|

ಬೆಂಗಳೂರು – ಫಾಲ್ಗುಣ ಚೈತ್ರ ಪ್ರತಿಪದೆ, ಮಾರ್ಚ್ 19 ಈ ದಿನ ಸಂಪೂರ್ಣ ದೇಶ ಯುಗಾದಿ ಆಚರಿಸುತ್ತಿದೆ. ಸಮಸ್ತ ಹಿಂದೂ ಸಮಾಜಕ್ಕೆ ಈ ದಿನ ಹೊಸವರ್ಷವೂ ಆಗಿದೆ. ಇದರ ನಿಮಿತ್ತ ಬೆಂಗಳೂರಿನ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ಯುಗಾದಿ ಆಚರಿಸಲಾಯಿತು. ಈ ಸಂಧರ್ಭದಲ್ಲಿ ಸಮಿತಿಯ ಕಾರ್ಯಕರ್ತರು ಮತ್ತು ಧರ್ಮಪ್ರೇಮಿಗಳು ಉಪಸ್ಥಿತರಿದ್ದರು. ಹಿಂದೂ ಧರ್ಮಶಾಸ್ತ್ರಕ್ಕನುಸಾರ ಎತ್ತರದ ಬ್ರಹ್ಮ ಧ್ವಜವನ್ನು ನಿಲ್ಲಿಸಿ ವಿಧಿವತ್ತಾಗಿ ಪೂಜಿಸಲಾಯಿತು.
ಸದ್ಯ ರಾಜ್ಯದಾದ್ಯಂತ ಬೆಲೆ ಏರಿಕೆ, ಭ್ರಷ್ಟಚಾರ, ಓಲೈಕೆ, ಅಪರಾಧ ಮತ್ತು ಅತ್ಯಾಚಾರ, ಹಿಂದೂ ಸಮಾಜದ ಮೇಲೆ ಆಘಾತದ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಹೇಗೆ ಪ್ರಭು ಶ್ರೀರಾಮನ ಸಮಯದಲ್ಲಿ ಆದರ್ಶ ರಾಜ್ಯಾಡಳಿತವಿತ್ತು, ಅದೇ ರೀತಿಯ ರಾಮರಾಜ್ಯವು ಶೀಘ್ರದಲ್ಲಿ ಸ್ಥಾಪನೆಯಾಗಬೇಕು. ಭಾರತವು ಆದರ್ಶ ರಾಮರಾಜ್ಯದಂತಾಗಬೇಕು ಎಂದು ಪ್ರಭು ಶ್ರೀರಾಮನಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡಲಾಯಿತು, ತ್ರೇತಾಯುಗದಲ್ಲಿ ಪ್ರಭು ಶ್ರೀರಾಮನು ಯುಗಾದಿಯಂದು ಅಯೋದ್ಯೆಯಲ್ಲಿ ರಾಮರಾಜ್ಯದ ಸ್ಥಾಪನೆ ಮಾಡಿದಂತೆ, ಪರಾಭವನಾಮ ಸಂವತ್ಸರದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗೆ ಸಂಕಲ್ಪ ಮಾಡಲಾಯಿತು. ಅದಕ್ಕಾಗಿ ಎಲ್ಲ ಹಿಂದೂ ಬಾಂಧವರು ಸಂಘಟಿತಭಾವದಿಂದ ಕಾರ್ಯ ಮಾಡಲು ನಿಶ್ಚಯ ಮಾಡಿದರು. ಜೊತೆಗೆ ನೆರೆದಿದ್ದ ಹಿಂದೂ ಸಮಾಜವು ರಾಮರಾಜ್ಯದ ಸ್ಥಾಪನೆಗಾಗಿ ಆವಶ್ಯಕವಿರುವ ಧರ್ಮಜಾಗೃತಿ ಮೂಡಿಸಲು ನಾವು ಇಂದಿನಿಂದ ಪ್ರಯತ್ನಿಸುತ್ತೇವೆ ಎಂದು ಸಂಕಲ್ಪ ಮಾಡಿದರು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ