
ರತ್ನಾಗಿರಿ – ಕುಖ್ಯಾತ ಭಯೋತ್ಪಾದಕ ಮತ್ತು 1993ರ ಮುಂಬಯಿ ಸರಣಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂನ ಆಸ್ತಿಗಳ ವಿರುದ್ಧ ಕೇಂದ್ರ ಸರಕಾರವು ಕ್ರಮ ಪೂರ್ಣಗೊಳಿಸಿದೆ. ಜಿಲ್ಲೆಯ ಖೇಡ್ ತಾಲೂಕಿನ ಮುಂಬಕೆ ಗ್ರಾಮದಲ್ಲಿರುವ ದಾವೂದ್‌ನ 4 ಪಿತ್ರಾರ್ಜಿತ ಜಮೀನುಗಳ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದ್ದು, ಮುಂಬಯಿನ ಹೂಡಿಕೆದಾರರೊಬ್ಬರು ಈ ಎಲ್ಲಾ ಭೂಮಿಗಳನ್ನು ಖರೀದಿಸಿದ್ದಾರೆ.
1. ಕೇಂದ್ರ ಸರಕಾರದ ‘ಸಾಫೆಮಾ’ (ದ ಸ್ಮಗ್ಲರ್ಸ್ ಅಂಡ್ ಫಾರಿನ್ ಎಕ್ಸ್ಚೇಂಜ್ ಮ್ಯಾನಿಪ್ಯುಲೇಟರ್ಸ್ ಆಕ್ಟ್ – ಅಕ್ರಮ ಸಾಗಣೆದಾರರು ಮತ್ತು ವಿದೇಶಿ ವಿನಿಮಯ ಅಕ್ರಮ ಚಟುವಟಿಕೆದಾರರ ಆಸ್ತಿ ಮುಟ್ಟುಗೋಲು ಕಾಯ್ದೆ) ಅಡಿಯಲ್ಲಿ ಈ ಆಸ್ತಿಗಳನ್ನು ಜಪ್ತಿ ಮಾಡಲಾಗಿತ್ತು. ಹಲವು ವರ್ಷಗಳ ಕಾಯುವಿಕೆಯ ನಂತರ ಈ ಭೂಮಿಗೆ ಖರೀದಿದಾರರು ಸಿಕ್ಕಿದ್ದಾರೆ.
2. ಈ ಹರಾಜು ಪ್ರಕ್ರಿಯೆಯು ದಾವೂದ್ ಹೆಸರಿಗೆ ಸಂಬಂಧಿಸಿದ್ದರಿಂದ, ಈ ಹಿಂದೆ ಹಲವು ಬಾರಿ ಪ್ರಯತ್ನಿಸಿದರೂ ಯಶಸ್ವಿಯಾಗಿರಲಿಲ್ಲ. 2017, 2020, 2024 ಮತ್ತು 2025 ರಲ್ಲೂ ಹರಾಜು ಆಯೋಜಿಸಲಾಗಿತ್ತು; ಆದರೆ ಖರೀದಿದಾರರು ಭಯದಿಂದಾಗಿ ಬಿಡ್ ಸಲ್ಲಿಸದೆ ಹಿಂದೆ ಸರಿದಿದ್ದರು.
3. ದೆಹಲಿಯ ವಕೀಲ ಅಜಯ ಶ್ರೀವಾಸ್ತವ ಅವರು ಸಹ ಕೆಲವು ಆಸ್ತಿಗಳನ್ನು ಖರೀದಿಸಿದ್ದರು; ಆದರೆ ಕಾನೂನು ತೊಡಕುಗಳಿಂದಾಗಿ ಪ್ರಕ್ರಿಯೆಯು ವಿಳಂಬವಾಗಿತ್ತು.
4. ದಾವೂದ್ ತಾಯಿ ಅಮಿನಾ ಬಿ ಹೆಸರಿನಲ್ಲಿದ್ದ 4 ಆಸ್ತಿಗಳು ಇದರಲ್ಲಿ ಸೇರಿವೆ. ಹರಾಜಿನ ನಿಯಮಗಳ ಪ್ರಕಾರ, ಖರೀದಿದಾರರು ಏಪ್ರಿಲ್ 2026ರ ಆರಂಭದಲ್ಲಿ ಸಂಪೂರ್ಣ ಹಣವನ್ನು ಪಾವತಿಸಬೇಕಾಗುತ್ತದೆ. ಆ ನಂತರವಷ್ಟೇ ಖರೀದಿದಾರರಿಗೆ ಭೂಮಿಯ ಹಕ್ಕು ಲಭ್ಯವಾಗಲಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!