|

ಕೊಲ್ಹಾಪುರ – ಜಿಲ್ಲೆಯ ಕಾಗಲ್ ತಾಲೂಕಿನ ಕರ್ನೂರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಾಟ್ಸಾಪ್ ಗುಂಪೊಂದರಲ್ಲಿ ಬಂದ ಸಂದೇಶದಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂಬ ಕಾರಣ ನೀಡಿ, ಮತಾಂಧ ಮುಸ್ಲಿಮರು ಹಿಂದೂ ಯುವಕರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಕಲ್ಲು ತೂರಾಟದಲ್ಲಿ ಪೊಲೀಸ್ ವಾಹನದ ಗಾಜು ಕೂಡ ಒಡೆದಿದೆ. ವಿವಾದ ಬಗೆಹರಿಸಲು ಆಯೋಜಿಸಿದ್ದ ಸಭೆಯಲ್ಲಿ ಮತ್ತೆ ಗಲಾಟೆ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ಪ್ರಕರಣದಲ್ಲಿ ಪೊಲೀಸರು ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯ ಯುವಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
(ಒಂದು ವೇಳೆ ಯಾವುದೇ ಸಂದೇಶ ಆಕ್ಷೇಪಾರ್ಹವೆಂದು ಕಂಡುಬಂದಲ್ಲಿ, ಅದರ ವಿರುದ್ಧ ಪೊಲೀಸರಿಗೆ ದೂರು ನೀಡುವ ಸ್ವಾತಂತ್ರ್ಯವನ್ನು ಪ್ರಜಾಪ್ರಭುತ್ವ ನೀಡಿದೆ. ಹಾಗೆ ಮಾಡದೆ ಮತಾಂಧ ಮುಸ್ಲಿಮರು ಹಿಂದೂಗಳ ಮೇಲೆ ಹಲ್ಲೆ ಮಾಡುವುದೆಂದರೆ ಅದರ ಅರ್ಥ ಸ್ಪಷ್ಟವಾಗಿದೆ. ಅವರು ದೇಶದ ಸಂವಿಧಾನವನ್ನೇ ನಂಬುವುದಿಲ್ಲ. ಅಂತಹ ಮನಸ್ಥಿತಿಯಿಂದಲೇ ಇಂತಹ ದಾಳಿಗಳು ಪದೇ ಪದೇ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ‘ಅವರಿಗೆ ಧರ್ಮವೇ ಮೊದಲು ಮತ್ತು ಕೊನೆ’ ಎಂದು ಯಾರಾದರೂ ಹೇಳಿದರೆ ಅದರಲ್ಲಿ ತಪ್ಪೇನಿದೆ? -ಸಂಪಾದಕರು)
೧. ‘ಬಲಿದಾನ ಮಾಸ’ದ ನಿಮಿತ್ತ ಗ್ರಾಮದ ಯುವಕರ ಸಾಮಾಜಿಕ ಜಾಲತಾಣದ ಗುಂಪಿನಲ್ಲಿ ಸಂದೇಶವೊಂದು ಪ್ರಸಾರವಾಗಿತ್ತು. ಇದಕ್ಕೆ ಮತಾಂಧರು ಆಕ್ಷೇಪ ವ್ಯಕ್ತಪಡಿಸಿ ಅಸಭ್ಯ ಭಾಷೆಯಲ್ಲಿ ಪ್ರತ್ಯುತ್ತರ ನೀಡಿದರು. ಈ ಬಗ್ಗೆ ವಿಚಾರಿಸಲು ಹೋದ ಹಿಂದೂ ಯುವಕರ ಮೇಲೆ ಹಲ್ಲೆ ನಡೆಸಲಾಯಿತು.
೨. ಈ ಘಟನೆ ತಿಳಿಯುತ್ತಿದ್ದಂತೆಯೇ ಗ್ರಾಮದ ಹಿಂದೂಗಳು ಒಗ್ಗೂಡಿ ಹಲ್ಲೆಕೋರರು ಅಡಗಿದ್ದ ಸ್ಥಳಕ್ಕೆ ತಲುಪಿದರು. ಈ ಸಮಯದಲ್ಲಿ ಪ್ರಾರ್ಥನಾ ಮಂದಿರವೊಂದರಿಂದ ಹಿಂದೂಗಳ ಮೇಲೆ ಕಲ್ಲು ತೂರಾಟ ನಡೆಸಲಾಯಿತು. (ಪ್ರಾರ್ಥನಾ ಮಂದಿರವು ಪ್ರಾರ್ಥನೆಗಾಗಿ ಇದೆಯೇ ಅಥವಾ ಇಂತಹ ಧರ್ಮೀಯರ ಮೇಲೆ ಕಲ್ಲು ತೂರಾಟ ನಡೆಸಲು ಇದೆಯೇ? ಇದರ ತನಿಖೆ ನಡೆಸಿ ಕೊಲ್ಹಾಪುರ ಪೊಲೀಸರು ಉತ್ತರ ನೀಡಬೇಕು! – ಸಂಪಾದಕರು). ವೃತ್ತದಲ್ಲಿ ನಿಲ್ಲಿಸಲಾಗಿದ್ದ ಕೆಲವು ದ್ವಿಚಕ್ರ ವಾಹನಗಳನ್ನೂ ಜಖಂಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ೨ ದಿನಗಳ ಕಾಲ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪೊಲೀಸರ ಉದ್ಧಟತನದ ವರ್ತನೆ!ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಹಿಂದುತ್ವನಿಷ್ಠ ಶ್ರೀ. ರಾಂಭಾವು ಮೆಥೆ ಅವರು ಹೀಗೆಂದರು, “ಪೊಲೀಸ್ ಆಡಳಿತಕ್ಕೆ ಮನವಿ ಸಲ್ಲಿಸಲು ಹಿಂದುತ್ವನಿಷ್ಠರು ಹೋಗಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಹಿಂದೂ ಯುವಕರನ್ನೇ ಅಪರಾಧಿಗಳೆಂದು ಬಿಂಬಿಸುತ್ತಾ, ‘ಹಿಂದೂ ಯುವಕರು ವಾಟ್ಸಾಪ್ನಲ್ಲಿ ಸಂದೇಶ ಪ್ರಸಾರ ಮಾಡುವ ಅಗತ್ಯವೇನಿತ್ತು?’ ಎಂದು ಪ್ರಶ್ನಿಸಿದರು. (ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರವೇ? – ಸಂಪಾದಕರು). ಈ ಘಟನೆಯಲ್ಲಿ ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆದಿರುವುದನ್ನು ಗಮನಕ್ಕೆ ತಂದಾಗ, ‘ಅದನ್ನು ಪೊಲೀಸರು ನೋಡಿಕೊಳ್ಳುತ್ತಾರೆ’ ಎಂದು ಉದ್ಧಟತನದ ಉತ್ತರ ನೀಡಿದರು.” |
(ಕಾನೂನು ಸುವ್ಯವಸ್ಥೆಯ ಭಯ ಇರಿಸಲಾಗದ ಪೊಲೀಸರ ಮರ್ಮವನ್ನೇ ಹಿಂದೂಗಳು ಹಿಡಿದಿದ್ದರಿಂದ ಅವರು ಇಂತಹ ಉದ್ಧಟತನದ ಉತ್ತರ ನೀಡುತ್ತಿದ್ದಾರೆ. ಅವರ ಮೇಲೆ ಯಾರಾದರೂ ದಾಳಿ ಮಾಡಿದರೆ, ಅವರ ಸಹಾಯಕ್ಕೆ ಕೇವಲ ಹಿಂದೂ ಸಮಾಜ ಮಾತ್ರ ಬರಲು ಸಾಧ್ಯವೇ ಹೊರತು ಮತ್ಯಾರೂ ಅಲ್ಲ ಎಂಬುದು ಅವರು ನೆನಪಿಡಬೇಕು! – ಸಂಪಾದಕರು)
ಸಂಪಾದಕೀಯ ನಿಲುವು
|
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !