ಪನ್ವೇಲ್-ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮಾರ್ಗದಲ್ಲಿನ ಘಟನೆ

ಮುಂಬಯಿ, ಏಪ್ರಿಲ್ 3 (ವಾರ್ತೆ) – ಪನ್ವೇಲ್‌ನಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ಗೆ ಸಂಚರಿಸುವ ಲೋಕಲ್ ರೈಲುಗಳ ಮಹಿಳಾ ಪ್ರಥಮ ದರ್ಜೆ ಬೋಗಿಗಳಲ್ಲಿ ಸೌಂದರ್ಯವರ್ಧಕಗಳನ್ನು ಮಾರಾಟ ಮಾಡುವ ನೆಪದಲ್ಲಿ ಪುರುಷ ಮಾರಾಟಗಾರರು ರಾಜಾರೋಷವಾಗಿ ನುಗ್ಗುತ್ತಿದ್ದಾರೆ. ಮಹಿಳಾ ಪ್ರಯಾಣಿಕರೊಬ್ಬರು ಈ ಮಾಹಿತಿಯನ್ನು ‘ಸನಾತನ ಪ್ರಭಾತ’ ಪ್ರತಿನಿಧಿಗೆ ನೀಡಿದ್ದಾರೆ. ಈ ರೀತಿಯ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ, ರೈಲ್ವೆ ಪೊಲೀಸರು ಮಾತ್ರ ಇದನ್ನು ನಿರ್ಲಕ್ಷಿಸುತ್ತಿದ್ದಾರೆ. ಮಹಿಳಾ ಪ್ರಯಾಣಿಕರೊಬ್ಬರು ಬೋಗಿಯೊಳಗೆ ಬಂದ ಮಾರಾಟಗಾರರ ಹೆಸರನ್ನು ಕೇಳಿದಾಗ, ಅವರು ಮುಸ್ಲಿಮರು ಎಂಬುದು ತಿಳಿದುಬಂದಿದೆ. ಮಹಿಳೆಯರು ಈ ಮಾರಾಟಗಾರರಿಂದ ವಸ್ತುಗಳನ್ನು ಖರೀದಿಸುತ್ತಿದ್ದರು.
ಹಳೆಯ ಘಟನೆಗಳ ನಂತರವೂ ರೈಲ್ವೆ ಪೊಲೀಸರ ನಿರ್ಲಕ್ಷ್ಯ!
18 ಡಿಸೆಂಬರ್ 2025 ರಂದು ಪನ್ವೇಲ್‌ನಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ಗೆ ಹೋಗುತ್ತಿದ್ದ ಲೋಕಲ್ ರೈಲಿನ ಮಹಿಳಾ ಬೋಗಿಗೆ ನುಗ್ಗಿದ್ದ ಶೇಖ್ ಅಖ್ತರ್ ಎಂಬ 50 ವರ್ಷದ ವ್ಯಕ್ತಿಯು, 18 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಚಲಿಸುವ ರೈಲಿನಿಂದ ಕೆಳಕ್ಕೆ ತಳ್ಳಿದ್ದನು. ‘ಇಂತಹ ಗಂಭೀರ ಘಟನೆ ನಡೆದ ನಂತರವೂ ಮಹಿಳಾ ಬೋಗಿಗಳಿಗೆ ನುಗ್ಗುವ ಪುರುಷ ಮಾರಾಟಗಾರರ ವಿರುದ್ಧ ರೈಲ್ವೆ ಪೊಲೀಸರು ತೋರುತ್ತಿರುವ ನಿರ್ಲಕ್ಷ್ಯವು, ಭವಿಷ್ಯದಲ್ಲಿ ಯಾರಾದರೂ ಜೀವ ಕಳೆದುಕೊಳ್ಳಲು ಕಾರಣವಾಗಬಹುದು’ ಎಂದು ಮಹಿಳಾ ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸಂಪಾದಕೀಯ ನಿಲುವುಇಂತಹವರನ್ನು ಸಮಯಕ್ಕೆ ಸರಿಯಾಗಿ ಹೊರಹಾಕದಿರುವುದು ಮತ್ತು ಅವರ ಮೇಲೆ ಕ್ರಮ ಕೈಗೊಳ್ಳದಿರುವುದು ರೈಲ್ವೆ ಆಡಳಿತ ಮಂಡಳಿಯ ಗಂಭೀರ ತಪ್ಪಾಗಿದೆ. ಈ ವಿಷಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆಯೂ ಕ್ರಮ ಕೈಗೊಳ್ಳಬೇಕು. |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!