ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಲೇ ಬಾಲೆನ್ ಶಾಹರವರ ದಿಟ್ಟ ಕ್ರಮ!

ಕಾಠಮಾಂಡು (ನೇಪಾಳ) – ನೇಪಾಳದಲ್ಲಿ ೩೫ ವರ್ಷದ ‘ರಾಪರ್’ (ಆಧುನಿಕ ಪದ್ಧತಿಯ ಸಂಗೀತ ಪ್ರಸ್ತುತ ಪಡಿಸುವವರು) ಬಾಲೆನ್ ಶಾಹರವರು ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿಯವರನ್ನು ಮಾರ್ಚ್ ೨೮ ರ ಮುಂಜಾನೆ ಅವರ ನಿವಾಸದಿಂದ ಬಂಧಿಸಿದ್ದಾರೆ. ಸೆಪ್ಟೆಂಬರ್ ೨೦೨೫ ರಲ್ಲಿ ನೇಪಾಳದಲ್ಲಿ ನಡೆದ ‘ಜೆನ್ ಜೀ’ (ಜನರೇಷನ್ ಝೆಡ್ – ೧೯೯೬ ರಿಂದ ೨೦೧೦ ರ ಅವಧಿಯಲ್ಲಿ ಜನಿಸಿದ ಪೀಳಿಗೆ) ಪ್ರತಿಭಟನೆಯಲ್ಲಿ ಅನೇಕ ನಾಗರಿಕರ ಸಾವಿಗೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಪ್ರಕರಣದಲ್ಲಿ ನೇಪಾಳದ ಮಾಜಿ ಗೃಹ ಸಚಿವರಾದ ರಮೇಶ ಲೇಖಕರವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
🚨 Big political shake-up in Nepal
Former PM K. P. Sharma Oli arrested over deadly Gen Z protests; just a day after Balendra Shah took oath as PM.
⚖️ Oli calls it “vindictive”, vows legal fight
🔥 #GenZ Protests had left 70+ dead, including many youth
PC: @airnewsalerts pic.twitter.com/XT95tfBQzT
— Sanatan Prabhat (@SanatanPrabhat) March 28, 2026
ಏನಿದು ‘ಜೆನ್ ಜೀ’ ಚಳುವಳಿ?
ಅಂದಿನ ಓಲಿ ಸರಕಾರವು ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಸೇರಿದಂತೆ ಒಟ್ಟು ೨೬ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಿತ್ತು. ಈ ನಿಷೇಧದ ವಿರುದ್ಧ ಸೆಪ್ಟೆಂಬರ್ ೨೦೨೫ ರಲ್ಲಿ ನೇಪಾಳದ ಯುವಕರು ಓಲಿ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು. ಇದನ್ನೆ ‘ಜೆನ್ ಜೀ’ ಚಳುವಳಿ ಎಂದು ಹೆಸರಿಸಲಾಯಿತು. ಡಿಜಿಟಲ್ ಸ್ವಾತಂತ್ರ್ಯಕ್ಕಾಗಿ ಆರಂಭವಾದ ಚಳುವಳಿಯು ನಂತರ ವ್ಯಾಪಕ ಸರಕಾರವಿರೋಧಿ ಆಂದೋಲನವಾಗಿ ರೂಪಾಂತರಗೊಂಡಿತು. ಈ ಪ್ರತಿಭಟನೆಯಲ್ಲಿ ಅನೇಕ ಪ್ರತಿಭಟನಾಕಾರರು ಸಂಸತ್ ಭವನಕ್ಕೂ ನುಗ್ಗಿದ್ದರು. ಆ ನಂತರ ನಡೆದ ಹಿಂಸಾಚಾರದಲ್ಲಿ ಅನೇಕರು ಸಾವನ್ನಪ್ಪಿದ್ದು, ೨ ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಆ ನಂತರ ಅಂದಿನ ಓಲಿ ಸರ್ಕಾರವು ಹಿಂದೆ ಸರಿದು ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನು ಹಿಂಪಡೆದಿತ್ತು.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ೪ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಮುಖ್ಯ ಆರೋಪಿಗಳ ಬಂಧನ!