ಶಿಯಾ ಮುಸಲ್ಮಾನರಿಂದ ತೋಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

ಭೋಪಾಲ್ (ಮಧ್ಯಪ್ರದೇಶ) – ಮಾರ್ಚ್ ೨೧ ರಂದು ದೇಶದಲ್ಲಿ ರಮಜಾನ್ ಈದ್ ಆಚರಿಸಲಾಯಿತು. ಭೋಪಾಲ್ ನಲ್ಲಿ ಈದ್ ನಿಮಿತ್ತ ಶಿಯಾ ಮುಸಲ್ಮಾನರು ಫತೇಗಢ್ ಇಮಾಮಬಾಡಾದಲ್ಲಿ ‘ಕಪ್ಪು ಈದ್’ ಆಚರಿಸಿ, ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯನ್ನು ಖಂಡಿಸಿದರು. ನಮಾಜ್ ಪಠಣದ ನಂತರ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಜನರು ಕಪ್ಪು ಪಟ್ಟಿಗಳನ್ನು ಧರಿಸಿ ಮತ್ತು ಸಾಮಾನ್ಯ ಬಟ್ಟೆಗಳನ್ನು ಹಾಕಿಕೊಂಡು ಬಂದಿದ್ದರಿಂದ ಅಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿತ್ತು. ಇಲ್ಲಿ ಅಯತೊಲ್ಲಾ ಅಲಿ ಖಮೇನಿ ಅವರ ಭಾವಚಿತ್ರವನ್ನು ಇರಿಸಲಾಗಿತ್ತು. ಮೌಲಾನಾ ರಝಿ-ಉಲ್-ಹಸನ್ ಅವರು ಅಲ್ಲಿ ನೆರೆದಿದ್ದವರಿಗೆ ‘ಅನ್ಯಾಯದ ವಿರುದ್ಧ ಧ್ವನಿ ಎತ್ತಿ’ ಎಂಬ ಸಂದೇಶ ನೀಡಿದರು.
ರಾಜಸ್ಥಾನದಲ್ಲಿ ಕಪ್ಪು ಪಟ್ಟಿ ಧರಿಸಿ ಈದ್ ನಮಾಜ್ ಪಠಣ
ರಾಜಸ್ಥಾನದ ಜೈಪುರ, ಸಿಕರ್, ಅಜಮೇರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಸಲ್ಮಾನರು ಕಪ್ಪು ಪಟ್ಟಿ ಧರಿಸಿ ನಮಾಜ್ ಪಠಿಸಿದರು. ಮಸೀದಿಗಳ ಮೇಲೆ ಕಪ್ಪು ಬಾವುಟಗಳನ್ನು ಹಾರಿಸಲಾಗಿತ್ತು. ಈದ್ ದಿನದಂದು ಮುಸಲ್ಮಾನರು ಹೊಸ ಬಟ್ಟೆ ಧರಿಸಿ ಹಬ್ಬ ಆಚರಿಸುತ್ತಾರೆ; ಆದರೆ ಇಲ್ಲಿ ಶಿಯಾ ಮುಸಲ್ಮಾನರು ಇಸ್ರೇಲ್ ಮತ್ತು ಅಮೆರಿಕವನ್ನು ವಿರೋಧಿಸಲು ಹೊಸ ಬಟ್ಟೆಗಳನ್ನು ಧರಿಸಲಿಲ್ಲ. ಮನೆಗಳಲ್ಲಿ ತಯಾರಿಸಲಾಗುವ ಸಾಂಪ್ರದಾಯಿಕ ಖಾದ್ಯಗಳಾದ ಖೀರ್, ಶ್ಯಾವಿಗೆ ಪಾಯಸವನ್ನೂ ತಯಾರಿಸಲಿಲ್ಲ. ಜೈಪುರದ ಸುಭಾಷ್ ಚೌಕ್ ನಲ್ಲಿರುವ ಜಾಮ ಮಸೀದಿಯ ಮೇಲೆ ಕಪ್ಪು ಬಾವುಟಗಳನ್ನು ಹಾರಿಸಲಾಗಿತ್ತು. ಜೈಪುರದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಪೊಲೀಸ್ ತಂಡಗಳು ಡ್ರೋನ್ (ಮಾನವರಹಿತ ವಿಮಾನ) ಮೂಲಕ ಕಣ್ಗಾವಲು ಇರಿಸಿದ್ದವು. ಅನೇಕ ಕಡೆಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿದರು.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ