ್ಕೆ ಕೆಲವು ಉದಾಹರಣೆಗಳಾಗಿವೆ. ಬಳಕೆದಾರರಲ್ಲಿ ಶೇ. ೬೫ ರಷ್ಟು ಪುರುಷರಿದ್ದರೆ, ಶೇ. ೩೫ ರಷ್ಟು ಮಹಿಳೆಯರಿದ್ದಾರೆ. ಬಹುತೇಕ ಬಳಕೆದಾರರು ಈಗಾಗಲೇ ವಿವಾಹಿತರಾಗಿದ್ದಾರೆ ಅಥವಾ ದೀರ್ಘಕಾಲದ ಸಂಬಂಧದಲ್ಲಿದ್ದಾರೆ ಎಂಬುದು ಗಮನಾರ್ಹ.
4 million users in India are on the extra-marital dating app Gleeden.
This raises serious concerns about the rapid decline in moral and family values in society. Trends like these reflect a shift that could gradually erode India’s cultural foundation; mirroring patterns seen in… pic.twitter.com/7Nt3Xyyjh0
— Sanatan Prabhat (@SanatanPrabhat) April 12, 2026
ಮಹಿಳೆಯರ ಸಹಭಾಗಿತ್ವದಲ್ಲಿ ಹೆಚ್ಚಳ
ಕಳೆದ ೨ ವರ್ಷಗಳಲ್ಲಿ ಮಹಿಳಾ ಬಳಕೆದಾರರ ಸಂಖ್ಯೆಯಲ್ಲಿ ಶೇ. ೧೪೮ ರಷ್ಟು ಭಾರಿ ಏರಿಕೆ ದಾಖಲಾಗಿದೆ. ಸರಾಸರಿ ಭಾರತೀಯ ಬಳಕೆದಾರರು ಪ್ರತಿದಿನ ೧ ರಿಂದ ಒಂದೂವರೆ ಗಂಟೆಯವರೆಗೆ ಈ ಆಪ್ ನಲ್ಲಿ ಸಂವಹನ ನಡೆಸುತ್ತಾರೆ. ಈ ಹೆಚ್ಚುತ್ತಿರುವ ಬಳಕೆಯು ಸಮಾಜದ ವೈವಾಹಿಕ ಮೌಲ್ಯಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!