ಗಾಜಿಯಾಬಾದ್ (ಉತ್ತರ ಪ್ರದೇಶ): ಸಿಸಿಟಿವಿ ದೃಶ್ಯಾವಳಿಗಳು ನೇರವಾಗಿ ಪಾಕಿಸ್ತಾನಕ್ಕೆ ತಲುಪುತ್ತಿರುವುದು ಬಯಲು!

ನವ ದೆಹಲಿ – ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಪಾಕಿಸ್ತಾನಕ್ಕೆ ಸಂಬಂಧಿಸಿದ ಗೂಢಚರ್ಯೆ ಜಾಲವು ಬಯಲಾದ ನಂತರ ಸಿಸಿಟಿವಿ ವ್ಯವಸ್ಥೆಯ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಈ ಗೂಢಚರ್ಯೆ ಜಾಲದ ಮೂಲಕ ಗಾಜಿಯಾಬಾದ್ ನ ಸೂಕ್ಷ್ಮ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ನೇರವಾಗಿ ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿತ್ತು. ಈ ಘಟನೆ ಬೆಳಕಿಗೆ ಬಂದ ನಂತರ ಕೇಂದ್ರ ಸರಕಾರವು ದೇಶಾದ್ಯಂತ ಸಿಸಿಟಿವಿ ನೆಟ್ ವರ್ಕ್ ಅನ್ನು ತಪಾಸಣೆ ಮಾಡಲು ನಿರ್ಧರಿಸಿದೆ. ಗೃಹ ಸಚಿವಾಲಯವು ಗುಪ್ತಚರ ಇಲಾಖೆ ಮತ್ತು ಇತರ ಸಂಸ್ಥೆಗಳೊಂದಿಗೆ ಸೇರಿ ದೇಶಾದ್ಯಂತ ಸಿಸಿಟಿವಿ ನೆಟ್ ವರ್ಕ್‌ನ ತಪಾಸಣೆ ನಡೆಸಲು ಸಿದ್ಧತೆ ನಡೆಸುತ್ತಿದೆ.
ಚೀನಾ ನಿರ್ಮಿತ ಕ್ಯಾಮೆರಾಗಳಿಂದ ಹ್ಯಾಕಿಂಗ್ ಭೀತಿ !
ಏಪ್ರಿಲ್ ೧ ರಿಂದ ಸರಕಾರಿ ಸುರಕ್ಷತಾ ತಪಾಸಣೆಯಲ್ಲಿ ಉತ್ತೀರ್ಣರಾದ ‘ಹ್ಯಾಕಿಂಗ್ ಪ್ರೂಫ್ ಕ್ಯಾಮೆರಾ’ಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗುವುದು. ಭಾರತದಲ್ಲಿ ಶೇಕಡಾ ೮೦% ರಷ್ಟು ಸಿಸಿಟಿವಿ ಕ್ಯಾಮೆರಾಗಳು ಚೀನಾ ನಿರ್ಮಿತವಾಗಿದ್ದು, ಇದರಿಂದ ದತ್ತಾಂಶ (ಡೇಟಾ) ಕಳ್ಳತನದ ಅಪಾಯ ಮುಂದುವರಿದಿದೆ. ಪ್ರಸ್ತುತ ೭ ಸಂಸ್ಥೆಗಳ ಕೇವಲ ೫೩ ಸಿಸಿಟಿವಿ ಮಾಡೆಲ್‌ಗಳನ್ನು ಮಾತ್ರ ಪ್ರಮಾಣೀಕೃತ ಮತ್ತು ಸುರಕ್ಷಿತವೆಂದು ಪರಿಗಣಿಸಲಾಗಿದೆ.
ಸಂಪಾದಕೀಯ ನಿಲುವುಇಸ್ರೇಲ್ ಇರಾನ್ ನಲ್ಲಿನ ರಸ್ತೆಗಳ ಸಿಗ್ನಲ್‌ಗಳನ್ನೂ ಹ್ಯಾಕ್ ಮಾಡಿ ಎಲ್ಲಾ ಮಾಹಿತಿ ಸಂಗ್ರಹಿಸಿತ್ತು. ಭಾರತದ ಶತ್ರು ರಾಷ್ಟ್ರಗಳೂ ಇಂತಹ ಪ್ರಯತ್ನ ಮಾಡುತ್ತಿರುವುದರಿಂದ ಈಗ ಭಾರತವು ಪ್ರತಿಯೊಂದು ಕ್ಷೇತ್ರದಲ್ಲಿಯೂ ಜಾಗರೂಕರಾಗಿರುವ ಅವಶ್ಯಕತೆಯಿದೆ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ