|

ಮುಂಬಯಿ – ಅಂಡಮಾನಿನ ಸೆಲ್ಯುಲರ್ ಕಾರಾಗೃಹದಲ್ಲಿ ಸ್ವಾತಂತ್ರ್ಯವೀರ ಸಾವರಕರ್, ಅವರ ಹಿರಿಯ ಸಹೋದರ ಬಾಬಾರಾವ್ ಸಾವರಕರ್ ಮತ್ತು ಇತರ ಎಲ್ಲಾ ಕ್ರಾಂತಿಕಾರಿಗಳನ್ನು ಎತ್ತುಗಳ ಬದಲಿಗೆ ಕೋಲು (ಎಣ್ಣೆ ತೆಗೆಯುವ ಗಾಣ) ಕಟ್ಟಲಾಗುತ್ತಿತ್ತು. 8 ಗಂಟೆಗಳಲ್ಲಿ 30 ಪೌಂಡ್, ಅಂದರೆ ಸುಮಾರು ಹದಿನಾಲ್ಕುವರೆ ಲೀಟರ್ ಎಣ್ಣೆಯನ್ನು ತೆಗೆಯಬೇಕಾಗುತ್ತಿತ್ತು. ಎಣ್ಣೆ ಪೂರ್ಣಗೊಳ್ಳದಿದ್ದರೆ ವಿರಾಮವಿಲ್ಲದೆ ಕೋಲು ತಿರುಗಿಸಬೇಕಾಗುತ್ತಿತ್ತು ಮತ್ತು ಅಮಾನುಷ ಶಿಕ್ಷೆಗಳನ್ನೂ ನೀಡಲಾಗುತ್ತಿತ್ತು. ಈ ಭೀಕರ ಕಿರುಕುಳಕ್ಕೆ ಬೇಸತ್ತು ಇಂದುಭೂಷಣ ರಾಯ್ ಅವರಂತಹ ಅನೇಕ ಕ್ರಾಂತಿಕಾರಿಗಳು ಆತ್ಮಹತ್ಯೆ ಮಾಡಿಕೊಂಡರೆ, ಉಲ್ಲಾಸಕರ್ ದತ್ ಅವರಂತಹ ಅನೇಕ ವೀರರ ಮಾನಸಿಕ ಸಮತೋಲನ ತಪ್ಪಿತು. ಇಂತಹ ಅಸಂಖ್ಯಾತ ಕ್ರಾಂತಿಕಾರಿಗಳ ಅಪಾರ ತ್ಯಾಗ ಮತ್ತು ಬಲಿದಾನದಿಂದಲೇ ನಮಗೆ ಸ್ವಾತಂತ್ರ್ಯ ದೊರೆತಿದೆ. ಅವರ ಅಂದಿನ ಸ್ಥಿತಿಯನ್ನು ಅನುಭವಿಸಲು ‘ಸ್ವಾತಂತ್ರ್ಯವೀರ ಸಾವರಕರ್ ರಾಷ್ಟ್ರೀಯ ಸ್ಮಾರಕವು’ ರಾಷ್ಟ್ರಪ್ರೇಮಿಗಳಿಗೆ ಕೋಲು ತಿರುಗಿಸುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಈ ಉಪಕ್ರಮದಲ್ಲಿ ಭಾಗವಹಿಸುವವರಿಗೆ ಗರಿಷ್ಠ 15 ನಿಮಿಷಗಳ ಕಾಲ ಕೋಲು ತಿರುಗಿಸುವ ಅವಕಾಶ ಸಿಗಲಿದೆ. ಕ್ರಾಂತಿಕಾರಿಗಳು ಅನುಭವಿಸಿದ ಯಾತನೆಗಳ ಅನುಭವ ಸ್ವಲ್ಪವಾದರೂ ಆಗಲಿ ಎಂಬ ಉದ್ದೇಶದಿಂದ ಕಾಲಿಗೆ ಬೇಡಿಗಳನ್ನು ಧರಿಸಿಯೇ ಕೋಲು ತಿರುಗಿಸಬೇಕಿದೆ. ದಾದರ್ ನಲ್ಲಿರುವ ಸ್ವಾತಂತ್ರ್ಯವೀರ ಸಾವರಕರ್ ರಾಷ್ಟ್ರೀಯ ಸ್ಮಾರಕದಲ್ಲಿ ಏಪ್ರಿಲ್ 4 ಮತ್ತು 5 ರಂದು ಬೆಳಿಗ್ಗೆ 11 ರಿಂದ ಸಂಜೆ 7 ರವರೆಗೆ ಈ ಉಪಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ‘ಗೂಗಲ್ ಫಾರ್ಮ್’ ಭರ್ತಿ ಮಾಡುವ ಮೂಲಕ ಸಮಯವನ್ನು ಕಾಯ್ದಿರಿಸಬೇಕೆಂದು ವಿನಂತಿಸಲಾಗಿದೆ. ನೋಂದಣಿ ಬಗ್ಗೆ ಸಂಶಯಗಳಿದ್ದರೆ (ಸಂಶಯ ನಿವಾರಣೆಗಾಗಿ) 922007038೬ ಈ ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.
ಕಾಲಿಗೆ ಬೇಡಿಗಳನ್ನು ಧರಿಸಬೇಕಾಗಿರುವುದರಿಂದ ಪುರುಷರು ಪೂರ್ಣ ಪ್ಯಾಂಟ್ ಮತ್ತು ಮಹಿಳೆಯರು ಸಲ್ವಾರ್ ಧರಿಸಿ ಬರಬೇಕು, ಇದರಿಂದ ಕಾಲಿಗೆ ಗಾಯವಾಗುವುದಿಲ್ಲ ಎಂದು ಸ್ಮಾರಕದ ವತಿಯಿಂದ ತಿಳಿಸಲಾಗಿದೆ.
| ‘ಗೂಗಲ್ ಫಾರ್ಮ್’ ಲಿಂಕ್ – https://forms.gle/SVexjX6RbcNCTJFz6 |
ಈ ಉಪಕ್ರಮದಲ್ಲಿ ಭಾಗವಹಿಸಿದ ಬಗ್ಗೆ ಪ್ರಮಾಣಪತ್ರವನ್ನು ಅದೇ ದಿನ ನೀಡಲಾಗುವುದು. ಕೋಲು ತಿರುಗಿಸಿ ಬಂದ ಎಣ್ಣೆಯನ್ನು ಸಹ ಕಾರ್ಯಕ್ರಮದ 2 ದಿನಗಳ ನಂತರ ಎಲ್ಲರಿಗೂ ನೀಡಲಾಗುವುದು. ಸ್ವಾತಂತ್ರ್ಯದ ನೈಜ ಇತಿಹಾಸವನ್ನು ತಿಳಿದುಕೊಳ್ಳಲು ಈ ಉಪಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸರಕಾರದ ಮಾನ್ಯತೆ ಪಡೆದ ಈ ಸ್ಮಾರಕದ ವತಿಯಿಂದ ಕರೆ ನೀಡಲಾಗಿದೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ