ಕರ್ನಲ್ ಪ್ರಸಾದ್ ಪುರೋಹಿತ್ ಅವರಿಗೆ ‘ಬ್ರಿಗೇಡಿಯರ್’ ಆಗಿ ಬಡ್ತಿ- Lieutenant Colonel Prasad Purohit

ಭಾರತೀಯ ಸೇನೆಯ ನಿರ್ಧಾರ

ಮುಂಬಯಿ – ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ನಿರಪರಾಧಿಯಾಗಿ ಬಿಡುಗಡೆಯಾದ ಕರ್ನಲ್ ಪ್ರಸಾದ್ ಪುರೋಹಿತ್ ಅವರನ್ನು ‘ಬ್ರಿಗೇಡಿಯರ್’ ಹುದ್ದೆಗೆ ಬಡ್ತಿ ನೀಡಲು ಭಾರತೀಯ ಸೇನೆಯು ಸಮ್ಮತಿ ನೀಡಿದೆ.

1. ಕರ್ನಲ್ ಪುರೋಹಿತ್ ಅವರು ಮಾರ್ಚ್ 31, 2026 ರಂದು ಸೇನಾ ಸೇವೆಯಿಂದ ನಿವೃತ್ತರಾಗಿದ್ದರು; ಆದರೆ ಬಡ್ತಿಯ ಬೇಡಿಕೆಗಾಗಿ ಅವರು ‘ಸಶಸ್ತ್ರ ಪಡೆಗಳ ನ್ಯಾಯಾಧಿಕರಣ’ದ (Armed Forces Tribunal) ಮೊರೆ ಹೋಗಿದ್ದರು.

2. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧಿಕರಣವು ಅವರ ನಿವೃತ್ತಿಗೆ ತಡೆ ನೀಡಿತ್ತು.

3. ಬಡ್ತಿ ಪ್ರಕ್ರಿಯೆಯ ಕುರಿತು ನಿರ್ಧಾರವಾಗುವವರೆಗೆ ಅವರನ್ನು ಸೇವೆಯಲ್ಲಿಯೇ ಮುಂದುವರಿಸಲು ಆದೇಶ ನೀಡಲಾಗಿತ್ತು.

4. ನ್ಯಾಯಾಧಿಕರಣದ ಹಸ್ತಕ್ಷೇಪ ಮತ್ತು ಸೇನಾ ಮಟ್ಟದ ತಾಂತ್ರಿಕ ಪ್ರಕ್ರಿಯೆಗಳ ನಂತರ ಕರ್ನಲ್ ಪುರೋಹಿತ್ ಅವರಿಗೆ ‘ಬ್ರಿಗೇಡಿಯರ್’ ಹುದ್ದೆ ನೀಡುವುದು ಅಂತಿಮಗೊಂಡಿದೆ.

2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಅವರು 9 ವರ್ಷಗಳ ಕಾಲ ಕಾರಾಗೃಹದಲ್ಲಿದ್ದರು. 2017ರಲ್ಲಿ ಅವರಿಗೆ ಜಾಮೀನು ದೊರಕಿತು. ಆ ನಂತರ ಅವರು ಮತ್ತೆ ಸೇನಾ ಸೇವೆಗೆ ಮರಳಿದ್ದರು. ಜುಲೈ 31, 2025 ರಂದು ಮುಂಬಯಿನ ವಿಶೇಷ ಎನ್.ಐ.ಎ (NIA) ನ್ಯಾಯಾಲಯವು ಅವರನ್ನು ನಿರಪರಾಧಿ ಎಂದು ಮುಕ್ತಗೊಳಿಸಿತು. 2017 ರಲ್ಲಿ ಸರ್ವೋಚ್ಚ ನ್ಯಾಯಾಲಯವು ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.