
ಭಾಗ್ಯನಗರ (ತೆಲಂಗಾಣ) – ಕುಕಟಪಲ್ಲಿಯಲ್ಲಿ ನವಾಜ್ ಎಂಬಾತನು ಹಿಂದೂ ಹೆಸರನ್ನು ಇಟ್ಟುಕೊಂಡು ಓರ್ವ ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಆಕೆಯನ್ನು ವಿವಾಹವಾದನು. ನವಾಜ್ ವಿವಾಹದ ಮೊದಲ ರಾತ್ರಿಯಂದೇ ತನ್ನ ಗೆಳೆಯರೊಂದಿಗೆ ಸೇರಿ ಹಿಂದೂ ಯುವತಿಯ ಮೇಲೆ ಸಾಮೂಹಿಕ ಬಲಾತ್ಕಾರ ಎಸಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
೧. ವಿವಾಹದ ಮೊದಲ ರಾತ್ರಿ ಕೊಠಡಿಯನ್ನು ಅಲಂಕರಿಸುವ ನೆಪದಲ್ಲಿ ಆತನು ತನ್ನ ಗೆಳೆಯರನ್ನು ಕರೆಸಿದ್ದನು. ಸಂತ್ರಸ್ತೆಯು ತನ್ನ ದೂರಿನಲ್ಲಿ, ‘ನಾನು ಕೊಠಡಿಯೊಳಗೆ ಬರುತ್ತಿದ್ದಂತೆಯೇ ನವಾಜ್ ತನ್ನ ಗೆಳೆಯರಾದ ಮುನ್ನವರ್, ಶಾರುಖ್, ಇಸ್ಮಾಯಿಲ್, ಇರ್ಫಾನ್ ಮತ್ತು ಸಮೀರ್ ಎಂಬುವವರೊಂದಿಗೆ ಸೇರಿ ಸಾಮೂಹಿಕ ಬಲಾತ್ಕಾರ ಮಾಡಿದನು. ಈ ಘಟನೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದನು’ ಎಂದು ತಿಳಿಸಿದ್ದಾಳೆ.
೨. ಮದುವೆಯಾದ ಕೆಲವು ದಿನಗಳ ನಂತರ ಸಂತ್ರಸ್ತೆಗೆ ತಾನು ನವಾಜ್ ನ ಮೂರನೇ ಪತ್ನಿ ಎಂಬ ವಿಷಯ ತಿಳಿಯಿತು. ಮದುವೆಗೆ ಮುಂಚೆ ಮತ್ತು ಮದುವೆಯ ನಂತರವೂ ನವಾಜ್ ಸಂತ್ರಸ್ತೆಯಿಂದ ಬಹಳಷ್ಟು ಹಣ ಮತ್ತು ಚಿನ್ನದ ಆಭರಣಗಳನ್ನು ಪಡೆದಿದ್ದನು. ಅಷ್ಟೇ ಅಲ್ಲದೆ, ವಿವಿಧ ಕಾರಣಗಳನ್ನು ನೀಡಿ ಸಂತ್ರಸ್ತೆಯ ಕುಟುಂಬದವರಿಂದಲೂ ಹಣ ಪಡೆದಿದ್ದಾನೆಂಬ ಆರೋಪವಿದೆ.
೩. ಇಷ್ಟೇ ಅಲ್ಲದೆ ಸಂತ್ರಸ್ತೆಯ ಮನೆ ಹಾಗೂ ಆಕೆಯ ಆಭರಣಗಳನ್ನೂ ಸಹ ಅಡವಿಟ್ಟು ಈತ ಹಣ ಪಡೆದಿದ್ದಾನೆ. ಮದುವೆಯ ನಂತರ ಸಂತ್ರಸ್ತೆಗೆ ಗೋಮಾಂಸ ತಿನ್ನಲು ಮತ್ತು ‘ಕಲ್ಮಾ’ (ಅಲ್ಲಾನನ್ನು ಸ್ತುತಿಸುವ ವಾಕ್ಯಗಳು) ಪಠಿಸಲು ಒತ್ತಡ ಹೇರುತ್ತಿದ್ದನು ಎಂದು ಸಂತ್ರಸ್ತೆಯು ಆರೋಪಿಸಿದ್ದಾಳೆ.
ಸಂಪಾದಕೀಯ ನಿಲುವುಇಂತಹವರ ವಿರುದ್ಧ ತ್ವರಿತ ಗತಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿಧಿಸಬೇಕೆಂದು ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯಪಡುವಂತದ್ದೇನೂ ಇಲ್ಲ ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !