
ಲಕ್ಷ್ಮಣಪುರಿ (ಉತ್ತರಪ್ರದೇಶ) – ಹಬ್ಬಗಳ ಸಮಯದಲ್ಲಿ ಯಾವುದೇ ರೀತಿಯ ಅನಾಹುತಗಳನ್ನು ಖಂಡಿತವಾಗಿಯೂ ಸಹಿಸಲಾಗುವುದಿಲ್ಲ. ವಾತಾವರಣವನ್ನು ಕೆಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಪರಾಧಿಗಳಿಗೆ ಪೊಲೀಸರ ಸಮವಸ್ತ್ರದ ಭಯವಿರಬೇಕು. ಹಬ್ಬ-ಹರಿದಿನಗಳನ್ನು ಸಂಪ್ರದಾಯದ ಚೌಕಟ್ಟಿನಲ್ಲೇ ಆಚರಿಸಬೇಕು, ಯಾವುದೇ ಹೊಸ ಸಂಪ್ರದಾಯಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈದ್ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿದರು. ಅವರು ಕಾನೂನು ಮತ್ತು ಸುವ್ಯವಸ್ಥೆಯ ಪರಾಮರ್ಶೆ ನಡೆಸಲು ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಆನ್ ಲೈನ್ ಸಭೆಯಲ್ಲಿ ಪೊಲೀಸ್ ಮಹಾನಿರ್ದೇಶಕರು, ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು.
ಮುಖ್ಯಮಂತ್ರಿಗಳು ಮುಂದುವರಿದು ಹೀಗೆ ಹೇಳಿದರು:
• ಪ್ರತಿಯೊಂದು ದೂರು ಮತ್ತು ಪ್ರತಿಯೊಂದು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ !
ಯಾವುದೇ ಪರಿಸ್ಥಿತಿಯಲ್ಲೂ ಶಾಂತಿ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೇ ಹಂತದಲ್ಲಿ ನಿರ್ಲಕ್ಷ್ಯವನ್ನು ಒಪ್ಪಲಾಗುವುದಿಲ್ಲ. ಅಪರಾಧದ ಒಂದು ಘಟನೆಯೂ ಇಡೀ ಸಮಾಜದ ವಾತಾವರಣವನ್ನು ಕೆಡಿಸುತ್ತದೆ; ಆದ್ದರಿಂದ ಪ್ರತಿಯೊಂದು ದೂರು ಮತ್ತು ಪ್ರತಿಯೊಂದು ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.
• ಧ್ವನಿವರ್ಧಕಗಳ (ಲೌಡ್ ಸ್ಪೀಕರ್) ಶಬ್ದವು ನಿಗದಿತ ಮಿತಿಯಲ್ಲೇ ಇರಲಿ !
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲೇಖಿಸಿ, ಧಾರ್ಮಿಕ ಸ್ಥಳಗಳಲ್ಲಿನ ಧ್ವನಿವರ್ಧಕಗಳ ಶಬ್ದವನ್ನು ನಿಗದಿತ ಮಿತಿಯಲ್ಲೇ ಇಡಬೇಕು ಎಂದು ಹೇಳಿದರು. ನಿಯಮ ಮುರಿದರೆ ಮೈಕುಗಳನ್ನು ತೆರವುಗೊಳಿಸುವ ಕಠಿಣ ಕ್ರಮ ಕೈಗೊಳ್ಳಬೇಕು. ಮೋಟಾರ್ ಸೈಕಲ್ ಸ್ಟಂಟ್ (ಜೀವಕ್ಕೆ ಅಪಾಯಕಾರಿ ಕ್ರೀಡೆ) ಗಳನ್ನು ತಕ್ಷಣವೇ ನಿಲ್ಲಿಸಬೇಕು.
• ಚೈತ್ರ ನವರಾತ್ರಿಯಂದು ಮಂದಿರಗಳಲ್ಲಿ ಜಾಗರೂಕರಾಗಿರಿ !
ಚೈತ್ರ ನವರಾತ್ರಿಯ ಸಂದರ್ಭದಲ್ಲಿ ದೇವಿ ಮಂದಿರಗಳಲ್ಲಿ ಭಕ್ತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಭದ್ರತೆ, ಸ್ವಚ್ಛತೆ, ಜನಸಂದಣಿ ನಿರ್ವಹಣೆ, ಕುಡಿಯುವ ನೀರು, ಬೆಳಕು ಮತ್ತು ಆರೋಗ್ಯ ಸೇವೆ ಇತ್ಯಾದಿಗಳ ಸಂಪೂರ್ಣ ವ್ಯವಸ್ಥೆಯನ್ನು ಮಾಡಬೇಕು. ಪ್ರಮುಖ ಮಂದಿರಗಳು ಮತ್ತು ಜನದಟ್ಟಣೆಯ ಸ್ಥಳಗಳಲ್ಲಿ ಹೆಚ್ಚಿನ ಜಾಗರೂಕತೆ ವಹಿಸಬೇಕು.
• ಗೋ ಆಶ್ರಯ ತಾಣಗಳಲ್ಲಿನ ವ್ಯವಸ್ಥೆಗಳು ಇನ್ನಷ್ಟು ಉತ್ತಮವಾಗಲಿ !
ನಿರಾಶ್ರಿತ ಗೋ ಆಶ್ರಯ ತಾಣಗಳಲ್ಲಿನ ವ್ಯವಸ್ಥೆಗಳನ್ನು ಇನ್ನಷ್ಟು ಉತ್ತಮಗೊಳಿಸುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು. ನೋಡಲ್ (ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವ) ಅಧಿಕಾರಿಗಳ ನೇಮಕ, ಸಮಯಕ್ಕೆ ಸರಿಯಾಗಿ ಸರಕಾರಿ ಅನುದಾನದ ವಿತರಣೆ, ಗೋವಂಶದ ರಕ್ಷಣೆ, ಮೇವು ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ಅವರು ತಿಳಿಸಿದರು.
• ಎಲ್.ಪಿ.ಜಿ. ಸಿಲಿಂಡರ್ ಕಳ್ಳದಂಧೆಯ ಮೇಲೆ ನಿಕಟ ನಿಗಾ ಇರಿಸಿ
ಎಲ್.ಪಿ.ಜಿ. ಸಿಲಿಂಡರ್‌ಗಳ ಪೂರೈಕೆಗೆ ಸಂಬಂಧಿಸಿದಂತೆ ಸಾಮಾನ್ಯ ಜನರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ದಾಸ್ತಾನು ಮತ್ತು ಕಳ್ಳದಂಧೆಯ ಮೇಲೆ ಕನಿಷ್ಠ ನಿಗಾ ಇಡಬೇಕು. ದೋಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಜನರ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಬೇಕು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ