೫ ಮಹಿಳಾ ಮಿಷನರಿಗಳ ಬಂಧನ
(‘ಚಂಗಾಯಿ ಸಭೆ’ ಎಂದರೆ ಕಾಯಿಲೆ ಇರುವವರಿಗೆ ಪ್ರಾರ್ಥನೆಯ ಮೂಲಕ ಚಿಕಿತ್ಸೆ ನೀಡಿ ಅವರನ್ನು ಗುಣಪಡಿಸುವುದಾಗಿ ಹೇಳಿಕೊಳ್ಳುವ ಸಭೆ)

ಗುಮಲಾ (ಝಾರ್ಖಂಡ) – ಇಲ್ಲಿ ಮಾರ್ಚ್ ೨೦ ರಂದು ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ಯತ್ನಿಸುತ್ತಿದ್ದ ೫ ಮಹಿಳಾ ಮಿಷನರಿಗಳನ್ನು ಛರ್ದಾ ರಸ್ತೆ ಪ್ರದೇಶದಿಂದ ಬಂಧಿಸಲಾಗಿದೆ. ಅವರು ಮನೆಮನೆಗೆ ತೆರಳಿ ಜನರನ್ನು ‘ಚಂಗಾಯಿ ಸಭೆ’ಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಿದ್ದರು.
೧. ಪುಗ್ಗು ಮತ್ತು ಸುತ್ತಮುತ್ತಲಿನ ಪ್ರದೇಶಗಳ ರೌಮಿಲಾ ಮಿಂಜ್, ಕಿರಣ್ ಕುಜೂರ್, ಶಕಿರಾ ತಿರ್ಕಿ, ಸುಶೀಲಾದೇವಿ ಮತ್ತು ಇಂದುದೇವಿ ಎಂಬ ೫ ಮಹಿಳೆಯರು ಸಿಸೈಯ ಕುಮ್ಹಾರ್ ಮೋಡ್ ಪ್ರದೇಶದ ಮನೆಗಳಲ್ಲಿ ಚಂಗಾಯಿ ಸಭೆಯ ಕರಪತ್ರಗಳನ್ನು ಹಂಚುತ್ತಿದ್ದರು. ಆ ಸಮಯದಲ್ಲಿ ಅವರು ‘ಕಾಯಿಲೆಗಳಿಂದ ಮುಕ್ತಿ, ಉತ್ತಮ ಆರೋಗ್ಯ ಮತ್ತು ಪವಾಡದ ಲಾಭಗಳು ದೊರೆಯಲಿವೆ’ ಎಂದು ಹೇಳಿ ಜನರನ್ನು ಸಭೆಗೆ ಬರುವಂತೆ ಆಹ್ವಾನಿಸುತ್ತಿದ್ದರು.
೨. ಸ್ಥಳೀಯರಲ್ಲಿ ಕೆಲವರಿಗೆ ಅವರ ಉದ್ದೇಶ ತಿಳಿದುಬಂದ ಕೂಡಲೇ ಅವರು ಹಿಂದೂ ಸಂಘಟನೆಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು. ಛರ್ದಾ ರಸ್ತೆಯ ಆನಂದ್ ಸಾಹು ಅವರು ಮಿಷನರಿ ಮಹಿಳೆಯರು ತಮ್ಮ ಮನೆಗೆ ಬಂದು ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಮತ್ತು ಹಿಂದೂ ಪರಂಪರೆ ಹಾಗೂ ಧರ್ಮವನ್ನು ಬಿಡುವಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ.
೩. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ವಿಶ್ವ ಹಿಂದೂ ಪರಿಷತ್ತು, ಬಜರಂಗ ದಳ ಮತ್ತು ಇತರ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿಯನ್ನು ಗಮನಿಸಿದ ಸಿಸೈ ಪೊಲೀಸ್ ಠಾಣೆಯ ತಂಡವು ಮಹಿಳಾ ಮಿಷನರಿಗಳನ್ನು ಜನಸಮೂಹದಿಂದ ಸುರಕ್ಷಿತವಾಗಿ ಹೊರತಂದು ಪೊಲೀಸ್ ಠಾಣೆಗೆ ಕರೆದೊಯ್ದರು.
ಸಂಪಾದಕೀಯ ನಿಲುವುಹಿಂದೂಗಳ ಪರಿಸ್ಥಿತಿಯ ದುರುಪಯೋಗಿಸಿಕೊಂಡು ಭಾರತದಾದ್ಯಂತ ನಡೆಯುತ್ತಿರುವ ಮತಾಂತರವನ್ನು ತಡೆಯಲು ದೇಶಮಟ್ಟದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕು ! |
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram
ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಜೀನಾಮೆ : Champat Rai Resignation
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ