ತರಗತಿಯಲ್ಲೇ ವಿದ್ಯಾರ್ಥಿನಿಗೆ ವಿವಾಹದ ಪ್ರಸ್ತಾವನೆ ಇಟ್ಟ ಮುಸ್ಲಿಂ ಪ್ರಾಧ್ಯಾಪಕ !

  • ಕಾಮುಕ ಮುಸ್ಲಿಂ ಪ್ರಾಧ್ಯಾಪಕ

  • ವಿದ್ಯಾರ್ಥಿಗಳಿಂದ ಪ್ರಾಧ್ಯಾಪಕನಿಗೆ ಧರ್ಮದೇಟು !

ಬೆಂಗಳೂರು – ನಗರದ ‘ಸಿದ್ಧಾರ್ಥ ವೈದ್ಯಕೀಯ ಕಾಲೇಜಿ’ನಲ್ಲಿ ಪ್ರಾಧ್ಯಾಪಕ ಅಬ್ದುಲ್ ಎಂಬಾತ ಎಂಬಿಬಿಎಸ್ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಗೆ ತುಂಬಿದ ತರಗತಿಯಲ್ಲಿಯೇ ವಿವಾಹದ ಪ್ರಸ್ತಾವನೆ ಮಾಡಿದ್ದಾನೆ. ಈ ಕೃತ್ಯದಿಂದ ರೊಚ್ಚಿಗೆದ್ದ ಸಂಬಂಧಪಟ್ಟ ವಿದ್ಯಾರ್ಥಿನಿ ಮತ್ತು ಆಕೆಯ ಸಹಪಾಠಿಗಳು ಪ್ರಾಧ್ಯಾಪಕನಿಗೆ ಕಾಲೇಜು ಆವರಣದಲ್ಲೇ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಇಡೀ ಘಟನೆಯ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಶೈಕ್ಷಣಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. (ಇಂತಹ ನೈತಿಕತೆಯಿಲ್ಲದ ಶಿಕ್ಷಕರು ವಿದ್ಯಾರ್ಥಿಗಳಿಗೆ ನೈತಿಕತೆಯ ಪಾಠವನ್ನು ಏನು ಹೇಳಿಕೊಡುತ್ತಾರೆ ? ಇಂತಹ ಶಿಕ್ಷಕರಿಂದಲೇ ಶಿಕ್ಷಣ ಕ್ಷೇತ್ರ ಅಧೋಗತಿಗೆ ತಲುಪಿದೆ ಎಂದರೆ ತಪ್ಪಾಗಲಾರದು ! – ಸಂಪಾದಕರು)

೧. ಈ ಬಗ್ಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಕಾಲೇಜಿನಲ್ಲಿ ನಿಯಮಿತ ತರಗತಿಗಳು ನಡೆಯುತ್ತಿರುವಾಗ ಈ ಘಟನೆ ನಡೆದಿದೆ. ಆರೋಪಿ ಪ್ರಾಧ್ಯಾಪಕ ತರಗತಿಯಲ್ಲಿ ಪಾಠ ಮಾಡುತ್ತಿರುವಾಗ ಏಕಾಏಕಿ ವಿಷಯಾಂತರ ಮಾಡಿ ವಿದ್ಯಾರ್ಥಿನಿಯೊಬ್ಬಳ ಮುಂದೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಆರಂಭಿಸಿದನು. ‘ನಿಮ್ಮ ತರಗತಿಯ ಅತ್ಯಂತ ಪ್ರಮುಖ ಹುಡುಗಿಯರಲ್ಲೊಬ್ಬಳಿಗೆ ನಾನು ವಿವಾಹದ ಪ್ರಸ್ತಾವನೆ ಮಾಡಬೇಕೆಂದಿದ್ದೇನೆ’ ಎಂದು ಪ್ರಾಧ್ಯಾಪಕ ಇಡೀ ತರಗತಿಯ ಮುಂದೆ ಬಹಿರಂಗವಾಗಿ ಹೇಳಿದನು. ಈ ವಿಚಾರವಾಗಿ ಪ್ರಾಧ್ಯಾಪಕ ಹಾಗೂ ಆ ವಿದ್ಯಾರ್ಥಿನಿ ನಡುವೆ ವಾಗ್ವಾದ ಶುರುವಾಯಿತು. ಈ ಘಟನೆಯ ವಿಡಿಯೋ ಕೂಡ ಹೊರಬಿದ್ದಿದೆ.

೨. ಪ್ರಾಧ್ಯಾಪಕನ ಈ ವರ್ತನೆಯಿಂದ ತರಗತಿಯ ವಾತಾವರಣ ತೀವ್ರ ಉದ್ವಿಗ್ನಗೊಂಡಿತು. ಪ್ರಾಧ್ಯಾಪಕ ತರಗತಿಯಿಂದ ಹೊರಬಂದ ನಂತರ, ಕೋಪಗೊಂಡ ವಿದ್ಯಾರ್ಥಿನಿ ಮತ್ತು ಆಕೆಯ ಸಹಪಾಠಿಗಳು ಕಾಲೇಜು ಆವರಣದಲ್ಲಿಯೇ ಆತನಿಗೆ ಘೇರಾವ್ ಹಾಕಿದರು. ಬಳಿಕ ಪ್ರಾಧ್ಯಾಪಕನಿಗೆ ಚಪ್ಪಲಿಯಿಂದ ಹೊಡೆದು ಬುದ್ಧಿ ಕಲಿಸಿದರು.

೩. ಈ ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಪೊಲೀಸರು ಕಾಲೇಜಿಗೆ ದೌಡಾಯಿಸಿದರು. ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದು, ಆರೋಪಿ ಪ್ರಾಧ್ಯಾಪಕ ಮತ್ತು ನೊಂದ ವಿದ್ಯಾರ್ಥಿನಿಯ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

೪. ಕಾಲೇಜು ಆಡಳಿತ ಮಂಡಳಿಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರಾಧ್ಯಾಪಕನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸುಳಿವು ನೀಡಿದೆ.

೫. ಈ ಘಟನೆಯಿಂದಾಗಿ ಮಹಿಳೆಯರ ಸುರಕ್ಷತೆ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿನ ನೈತಿಕತೆಯ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಸಂಪಾದಕೀಯ ನಿಲುವು

ಇಂಥ ಪ್ರಾಧ್ಯಾಪಕರು ಪಾಠ ಮಾಡುವ ಶಾಲೆಯಲ್ಲಿ ವಿದ್ಯಾರ್ಥಿನಿಯರು ಸುರಕ್ಷಿತವಾಗಿರುತ್ತಾರೆ ಎಂಬುದಕ್ಕೆ ಖಾತರಿ ಏನು?