ಶಿಮ್ಲಾ (ಹಿಮಾಚಲ ಪ್ರದೇಶ) ಇಲ್ಲಿನ ಶ್ರೀರಾಮಮಂದಿರದ ಸಭಾಂಗಣದಲ್ಲಿ ಮುಸಲ್ಮಾನರ ವಿವಾಹದ ಪ್ರಕರಣ

ಶಿಮ್ಲಾ (ಹಿಮಾಚಲ ಪ್ರದೇಶ) – ಇಲ್ಲಿನ ಹಿಂದೂ ಸಂಘರ್ಷ ಸಮಿತಿಯು ಸೂದ್ ಸಭಾ ನಡೆಸುತ್ತಿರುವ ಶ್ರೀರಾಮಮಂದಿರದ ಸಭಾಂಗಣದಲ್ಲಿ ‘ನಿಕಾಹ್’ (ವಿವಾಹ) ಕ್ಕಾಗಿ ಮುಸಲ್ಮಾನ ಕುಟುಂಬವೊಂದು ಮಾಡಿರುವ ನೋಂದಣಿಗೆ ಆಕ್ಷೇಪ ವ್ಯಕ್ತಪಡಿಸಿದೆ. ‘ಹೀಗೇನಾದರೂ ಆದಲ್ಲಿ, ಆ ದಿನ ಅಲ್ಲಿ ಹಂದಿಗಳ ಮೆರವಣಿಗೆ ನಡೆಸಲಾಗುವುದು ಮತ್ತು ಮುಂಡನ ಮಾಡಲಾಗುವುದು’ ಎಂದು ಸಮಿತಿಯು ಎಚ್ಚರಿಕೆ ನೀಡಿದೆ. ಈ ಎಚ್ಚರಿಕೆಯ ನಂತರ ಇಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಆಡಳಿತ ವ್ಯವಸ್ಥೆಯೂ ಸಹ ಸತರ್ಕವಾಗಿದೆ.
೧. ಮಹಮ್ಮದ್ ನಾಸಿರ್ ಅವರು ಶಿಮ್ಲಾದ ಈದ್ಗಾ ಕಾಲೋನಿಯ ನಿವಾಸಿಯಾಗಿದ್ದಾರೆ. ಅವರ ಮಗಳ ನಿಕಾಹ್ ಏಪ್ರಿಲ್ ೧೧ ರಂದು ನಡೆಯಲಿದ್ದು, ಅದಕ್ಕಾಗಿ ಅವರು ಶ್ರೀರಾಮಮಂದಿರದ ಸಭಾಂಗಣವನ್ನು ಕಾಯ್ದಿರಿಸಿದ್ದಾರೆ.
೨. ಹಿಂದೂ ಸಂಘರ್ಷ ಸಮಿತಿಯ ನಾಯಕರಾದ ವಿಜಯ ಶರ್ಮಾ ಮತ್ತು ಮದನ್ ಠಾಕೂರ್ ಅವರು, ಮಂದಿರದ ಸ್ವತ್ತಿನ ಜಾಗದಲ್ಲಿ ಮುಸಲ್ಮಾನ ಕುಟುಂಬದ ವಿವಾಹವು ನಮಗೆ ಅಮಾನ್ಯವಾಗಿದೆ ಎಂದು ಹೇಳಿದ್ದಾರೆ. ‘ಸಂಬಂಧಪಟ್ಟ ಕುಟುಂಬವು ಈ ವಿವಾಹವನ್ನು ಮಸೀದಿ ಅಥವಾ ಮದರಸಾದಲ್ಲಿ ಮಾಡಿಕೊಳ್ಳಲಿ, ಮಂದಿರದ ಮಾಲೀಕತ್ವದ ಜಾಗದಲ್ಲಲ್ಲ’, ಎಂದು ಅವರು ತಿಳಿಸಿದ್ದಾರೆ.
೩. ಸೂದ್ ಸಭಾ ಶಿಮ್ಲಾದ ಅಧ್ಯಕ್ಷರಾದ ರಾಜೀವ್ ಸೂದ್ ಅವರು ಮಾತನಾಡಿ, ಈ ಹಿಂದೆಯೂ ಶ್ರೀರಾಮಮಂದಿರದ ಸಭಾಂಗಣದಲ್ಲಿ ಮುಸಲ್ಮಾನ ಕುಟುಂಬಗಳ ನಿಕಾಹಗಳು ನಡೆದಿವೆ. ದೇಶದ ಸಂವಿಧಾನ ಮತ್ತು ಸೂದ್ ಸಭಾದ ನಿಯಮಗಳು ಧರ್ಮದ ಆಧಾರದ ಮೇಲೆ ಯಾರನ್ನೂ ತಡೆಯಲು ಅನುಮತಿ ನೀಡುವುದಿಲ್ಲ. ಶ್ರೀರಾಮಮಂದಿರದ ಸಭಾಂಗಣದಲ್ಲಿ ವಿವಾಹವೇ ಇರಲಿ ಅಥವಾ ನಿಕಾಹ ಇರಲಿ, ಇಲ್ಲಿ ಮದ್ಯ ಮತ್ತು ಮಾಂಸಾಹಾರದ ಮೇಲೆ ಮೊದಲಿನಿಂದಲೂ ನಿಷೇಧವಿದೆ ಮತ್ತು ಅದು ಮುಂದೆಯೂ ಮುಂದುವರಿಯಲಿದೆ. ಇಲ್ಲಿ ಸ್ವಚ್ಛತೆಗೆ ವಿಶೇಷ ಗಮನ ನೀಡಲಾಗುತ್ತದೆ ಮತ್ತು ಕಳೆದ ೫ ವರ್ಷಗಳಲ್ಲಿ ಮುಸಲ್ಮಾನ ಕುಟುಂಬಗಳ ೧೫ ಕ್ಕೂ ಹೆಚ್ಚು ನಿಕಾಹಗಳು ಇಲ್ಲಿ ನಡೆದಿವೆ. ಆದರೂ ಈ ವಿಷಯದ ಬಗ್ಗೆ ಅಪ್ರಸನ್ನತೆ ವ್ಯಕ್ತವಾಗುತ್ತಿದ್ದರೆ, ಕಾರ್ಯಸಮಿತಿಯ ಸಭೆಯಲ್ಲಿ ಅದರ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!