ಕಾಶ್ಮೀರದ ಮುಸಲ್ಮಾನರಿಂದ ಇರಾನ್‌ ಗೆ ವಿವಿಧ ರೀತಿಯ ನೆರವು !

ಚಿನ್ನದ ಆಭರಣ ನೀಡಿದ ವಿಧವೆ ಮುಸಲ್ಮಾನ ಮಹಿಳೆ

ಶ್ರೀನಗರ (ಜಮ್ಮು-ಕಾಶ್ಮೀರ) – ಯುದ್ಧಗ್ರಸ್ತ ಇರಾನ್‌ ಗೆ ಕಳೆದ ವಾರವಷ್ಟೇ ಭಾರತದಿಂದ ವೈದ್ಯಕೀಯ ನೆರವನ್ನು ಕಳುಹಿಸಲಾಗಿತ್ತು. ಈಗ ಕಾಶ್ಮೀರದ ಮುಸಲ್ಮಾನರೂ ಸಹ ಇರಾನ್‌ ಗೆ ನೆರವು ನೀಡಲು ಆರಂಭಿಸಿದ್ದಾರೆ. (ಭಾರತ ಸರಕಾರವು ಸಹಾಯ ಮಾಡುವುದು ಮತ್ತು ನಾಗರಿಕರು ಸ್ವಂತ ದೇಶದಲ್ಲಿದ್ದುಕೊಂಡು ಅನ್ಯ ದೇಶಗಳಿಗಾಗಿ ಇಂತಹ ನೆರವು ನೀಡುವುದು, ಇವೆರಡೂ ಬೇರೆ-ಬೇರೆ ವಿಷಯಗಳಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು! – ಸಂಪಾದಕ) ಕಾಶ್ಮೀರದ ಜನರು ನಗದು ಹಣ, ಚಿನ್ನ ಮತ್ತು ಮನೆಯಲ್ಲಿ ಉಪಯೋಗಕ್ಕೆ ಬರುವ ವಸ್ತುಗಳನ್ನು ನೆರವಿನ ರೂಪದಲ್ಲಿ ಕಳುಹಿಸಿದ್ದಾರೆ. ಒಬ್ಬ ವಿಧವೆ ಮುಸಲ್ಮಾನ ಮಹಿಳೆಯು ಚಿನ್ನದ ಆಭರಣಗಳನ್ನು ಇರಾನ್‌ ಗೆ ನೆರವಾಗಲು ನೀಡಿದ್ದಾರೆ. (ಭಾರತ-ಪಾಕ್ ಮತ್ತು ಭಾರತ-ಚೀನಾ ಯುದ್ಧಗಳ ಸಮಯದಲ್ಲಿ ಎಷ್ಟು ಮುಸಲ್ಮಾನರು ಸರಕಾರಕ್ಕೆ ಇಂತಹ ನೆರವು ನೀಡಿದ್ದರು? ಭಾರತದಲ್ಲಿ ಭೂಕಂಪ, ಪ್ರವಾಹ ಮುಂತಾದ ನೈಸರ್ಗಿಕ ವಿಕೋಪಗಳು ಬಂದಾಗ ಎಷ್ಟು ಮುಸಲ್ಮಾನರು ಸಹಾಯಕ್ಕಾಗಿ ಧಾವಿಸುತ್ತಾರೆ? – ಸಂಪಾದಕರು)

೧. ಭಾರತದಲ್ಲಿರುವ ಇರಾನ್ ರಾಯಭಾರಿ ಕಚೇರಿಯು ಈ ಮಹಿಳೆಯ ವಿಡಿಯೋವನ್ನು ‘ಎಕ್ಸ್’ ಮೂಲಕ ಪ್ರಸಾರ ಮಾಡಿದೆ. ವಿಶೇಷವೆಂದರೆ ಆ ವಿಧವೆ ಮಹಿಳೆಗೆ ಆಕೆಯ ಪತಿ ಈ ಆಭರಣ ನೀಡಿದ್ದನು. ಆದ್ದರಿಂದ ಆ ಆಭರಣದೊಂದಿಗೆ ತನಗೆ ಅತ್ಯಂತ ಭಾವನಾತ್ಮಕ ಸಂಬಂಧವಿದೆ ಎಂದು ಮಹಿಳೆ ತಿಳಿಸಿದ್ದಾರೆ. ೨೮ ವರ್ಷಗಳ ಹಿಂದೆ ಪತಿ ನಿಧನರಾದಾಗಿನಿಂದ ಮಹಿಳೆಯು ಈ ಆಭರಣವನ್ನು ಜತನದಿಂದ ಕಾಯ್ದಿರಿಸಿದ್ದಳು. (ಭಾರತೀಯರಿಗಾಗಿ ಎಂದಾದರೂ ಈ ಆಭರಣಗಳು ಅರ್ಪಣೆಯಾಗುತ್ತಿದ್ದವೇ? – ಸಂಪಾದಕರು) ‘ನಿಮ್ಮ ಕಣ್ಣೀರು ಮತ್ತು ಪವಿತ್ರ ಭಾವನೆಗಳು ನಮಗೆ ಬೆಂಬಲ ನೀಡುವ ಮೂಲಗಳಾಗಿವೆ’, ಎಂದು ಇರಾನ್ ರಾಯಭಾರಿ ಕಚೇರಿಯು ಆ ಮಹಿಳೆಗೆ ಮತ್ತು ಭಾರತೀಯ ನಾಗರಿಕರಿಗೆ ಕೃತಜ್ಞತೆ ಸಲ್ಲಿಸಿದೆ.

೨. ಬಡಗಾಮ್‌ ನಲ್ಲಿ ಶಿಯಾ ಮುಸಲ್ಮಾನರ ಸಂಖ್ಯೆ ಹೆಚ್ಚಿರುವುದರಿಂದ ಅಲ್ಲಿಂದ ಇರಾನ್‌ ಗೆ ನೆರವಿನ ಮಹಾಪೂರವೇ ಹರಿಯುತ್ತಿದೆ. ಅನೇಕ ಕಡೆಗಳಲ್ಲಿ ಇರಾನ್‌ ಗೆ ನೆರವು ಕಳುಹಿಸಲು ಮಳಿಗೆಗಳನ್ನು (ಸ್ಟಾಲ್‌ಗಳನ್ನು) ಸ್ಥಾಪಿಸಲಾಗಿದೆ. (ಕಾಶ್ಮೀರದಿಂದ ಪಲಾಯನ ಮಾಡಲು ಒತ್ತಾಯಿಸಲ್ಪಟ್ಟ ಕಾಶ್ಮೀರಿ ಹಿಂದೂಗಳು ಅನೇಕ ವರ್ಷಗಳ ಕಾಲ ಟೆಂಟ್‌ಗಳಲ್ಲಿ ನಿರಾಶ್ರಿತರಾಗಿ ಜೀವನ ನಡೆಸುತ್ತಿದ್ದಾಗ, ಈ ಮುಸಲ್ಮಾನರು ಎಂದಿಗೂ ಅವರಿಗೆ ಇಂತಹ ನೆರವು ನೀಡಲಿಲ್ಲ ಎಂಬುದನ್ನು ನೆನಪಿಡಿ! – ಸಂಪಾದಕ) ನಾಗರಿಕರು ಈ ಸ್ಥಳಗಳಲ್ಲಿ ನೆರವಿನ ರೂಪದಲ್ಲಿ ನಗದು ಹಣ, ಆಭರಣಗಳು ಸೇರಿದಂತೆ ವಿವಿಧ ವಸ್ತುಗಳನ್ನು ನೀಡುತ್ತಿದ್ದಾರೆ. ಮಹಿಳೆಯರು, ಪುರುಷರು ಹಾಗೂ ಸಣ್ಣ ಮಕ್ಕಳೂ ಸಹ ನೆರವು ನೀಡಲು ಮುಂದೆ ಬರುತ್ತಿದ್ದಾರೆ. ಸಣ್ಣ ಮಕ್ಕಳು ಉಳಿತಾಯ ಮಾಡಿದ ಹಣವನ್ನೂ ನೆರವಿನ ರೂಪದಲ್ಲಿ ನೀಡಿದ್ದಾರೆ.

೩. ಇರಾನ್ ರಾಯಭಾರಿ ಕಚೇರಿಯು ಸಹಾಯಕ್ಕಾಗಿ ಬ್ಯಾಂಕ್ ಖಾತೆಗಳ ವಿವರಗಳನ್ನು ಸಾರ್ವಜನಿಕಗೊಳಿಸಿದ ನಂತರ ಅನೇಕರು ಸಹಾಯ ಮಾಡಿದ್ದಾರೆ. (ಹೀಗೆ ಸಹಾಯ ಮಾಡಿದವರೆಲ್ಲರ ಮಾಹಿತಿಯನ್ನು ಭಾರತವು ಸಂಗ್ರಹಿಸಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

  • ಕಾಶ್ಮೀರದಲ್ಲಿ ೩೫ ವರ್ಷಗಳ ಹಿಂದೆ ಮತಾಂಧ ಮುಸಲ್ಮಾನರು ಹಿಂದೂಗಳನ್ನು ಹೊರಹಾಕಿದರು. ಅವರ ಸಂಪತ್ತುಗಳನ್ನು ಅತಿಕ್ರಮಿಸಿದರು. ಈಗಲೂ ಈ ಮುಸಲ್ಮಾನರು ಹಿಂದೂಗಳು ಅಲ್ಲಿಗೆ ಬರುವುದನ್ನು ವಿರೋಧಿಸುತ್ತಿದ್ದಾರೆ; ಆದರೆ ಅವರೀಗ ಇರಾನ್‌ ಗೆ ಅಂದರೆ ತಮ್ಮ ಧರ್ಮಬಾಂಧವರಿಗೆ ನೆರವು ನೀಡುತ್ತಿದ್ದಾರೆ ! ಇದರಿಂದ ಅವರ ನಿಷ್ಠೆ ಯಾರ ಪರವಾಗಿದೆ ಮತ್ತು ಯಾರ ಪರವಾಗಿಲ್ಲ ಎಂಬುದು ಹೆಚ್ಚು ಸ್ಪಷ್ಟವಾಗುತ್ತದೆ! ಇಂತಹ ಮುಸಲ್ಮಾನರು ಎಂದಾದರೂ ಭಾರತದವರಾಗಲು ಸಾಧ್ಯವೇ ?
  • ದೇಶದ ಎಲ್ಲಾ ರಾಜ್ಯಗಳಿಗಿಂತ ಹೆಚ್ಚು ಹಣವನ್ನು ಕಾಶ್ಮೀರದ ಅಭಿವೃದ್ಧಿಗಾಗಿ ಕೇಂದ್ರ ಸರಕಾರದಿಂದ ಖರ್ಚು ಮಾಡಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಅತಿ ಹೆಚ್ಚು ತೆರಿಗೆ ಪಾವತಿಸುವ ಹಿಂದೂಗಳಿಗೆ ಸಿಗುವುದಾದರೂ ಏನು ?