
ಮುಂಬಯಿ – ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನದ ಇಬ್ಬರು ವಿಶ್ವಸ್ತರು ಮತ್ತು ಮೂವರು ದೂರುದಾರರು, ಕಾರ್ಯಕಾರಿ ಅಧಿಕಾರಿ ವೀಣಾ ಪಾಟೀಲ್ ಮತ್ತು ಉಪಕಾರ್ಯಕಾರಿ ಅಧಿಕಾರಿ ಸಂದೀಪ ರಾಠೋಡ ಅವರ ವಿರುದ್ಧ ಭ್ರಷ್ಟಾಚಾರ ಮತ್ತು ಅಕ್ರಮಗಳ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಕಾನೂನು ಮತ್ತು ನ್ಯಾಯ ಇಲಾಖೆಗೆ ದೂರು ನೀಡಲಾಗಿದೆ. ಆಡಳಿತಾತ್ಮಕ ಕೆಲಸಗಳಲ್ಲಿ ಪಾರದರ್ಶಕತೆ ಇಲ್ಲದಿರುವುದು, ಅಧಿಕಾರದ ದುರ್ಬಳಕೆ ಮತ್ತು ಆರ್ಥಿಕ ವ್ಯವಹಾರಗಳಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪವನ್ನು ಈ ಅಧಿಕಾರಿಗಳ ಮೇಲೆ ಹೊರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಕಾರ್ಯಕಾರಿ ಮತ್ತು ಉಪಕಾರ್ಯಕಾರಿ ಅಧಿಕಾರಿಗಳಿಗೆ ೭ ದಿನಗಳಲ್ಲಿ ಸ್ಪಷ್ಟನೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.
ಮೇಲಿನ ಅಧಿಕಾರಿಗಳಿಗೆ ಕಾನೂನು ಮತ್ತು ನ್ಯಾಯ ಇಲಾಖೆಯು ಮಂದಿರದ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳು, ಟೆಂಡರ್ ಉಪಸಮಿತಿಯ ಸಭೆಗಳ ನಡಾವಳಿಗಳು, ವಿಶ್ವಸ್ತ ಮಂಡಳಿಯು ತೆಗೆದುಕೊಂಡ ನಿರ್ಧಾರಗಳ ದಾಖಲೆಗಳು, ಆಡಳಿತಾತ್ಮಕ ಮಟ್ಟದಲ್ಲಿ ಹೊರಡಿಸಲಾದ ಪ್ರಮುಖ ಆದೇಶಗಳು, ಆಹಾರ ಮತ್ತು ಮಹಾಪ್ರಸಾದಕ್ಕೆ ಸಂಬಂಧಿಸಿದ ಗುತ್ತಿಗೆಗಳು ಹಾಗೂ ಅವುಗಳ ಒಪ್ಪಂದ ಇತ್ಯಾದಿಗಳನ್ನು ತಕ್ಷಣವೇ ಸಲ್ಲಿಸುವಂತೆ ಆದೇಶಿಸಿದೆ. ಸ್ಪಷ್ಟನೆಯಲ್ಲಿ ತೃಪ್ತಿಕರ ಉತ್ತರ ಸಿಗದಿದ್ದರೆ, ಕಠಿಣ ಆಡಳಿತಾತ್ಮಕ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಕಾನೂನು ಮತ್ತು ನ್ಯಾಯ ಇಲಾಖೆಯು ಈ ಆರೋಪಗಳ ಪ್ರಾಥಮಿಕ ದಾಖಲೆಯನ್ನು ಮಾಡಿಕೊಂಡಿದ್ದು, ಸಮಗ್ರ ತನಿಖೆಯ ಸೂಚನೆ ನೀಡಿದೆ. ಕೆಲ ದಿನಗಳ ಹಿಂದಷ್ಟೇ ದೇವಸ್ಥಾನದಲ್ಲಿ ನಡೆದ ಕಳ್ಳತನದ ಪ್ರಕರಣದಲ್ಲಿ ೮ ಮಂದಿ ನೌಕರರನ್ನು ಬಂಧಿಸಲಾಗಿತ್ತು.
ಸಂಪಾದಕೀಯ ನಿಲುವುಶ್ರೀ ಗಣೇಶನ ಚರಣಗಳಲ್ಲಿ ಅರ್ಪಣೆಯಾಗುವ ದೇಣಿಗೆಯ ವಿನಿಯೋಗ ಸರಿಯಾದ ರೀತಿಯಲ್ಲಿ ಆಗುತ್ತಿದೆಯೇ? ಎಂಬ ಪ್ರಶ್ನೆ ಈಗ ನಿರ್ಮಾಣವಾಗಿದೆ. ದೇವಸ್ಥಾನಗಳ ಸರಕಾರೀಕರಣದ ದುಷ್ಪರಿಣಾಮವೇ ಇದು. ದೇವಸ್ಥಾನಗಳನ್ನು ಭಕ್ತರ ಕೈಗೆ ನೀಡಿದರೆ ಹೀಗಾಗುವುದಿಲ್ಲ. |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !