ಸಚಿವ ಪ್ರಿಯಾಂಕ ಖರ್ಗೆ ಅವರ ಸವಾಲು

ಬೆಂಗಳೂರು – ಅಲ್ಪಸಂಖ್ಯಾತರ ಬಗ್ಗೆ ಅಸಮಾಧಾನ ಮತ್ತು ಕೋಪವಿದ್ದರೆ, ದೇಶಭಕ್ತಿಯ ಹರಟೆ ಹೊಡೆಯುವ ಕೇಂದ್ರದ ನರೇಂದ್ರ ಮೋದಿ ಸರಕಾರವು ಇಸ್ಲಾಮಿಕ್ ದೇಶಗಳೊಂದಿಗಿನ ವ್ಯಾಪಾರ ಸಂಬಂಧಗಳನ್ನು ಮತ್ತು ನಂಟನ್ನು ಕಡಿದು ತೋರಿಸಲಿ. ‘ಈ ದೇಶದ ಅಲ್ಪಸಂಖ್ಯಾತರು, ಆದಿವಾಸಿಗಳು ಮತ್ತು ದಲಿತರು ನಮ್ಮ ನಾಗರಿಕರಲ್ಲ’ ಎಂದು ಅವರು ಒಮ್ಮೆ ಹೇಳಿ ತೋರಿಸಲಿ ಎಂದು ಕರ್ನಾಟಕದ ಕಾಂಗ್ರೆಸ್ ಸಚಿವ ಪ್ರಿಯಾಂಕ ಖರ್ಗೆ ಅವರು ಕೇಂದ್ರ ಸರಕಾರಕ್ಕೆ ಸವಾಲು ಹಾಕಿದ್ದಾರೆ. ಅವರು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
If the govt speaks of patriotism, will Narendra Modi show the resolve to cut trade ties with Islamic nations?
Karnataka minister Priyank Kharge raises such challenges, yet targets Hindu traditions while seeking Muslim votes. If someone asked Kharge to convert his own religion,… pic.twitter.com/rhh6vMJL6J
— Sanatan Prabhat (@SanatanPrabhat) April 10, 2026
ಸಚಿವ ಖರ್ಗೆ ಅವರು ಮುಂದುವರಿದು ಹೀಗೆ ಹೇಳಿದರು,
೧. ಪ್ರಧಾನಿ ಮೋದಿ ಅವರಿಗೆ ಸಾಮಾನ್ಯ ಜ್ಞಾನವೂ ಇಲ್ಲ, ಅವರು ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಎಲ್ಪಿಜಿ ಗ್ಯಾಸ್, ಇಂಧನ ಮತ್ತು ಕಚ್ಚಾ ತೈಲದ ಪೈಕಿ ಶೇ. ೭೮% ರಷ್ಟು ದಾಸ್ತಾನು ಎಲ್ಲಿಂದ ಬರುತ್ತಿದೆ ಎಂಬುದು ಈಗ ಯುದ್ಧ ಆರಂಭವಾದ ನಂತರ ಜನರಿಗೆ ತಿಳಿದಿರಬಹುದು.
೨. ನಾವು ತಿಲಕಕ್ಕಾಗಿ ಬಳಸುವ ಕೇಸರಿ ಬಣ್ಣವು ಕೇಸರಿಯಿಂದ ಉತ್ಪತ್ತಿಯಾಗುತ್ತದೆ. ಶೇ. ೯೦% ರಷ್ಟು ಕೇಸರಿ ಇಸ್ಲಾಮಿಕ್ ದೇಶಗಳಿಂದ ಬರುತ್ತದೆ, ಕೇವಲ ಶೇ. ೫% ರಷ್ಟು ಕೇಸರಿ ಮಾತ್ರ ಕಾಶ್ಮೀರದಲ್ಲಿ ಬೆಳೆಯಲಾಗುತ್ತದೆ. ಶೇ. ೯೦% ಕ್ಕಿಂತ ಹೆಚ್ಚು ಕೇಸರಿ ಇರಾಕ್ ಮತ್ತು ಅಫ್ಘಾನಿಸ್ತಾನದಂತಹ ದೇಶಗಳಿಂದ ಬರುತ್ತದೆ. ಆದ್ದರಿಂದ ನಾವು ಪ್ರಾಯೋಗಿಕವಾಗಿ ಯೋಚಿಸಬೇಕು.
೩. ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರು ಕೊರೋನಾ ಸಮಯದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯನ್ನು ದುಬೈನಲ್ಲಿ ಆಯೋಜಿಸಿದ್ದರು, ಆಗ ಅವರ ದೇಶಭಕ್ತಿ ಎಲ್ಲಿ ಹೋಗಿತ್ತು?
೪. ದ್ವಂದ್ವ ನೀತಿ ಮತ್ತು ದ್ವಂದ್ವ ಮಾತುಗಳಿಂದಾಗಿ ಭಾಜಪ ನಾಯಕರೀಗ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
೫. ಭಾಜಪ ಜನರಲ್ಲಿ ಯಾವುದೇ ತರ್ಕಬದ್ಧ ನಿಲುವಿಲ್ಲ. ಅವರು ಕೇವಲ ‘ವಾಟ್ಸಾಪ್’ ಮೂಲಕ ಅತ್ತ ಇತ್ತ ಸಿಕ್ಕ ಮಾಹಿತಿಯನ್ನು ಓದುತ್ತಾರೆ ಮತ್ತು ಮಾಧ್ಯಮಗಳ ಮುಂದೆ ಬಂದು ಗಿಣಿಪಾಠ ಮಾಡುತ್ತಾರೆ.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !