ಧಾರಾವಿಯಲ್ಲಿ ಮತಾಂಧ ಮುಸ್ಲಿಂ ಯುವಕನಿಂದ ಹಿಂದೂ ಸ್ನೇಹಿತನ ಹತ್ಯೆ! Dharavi Muslim Man Attack Hindu Youth

ಬೈಕ್ ನಿಲ್ಲಿಸುವ ವಿಚಾರವಾಗಿ ಜಗಳ!

ಮುಂಬಯಿ – ಇಲ್ಲಿನ ಧಾರಾವಿ ಪರಿಸರದಲ್ಲಿ ವಾಹನ ನಿಲುಗಡೆ (ಪಾರ್ಕಿಂಗ್) ಸ್ಥಳದಲ್ಲಿ ಆಶಿಕ್ ಖಾನ್ ಎಂಬಾತನು ತನ್ನ ಸ್ನೇಹಿತ ಅಶ್ವಿನ್ ನಾಡರ್ (೨೨ ವರ್ಷ) ಎಂಬುವವನಿಗೆ ಥಳಿಸಿ ಕೊಂದಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಆಶಿಕ್ ಖಾನ್‌ನನ್ನು ಬಂಧಿಸಿದ್ದಾರೆ. ಆತನಿಗೆ ಮಾರ್ಚ್ ೨೪ ರವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಅವರಿಬ್ಬರ ನಡುವೆ ದ್ವಿಚಕ್ರ ವಾಹನ ನಿಲ್ಲಿಸುವ ವಿಚಾರವಾಗಿ ವಾಗ್ವಾದ ನಡೆದಿತ್ತು.

ಆಶಿಕ್, ಅಶ್ವಿನ್‌ನನ್ನು ಅತ್ಯಂತ ಕ್ರೂರವಾಗಿ ಥಳಿಸಿದ್ದಾನೆ. ಅಶ್ವಿನ್ ಆತನಿಗೆ ಕೈಮುಗಿದು ‘ಅಣ್ಣ’ ಎಂದು ಬೇಡಿಕೊಂಡರೂ, ಆಶಿಕ್ ಕೇಳದೆ ಆತನ ಕುತ್ತಿಗೆಗೆ ಹಗ್ಗ ಹಾಕಿ ಹೊರಗೆ ಎಳೆದಿದ್ದಾನೆ, ಚಾವಟಿಯಿಂದ ಹೊಡೆದಿದ್ದಾನೆ ಹಾಗೂ ಮನಬಂದಂತೆ ಒದ್ದಿದ್ದಾನೆ. ಅಶ್ವಿನ್ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಆಶಿಕ್ ಆತನನ್ನು ಹೊಡೆಯುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಸ್ಥಳೀಯರು ಅಶ್ವಿನ್‌ನನ್ನು ಸಿಯಾನ್ ಆಸ್ಪತ್ರೆಗೆ ಕರೆದೊಯ್ದರಾದರೂ, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಘಟನೆಯ ಸಮಯದಲ್ಲಿ ಅಲ್ಲಿದ್ದ ಕೆಲವರು ಆಶಿಕ್‌ನನ್ನು ತಡೆಯುವ ಬದಲು ಆತನಿಗೆ ಬೆಂಬಲ ನೀಡುತ್ತಿದ್ದರು ಎಂದು ತಿಳಿದುಬಂದಿದೆ. (ಇಂತಹ ನಿರ್ದಯಿಗಳ ಮೇಲೂ ಕ್ರಮ ಕೈಗೊಳ್ಳಬೇಕು! – ಸಂಪಾದಕರು)

ಸಂಪಾದಕೀಯ ನಿಲುವು

ಇಂತಹವರೊಂದಿಗೆ ಸ್ನೇಹ ಮಾಡುವುದು ಎಂದರೆ ತಮ್ಮ ಜೀವನವನ್ನೇ ನಾಶಪಡಿಸಿಕೊಂಡಂತೆ, ಎಂಬುದನ್ನು ಹಿಂದೂಗಳು ಈಗಲಾದರೂ ಅರಿತುಕೊಳ್ಳುವರೇ?