ಚುನಾವಣಾ ಆಯೋಗಕ್ಕೆ ಹಿನ್ನಡೆ ತಿರುಗೇಟು!

ಫೋಂಡಾ, ಏಪ್ರಿಲ್ ೮ (ಸುದ್ದಿ ) – ಚುನಾವಣಾ ಆಯೋಗವು ಫೋಂಡಾ ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್ ೯ ರಂದು ನಿಗದಿಪಡಿಸಿದ್ದ ಉಪಚುನಾವಣೆಯನ್ನು ಉಚ್ಚ ನ್ಯಾಯಾಲಯವು ಏಪ್ರಿಲ್ ೮, ೨೦೨೬ ರಂದು ರದ್ದುಗೊಳಿಸಿದೆ. ಹೊಸದಾಗಿ ಆಯ್ಕೆಯಾಗುವ ಶಾಸಕರ ಅಧಿಕಾರಾವಧಿಯು ೧ ವರ್ಷಕ್ಕಿಂತ ಕಡಿಮೆ ಇರುತ್ತದೆ ಎಂಬ ಕಾರಣ ನೀಡಿ ಈ ಉಪಚುನಾವಣೆಯನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಫೋಂಡಾ ಉಪಚುನಾವಣೆಯ ಸಿಂಧುತ್ವವನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಪ್ರಸ್ತುತ ವಿಧಾನಸಭೆಯ ೫ ವರ್ಷಗಳ ಅವಧಿ ಮುಕ್ತಾಯಗೊಳ್ಳಲು ೧ ವರ್ಷಕ್ಕಿಂತ ಕಡಿಮೆ ಸಮಯ ಉಳಿದಿರುವುದರಿಂದ, ಫೋಂಡಾ ಉಪಚುನಾವಣೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಬಗ್ಗೆ ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ಉಚ್ಚ ನ್ಯಾಯಾಲಯವು ಉಪಚುನಾವಣೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಈ ಉಪಚುನಾವಣೆಯಲ್ಲಿ ಭಾಜಪದಿಂದ ರಿತೇಶ್ ರವಿ ನಾಯ್ಕ್, ಕಾಂಗ್ರೆಸ್ ಪಕ್ಷದಿಂದ ಡಾ. ಕೇತನ್ ಭಾಟಿಕರ್ ಮತ್ತು ಆಮ್ ಆದ್ಮಿ ಪಕ್ಷದಿಂದ ಗಿತೇಶ್ ನಾಯ್ಕ್ ಕಣಕ್ಕಿಳಿದಿದ್ದರು. ಈ ಉಪಚುನಾವಣೆಗಾಗಿ ಕಳೆದ ಹಲವು ದಿನಗಳಿಂದ ಬಿರುಸಿನ ಪ್ರಚಾರ ನಡೆಯುತ್ತಿತ್ತು. ಮನೆ ಮನೆ ಪ್ರಚಾರ, ಮೂಲೆಯ ಸಭೆಗಳು ಮತ್ತು ಬಹಿರಂಗ ಸಭೆಗಳ ಮೂಲಕ ಅಭ್ಯರ್ಥಿಗಳು ಪ್ರಚಾರ ಕಾರ್ಯ ಪೂರ್ಣಗೊಳಿಸಿದ್ದರು. ಗೋವಾ ಭಾಜಪ ಉಸ್ತುವಾರಿ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಹ ಫೋಂಡಾದಲ್ಲಿ ಬಹಿರಂಗ ಸಭೆ ನಡೆಸಿದ್ದರು; ಆದರೆ ಈಗ ಚುನಾವಣೆ ರದ್ದಾಗಿರುವುದರಿಂದ ಅಭ್ಯರ್ಥಿಗಳ ಪ್ರಚಾರ ಮತ್ತು ಪ್ರಯತ್ನಗಳು ವ್ಯರ್ಥವಾಗಿವೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!