ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ವಿವಾದಾತ್ಮಕ ಹೇಳಿಕೆ

ಮುಂಬಯಿ – ನಾನು ದಾವುದ್ ಇಬ್ರಾಹಿಂನಿಂದಾಗಿ ಬದುಕುತ್ತಿದ್ದೇನೆ. ಅವನಿಂದಲೇ ನನ್ನ ಮನೆ ನಡೆಯುತ್ತಿದೆ, ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ಫಿಲ್ಮಫೇರ್’ ಎಂಬ ಯೂಟ್ಯೂಬ್ ಚಾನೆಲ್ ಗೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ರಾಮ್ ಗೋಪಾಲ್ ವರ್ಮಾ ಈ ಮಾತುಗಳನ್ನಾಡಿದರು.
Underworld Money, Bollywood Narratives: A Larger Conspiracy 🎬💰
“I Earn My Living Because of Dawood Ibrahim” – Ram Gopal Varma
RGV claims that his movies Satya and Company were heavily inspired by the real-life underworld, referencing figures like Dawood Ibrahim.
This… pic.twitter.com/cc3iJcFbil
— Sanatan Prabhat (@SanatanPrabhat) April 12, 2026
ಈ ಸಂದರ್ಭದಲ್ಲಿ ಮಾತನಾಡಿದ ರಾಮ್ ಗೋಪಾಲ್ ವರ್ಮಾ, ನಾನು ನನ್ನ ‘ಗನ್ಸ್ ಆಂಡ್ ಥೈಸ್’ ಎಂಬ ಆತ್ಮಚರಿತ್ರೆಯನ್ನು ದಾವುದ್ ಇಬ್ರಾಹಿಂನಿಗೆ ಅರ್ಪಿಸಿದ್ದೆ; ಆದರೆ ಪ್ರಕಾಶಕರು ದಾವುದ್ ಹೆಸರನ್ನು ತೆಗೆದುಹಾಕಿದರು. ಒಂದು ವೇಳೆ ದಾವುದ್ ಇಬ್ರಾಹಿಂ ಇಲ್ಲದಿದ್ದರೆ, ನಾನು ‘ಸತ್ಯಾ’ ಮತ್ತು ‘ಕಂಪನಿ’ಯಂತಹ ಅಮರ ಚಿತ್ರಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಿರುವಾಗ ನಾನು ಅವನಿಗೆ ಈ ಪುಸ್ತಕವನ್ನು ಏಕೆ ಅರ್ಪಿಸಬಾರದು? ಅವನಿಂದಲೇ ನನ್ನ ಮನೆ ನಡೆಯುತ್ತಿದೆ. ಅಪರಾಧಿಗಳಿಂದ ಬೆದರಿಕೆ ಕರೆಗಳು ಬಾರದ ಏಕೈಕ ವ್ಯಕ್ತಿ ನಾನಾಗಿದ್ದೆ; ಏಕೆಂದರೆ ಅವರಿಗೆ ‘ಸತ್ಯಾ’ ಮತ್ತು ‘ಕಂಪನಿ’ ಚಿತ್ರಗಳು ತುಂಬಾ ಇಷ್ಟವಾಗಿದ್ದವು. ನನಗೆ ತೊಂದರೆ ಕೊಡುವ ಯಾವುದೇ ಇಚ್ಛೆ ಗೂಂಡಾಗಳಿಗಿಲ್ಲ. ನಾನು ಒಂದು ರೀತಿಯಲ್ಲಿ ಅವರಿಗೆ ಆಪ್ತ ಮಿತ್ರನಾಗಿದ್ದೆ, ಎಂದು ಅವರು ಹೇಳಿದರು.
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್