ಬಿಕಾನೇರ್, ಬುಂದಿ ಮತ್ತು ಜೈಸಲ್ಮೇರ್ ಪ್ರದೇಶಗಳ ಸೇರ್ಪಡೆಗೆ ಆಕ್ಷೇಪವಿತ್ತು!
(ಎನ್.ಸಿ.ಇ.ಆರ್.ಟಿ. ಎಂದರೆ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್, ಅಂದರೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು)

ನವದೆಹಲಿ – ಎನ್.ಸಿ.ಇ.ಆರ್.ಟಿ.ಯ 8ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ‘ಸಮಾಜದ ಶೋಧಯಾತ್ರೆ: ಭಾರತ ಮತ್ತು ಅದರಾಚೆ ಭಾಗ-1’ ಎಂಬ ಪುಸ್ತಕದಲ್ಲಿ ಮರಾಠ ಸಾಮ್ರಾಜ್ಯದ ವಿಸ್ತರಣೆಯನ್ನು ತೋರಿಸುವಾಗ ರಾಜಸ್ಥಾನದ ಬಿಕಾನೇರ್, ಬುಂದಿ ಮತ್ತು ಜೈಸಲ್ಮೇರ್ ಪ್ರದೇಶಗಳನ್ನು ಸೇರಿಸಲಾಗಿತ್ತು. ಜೈಸಲ್ಮೇರ್‌ನ 44ನೇ ಮಹಾರಾವಲ್ ಚೈತನ್ಯ ರಾಜ್ ಸಿಂಗ್ ಭಾಟಿ ಅವರು ಆಗಸ್ಟ್ 2025 ರಲ್ಲಿ ಈ ಭೂಪಟದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಭೂಪಟವು ರಜಪೂತ ರಾಜರ ಹೋರಾಟ ಮತ್ತು ಸಾರ್ವಭೌಮತ್ವವನ್ನು ಕಡೆಗಣಿಸುವ ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದರು. ಅಲ್ಲದೆ, ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಗಮನ ಹರಿಸುವಂತೆ ವಿನಂತಿಸಿದ್ದರು.
ರಾಜಸ್ಥಾನದ ಇತರ ರಾಜಮನೆತನಗಳು, ಬಿಜೆಪಿ ಸಂಸದೆ ಮಹಿಮಾ ಕುಮಾರಿ ಮೇವಾಡ್, ಶಾಸಕ ವಿಶ್ವರಾಜ್ ಸಿಂಗ್ ಮೇವಾಡ್, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹಾಗೂ ಬುಂದಿಯ ನಿವೃತ್ತ ಬ್ರಿಗೇಡಿಯರ್ ಭೂಪೇಶ್ ಸಿಂಗ್ ಹಾಡಾ ಅವರು ಕೂಡ ಈ ಭೂಪಟವು ತಪ್ಪು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಎಲ್ಲ ವಿರೋಧಗಳ ನಂತರ, ಎನ್.ಸಿ.ಇ.ಆರ್.ಟಿ ಪುಸ್ತಕದಿಂದ ಆ ಭೂಪಟವನ್ನು ತೆಗೆದುಹಾಕಿದೆ. ಮುಂದಿನ ಆವೃತ್ತಿಯಲ್ಲಿ ಪರಿಷ್ಕೃತ ಭೂಪಟವನ್ನು ಸೇರಿಸಲಾಗುವುದು ಎಂದು ಎನ್.ಸಿ.ಇ.ಆರ್.ಟಿ ತಿಳಿಸಿದೆ.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !