​ಹಾಸನದಲ್ಲಿ ಕ್ಷುಲ್ಲಕ ವಿಚಾರಕ್ಕೆ ಮುಸ್ಲಿಂ ಗುಂಪಿನಿಂದ ಹಿಂದೂ ದಂಪತಿಗಳ ಮೇಲೆ ಪ್ರಾಣಾಂತಿಕ ಹಲ್ಲೆ

ಹಾಸನ – ಅರಸೀಕೆರೆಯಲ್ಲಿ ಕ್ಷುಲ್ಲಕ ವಿವಾದದ ನಂತರ ಹಿಂದೂ ದಂಪತಿಗಳ ಮೇಲೆ ಮುಸ್ಲಿಂ ಗುಂಪಿನಿಂದ ಪ್ರಾಣಾಂತಿಕ ದಾಳಿ ನಡೆಸಲಾಗಿದೆ. ಎ.ಪಿ.ಎಂ.ಸಿ. ಗೇಟ್ ಪರಿಸರದಲ್ಲಿ ದಂಪತಿಗಳನ್ನು ತಡೆದು ಅವರ ಮೇಲೆ ಹಲ್ಲೆ ನಡೆಸಲಾಗಿದ್ದು, ಅದರಲ್ಲಿ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದೆ. ಈ ಘಟನೆಯ ನಂತರ ಏಪ್ರಿಲ್ ೪ ರಂದು ತೀವ್ರ ಪ್ರತಿಭಟನೆಗಳು ನಡೆದವು. ಹಿಂದೂ ಸಂಘಟನೆಗಳು ಮತ್ತು ಸ್ಥಳೀಯ ನಾಗರಿಕರ ಗುಂಪುಗಳು ಅರಸೀಕೆರೆಯಲ್ಲಿ ಬಂದ್‌ಗೆ ಕರೆ ನೀಡಿದ್ದವು, ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಅನೇಕ ಅಂಗಡಿಕಾರರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿದ್ದರು. ಪ್ರತಿಭಟನೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿ ಘೋಷಣೆಗಳನ್ನು ಕೂಗಿದರು. ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ನಂತರ ಜನರು ಎ.ಪಿ.ಎಂ.ಸಿ. ಗೇಟ್‌ವರೆಗೆ ಮೆರವಣಿಗೆ ನಡೆಸಿದರು.

ಏನಿದು ಘಟನೆ ?

ಸಂಬಂಧಪಟ್ಟ ದಂಪತಿಗಳು ಅರಸೀಕೆರೆಯಲ್ಲಿ ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿ ದೇವಸ್ಥಾನದ ವಾರ್ಷಿಕ ರಥೋತ್ಸವಕ್ಕಾಗಿ ಬಂದಿದ್ದರು. ಪೂಜೆ ಮುಗಿಸಿ ಅವರು ದ್ವಿಚಕ್ರ ವಾಹನದಲ್ಲಿ ಹಿಂತಿರುಗುತ್ತಿದ್ದಾಗ ಮುಖ್ಯ ಆರೋಪಿ ಸುಫಿಯಾನ್ ಸಮೀವುಲ್ಲಾ ಅವರನ್ನು ತಡೆದಿದ್ದಾನೆ. ಸುಫಿಯಾನ್ ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದನು ಮತ್ತು ಅವನ ವಾಹನವು ದಂಪತಿಗಳ ವಾಹನಕ್ಕೆ ಡಿಕ್ಕಿ ಹೊಡೆದಿದೆ. ದಂಪತಿಗಳು ಅವನ ವಾಹನ ಚಾಲನೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ವಿವಾದ ಆರಂಭವಾಯಿತು ಮತ್ತು ಅದು ಶೀಘ್ರದಲ್ಲೇ ಹಿಂಸಾತ್ಮಕವಾಯಿತು. ಆರೋಪಿಯು ಪತಿಯನ್ನು ದ್ವಿಚಕ್ರ ವಾಹನದಿಂದ ಕೆಳಕ್ಕೆ ಎಳೆದು ರಸ್ತೆಯಲ್ಲೇ ಹೊಡೆಯಲು ಪ್ರಾರಂಭಿಸಿದನು. ಈ ಸಮಯದಲ್ಲಿ ಪತ್ನಿ ವಿನಂತಿಸಿಕೊಂಡರೂ ಹಲ್ಲೆ ನಿಲ್ಲಲಿಲ್ಲ. ಇದರ ನಂತರ ಸುಫಿಯಾನ್ ತನ್ನ ಸಹಚರರನ್ನು ಕರೆದನು. ಅವರು ಸ್ವಲ್ಪ ಸಮಯದಲ್ಲೇ ಸ್ಥಳಕ್ಕೆ ತಲುಪಿ ಹಲ್ಲೆ ಮಾಡಲಾರಂಭಿಸಿದರು. ಸುತ್ತಮುತ್ತಲಿದ್ದ ಜನರು ಹಲ್ಲೆಯನ್ನು ತಡೆಯುವ ಬದಲು ಘಟನೆಯನ್ನು ಚಿತ್ರೀಕರಿಸಿದರು. ನಂತರ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಯಿತು, ಇದರಿಂದ ಆಕ್ರೋಶ ಇನ್ನಷ್ಟು ಹೆಚ್ಚಾಯಿತು. ಪೊಲೀಸರು ಈ ಪ್ರಕರಣದಲ್ಲಿ ಅಪರಾಧ ದಾಖಲಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಆರೋಪಿಯ ಕಾಂಗ್ರೆಸ್ಸಿನ ಸಂಬಂಧ

ಆರೋಪಿ ಸುಫಿಯಾನ್ ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರ ಆಪ್ತರೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಲಾಗುತ್ತಿದೆ. (ಹೀಗಿರುವುದಾದರೆ, ಆರೋಪಿಗಳಿಗೆ ಶಿಕ್ಷೆಯಾದರೂ ಏನಾದೀತು? – ಸಂಪಾದಕರು). ಆದ್ದರಿಂದ ರಾಜಕೀಯ ಪ್ರಭಾವದಿಂದಾಗಿ ಕ್ರಮ ಕೈಗೊಳ್ಳುವುದು ವಿಳಂಬವಾಗುವ ಸಾಧ್ಯತೆಯನ್ನು ವ್ಯಕ್ತಪಡಿಸಲಾಗುತ್ತಿದೆ. ಅನೇಕ ಸ್ಥಳೀಯ ನಾಗರಿಕರು ಪೊಲೀಸರ ಕ್ರಮದ ಬಗ್ಗೆ ಪ್ರಶ್ನೆ ಎತ್ತಿದ್ದು, ಎಲ್ಲಾ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಹಿಂದೂಗಳಿಗೆ ಮತಾಂಧ ಮುಸ್ಲಿಮರಿಂದ ಹೊಡೆತ ತಿನ್ನುತ್ತಲೇ ಇರಬೇಕಾಗಿದೆ !