ಪರ್ವರಿ (ಗೋವಾ): ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ 100 ಚದರ ಮೀಟರ್ ಪ್ರದೇಶದಲ್ಲಿ ‘ಕ್ರಾಸ್’ನ ಅನಧಿಕೃತ ನಿರ್ಮಾಣ!

  • ಆಡಳಿತಕ್ಕೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.

  • ಈ ಅನಧಿಕೃತ ನಿರ್ಮಾಣದ ವಿರುದ್ಧ ಪ್ರಕರಣವನ್ನೇ ದಾಖಲಿಸಿಕೊಂಡಿಲ್ಲ.

ಪರ್ವರಿಯಲ್ಲಿ ನಿರ್ಮಿಸಲಾದ ಅನಧಿಕೃತ ‘ಕ್ರಾಸ್’ ಇದೇ!

ಪಣಜಿ (ಗೋವಾ), 25 ಮಾರ್ಚ್ (ವಾರ್ತೆ) – ಪರ್ವರಿಯ ‘ಮಾಲ್ ದೆ ಗೋವಾ’ ಎದುರಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 66ರಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಬರೋಬ್ಬರಿ 100 ಚದರ ಮೀಟರ್ ಪ್ರದೇಶವನ್ನು ಅತಿಕ್ರಮಿಸಿ 10 ಅಡಿ ಎತ್ತರದ ಕ್ರೈಸ್ತರ ‘ಕ್ರಾಸ್’ ಅನ್ನು ಸ್ಥಾಪಿಸಿವೆ. ಈ ‘ಕ್ರಾಸ್’ ನಿರ್ಮಾಣದ ಕುರಿತು ರಾಷ್ಟ್ರಪ್ರೇಮಿ ನಾಗರಿಕರು ಪದೇ ಪದೇ ಕ್ರಮ ಕೈಗೊಳ್ಳುವಂತೆ ವಿನಂತಿಸಿದರೂ, ಸ್ಥಳೀಯ ಆಡಳಿತವು ಕೇವಲ ಭರವಸೆಗಳನ್ನು ನೀಡುತ್ತಿದೆಯೇ ಹೊರತು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಎಫ್‌ಐಆರ್ ಕೂಡ ದಾಖಲಿಸಿಕೊಂಡಿಲ್ಲ. ಸ್ಥಳೀಯ ರಾಷ್ಟ್ರನಿಷ್ಠರಾದ ಶ್ರೀ ಕಮಲಾಕಾಂತ್ ಚತುರ್ವೇದಿ ಅವರು ‘ಸನಾತನ ಪ್ರಭಾತ್’ಗೆ ಈ ಮಾಹಿತಿ ನೀಡಿದ್ದಾರೆ.

ಶ್ರೀ ಚತುರ್ವೇದಿ ಅವರಿಗೆ 2 ತಿಂಗಳ ಹಿಂದೆಯೇ ಪರ್ವರಿಯ ‘ಮಾಲ್ ದೆ ಗೋವಾ’ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ‘ಕ್ರಾಸ್’ನ ಅನಧಿಕೃತ ನಿರ್ಮಾಣ ನಡೆಯುತ್ತಿರುವುದು ಗಮನಕ್ಕೆ ಬಂದಿತ್ತು. ಈ ಕುರಿತು ಅವರು ಮೊದಲು ಜನವರಿ 12 ಮತ್ತು ನಂತರ ಮಾರ್ಚ್ 6 ರಂದು ಸ್ಥಳೀಯ ಜಿಲ್ಲಾಧಿಕಾರಿ ಅಂಕಿತ್ ಯಾದವ್ ಅವರಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಿದ್ದರು. ಅದರ ನಂತರ ಆಡಳಿತವು ಅಲ್ಲಿನ ನಿರ್ಮಾಣವನ್ನು ಕೆಡವಿದ್ದು ನಿಜ; ಆದರೆ ಮತ್ತೆ ಅಲ್ಲಿ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಇದರಿಂದಾಗಿ ಆಡಳಿತ ಅಥವಾ ಸ್ಥಳೀಯ ರಾಜಕಾರಣಿಗಳು ಮತ್ತು ಸಮಾಜಘಾತುಕ ಶಕ್ತಿಗಳ ನಡುವೆ ಒಳಸಂಚು ಇದೆಯೇ? ಎಂಬ ಸಂಶಯ ವ್ಯಕ್ತವಾಗುತ್ತಿದೆ. ಆದ್ದರಿಂದ ‘ಕ್ರಾಸ್’ ನಿರ್ಮಾಣವನ್ನು ಕೆಡವಿರುವುದು ಕೇವಲ ಕಣ್ಣೊರೆಸುವ ತಂತ್ರವೆಂದೇ ಹೇಳಬೇಕು. ಈಗ ಮತ್ತೆ ಅದನ್ನು ನಿರ್ಮಿಸುತ್ತಿರುವ ಬಗ್ಗೆ ಮಾರ್ಚ್ 24 ರಂದು ಅಧಿಕೃತ ದೂರು ನೀಡಲಾಗಿದೆ. (ಕಾನೂನು-ಸುವ್ಯವಸ್ಥೆಯನ್ನು ಗಾಳಿಗೆ ತೂರುವ ಉದ್ಧಟ ಕ್ರೈಸ್ತರು! ಇಂತಹವರ ವಿರುದ್ಧ ಆಡಳಿತವು ಕ್ರಮ ಕೈಗೊಳ್ಳದಿದ್ದರೆ, ರಾಷ್ಟ್ರಪ್ರೇಮಿ ನಾಗರಿಕರು ಸಂಘಟಿತರಾಗಿ ಸಮಾಜಘಾತುಕ ಶಕ್ತಿಗಳ ಜೊತೆಗೆ ಸಂಬಂಧಪಟ್ಟ ಆಡಳಿತಾಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಬೇಕು! – ಸಂಪಾದಕರು)

ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಜಿಲ್ಲಾಧಿಕಾರಿಗಳನ್ನೂ ಪ್ರತಿವಾದಿಯನ್ನಾಗಿ ಮಾಡಲಾಗುವುದು!

ಪದೇ ಪದೇ ದೂರು ನೀಡಿದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಶ್ರೀ ಚತುರ್ವೇದಿ ಅವರು ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ. ಅವರು ತಮ್ಮ ದೂರಿನಲ್ಲಿ, “ಮುಖ್ಯ ಹೆದ್ದಾರಿಯಲ್ಲಿನ ಈ ಅತಿಕ್ರಮಣದಿಂದಾಗಿ ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆ ಮತ್ತು ಗೊಂದಲದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಆದ್ದರಿಂದ ತಾವು ಈ ಅತಿಕ್ರಮಣವನ್ನು ತಕ್ಷಣವೇ ತೆರವುಗೊಳಿಸಬೇಕು. ಹಾಗೆಯೇ ಇದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ನಮ್ರ ವಿನಂತಿಯಾಗಿದೆ; ಇಲ್ಲದಿದ್ದರೆ ಈ ಅತಿಕ್ರಮಣವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ ಸಂಬಂಧ ಉತ್ತರ ಗೋವಾ ಜಿಲ್ಲಾಧಿಕಾರಿ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿಯವರನ್ನು ಪ್ರತಿವಾದಿಯನ್ನಾಗಿ ಮಾಡಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ” ಎಂದು ಹೇಳಿದ್ದಾರೆ.

‘ಕ್ರಾಸ್’ನ ನಿಖರವಾದ ಸ್ಥಳ!

ಪರ್ವರಿ ಗ್ರಾಮದ ಮೂಲಕ ಹಾದುಹೋಗುವ ‘ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 66’ರಲ್ಲಿ ‘ಮಾಲ್ ದೆ ಗೋವಾ’ ಮತ್ತು ‘ಐಸಿಐಸಿಐ’ ಬ್ಯಾಂಕ್ ಎದುರು ರಸ್ತೆ ಬದಿಯಲ್ಲಿ ಬರೋಬ್ಬರಿ 100 ಚದರ ಮೀಟರ್ ಪ್ರದೇಶವನ್ನು ಆಕ್ರಮಿಸಿಕೊಂಡು ಈ ‘ಕ್ರಾಸ್’ ನಿರ್ಮಾಣ ಮಾಡಲಾಗುತ್ತಿದೆ.

ಸಂಪಾದಕೀಯ ನಿಲುವು

  • ಆಡಳಿತದ ಇಂತಹ ಉದಾಸೀನ ಧೋರಣೆಯೇ ಧರ್ಮನಿರಪೇಕ್ಷತೆಯೇ? ಈ ಜಾಗದಲ್ಲಿ ಒಂದು ವೇಳೆ ಅನಧಿಕೃತವಾಗಿ ದೇವಸ್ಥಾನವನ್ನು ಕಟ್ಟುತ್ತಿದ್ದರೆ, ಆಡಳಿತವು ಸ್ವಯಂಪ್ರೇರಿತವಾಗಿ ಅದನ್ನು ದಾಖಲಿಸಿಕೊಂಡು, ಸಕಾಲದಲ್ಲಿ ಅದರ ಮೇಲೆ ಬುಲ್ಡೋಜರ್ ಚಲಾಯಿಸುತ್ತಿತ್ತು ಎಂದು ಯಾವುದೇ ಹಿಂದುತ್ವನಿಷ್ಠರಿಗೆ ಅನಿಸಿದರೆ ಅದು ತಪ್ಪಾಗಲಾರದು.
  • ಹಿಂದುತ್ವನಿಷ್ಠ ಬಿಜೆಪಿ ಅಧಿಕಾರದಲ್ಲಿರುವ ಗೋವಾದಲ್ಲಿ ಹೀಗಾಗುವುದು ನಿರೀಕ್ಷಿತವಲ್ಲ! ಸರ್ಕಾರವು ಈ ಕೃತ್ಯದ ಮೇಲೆ ‘ಬುಲ್ಡೋಜರ್’ ಚಲಾಯಿಸಲು ತಕ್ಷಣವೇ ಹೆಜ್ಜೆ ಇಡಬೇಕು!