ಮತಾಂತರ ತಡೆಯುವ ಕಾಯ್ದೆಯನ್ನು ಅಕ್ರಮ ಎಂದು ಘೋಷಿಸಿ ಅಡ್ಡಿಪಡಿಸಲು ಕಾಂಗ್ರೆಸ್ ಪ್ರಯತ್ನ !

ಮುಂಬಯಿ – ಮೈತ್ರಿ ಒಕ್ಕೂಟ ಸರಕಾರವು ವಿಧಾನಸಭೆಯಲ್ಲಿ ಅಂಗೀಕರಿಸಿದ ‘ಧರ್ಮ ಸ್ವಾತಂತ್ರ್ಯ ಅಧಿನಿಯಮ ೨೦೨೬’ ವಿಧೇಯಕಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಕಾಂಗ್ರೆಸ್ ಕಾರ್ಯದರ್ಶಿ ಸಚಿನ ಸಾವಂತ ಅವರು ಈ ಕಾಯ್ದೆಯ ಹೆಸರಿನಲ್ಲೇ ವಿರೋಧಾಭಾಸವಿದೆ ಎಂದು ಹೇಳುತ್ತಾ ‘ಈ ವಿಧೇಯಕವು ಸಂವಿಧಾನಕ್ಕೆ ವಿರುದ್ಧವಾಗಿದೆ’ ಎಂದು ಅಸಂಬದ್ಧವಾಗಿ ಮಾತನಾಡಿದ್ದಾರೆ. ಈ ಸಮಯದಲ್ಲಿ ಮತಾಂತರ ತಡೆಯುವ ಕಾಯ್ದೆಗೆ ಅಡ್ಡಿಪಡಿಸಲು ಪ್ರಯತ್ನಿಸಿದ ಅವರು, ‘ರಾಮಚರಿತಮಾನಸ’ದ ಸಾಲುಗಳ ವಿಕೃತ ವಿವರಣೆಯನ್ನೂ ನೀಡಿದರು. ಈ ಕಾಯ್ದೆಯಲ್ಲಿನ ನಿಬಂಧನೆಗಳು ಧಾರ್ಮಿಕ ಧ್ರುವೀಕರಣ ಮಾಡುವಂತಿವೆ ಎಂದೂ ಅವರು ಇದೇ ವೇಳೆ ಟೀಕಿಸಿದರು. (‘ಲವ್ ಜಿಹಾದ್’ ಮತ್ತು ಇತರ ಮಾರ್ಗಗಳ ಮೂಲಕ ಹಿಂದೂಗಳ ಮತಾಂತರ ರಾಜಾರೋಷವಾಗಿ ನಡೆಯುತ್ತಿದ್ದರೂ ಅದರ ಬಗ್ಗೆ ತುಟಿಪಿಟಕ್ ಎನ್ನದ ಕಾಂಗ್ರೆಸ್ ನಾಯಕ ಸಚಿನ ಸಾವಂತ ಅವರಿಗೆ ‘ಧರ್ಮ ಸ್ವಾತಂತ್ರ್ಯ ವಿಧೇಯಕ’ದ ಬಗ್ಗೆ ಮಾತನಾಡುವ ಅಧಿಕಾರವಿದೆಯೇ? – ಸಂಪಾದಕರು)
ಸಾವಂತ ಅವರು ಮಾತನಾಡುತ್ತಾ, ಮತಗಳ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಪ್ರಯತ್ನದಲ್ಲಿ ಭಾಜಪ ‘ಹಿಂದೂ ಧರ್ಮದ ಓಲೈಕೆ’ ಮಾಡುತ್ತಿರುವುದು ಮಾತ್ರವಲ್ಲದೆ, ತನ್ನ ಮನುವಾದಿ ಸಿದ್ಧಾಂತವನ್ನೂ ಒತ್ತಿ ಹೇಳುತ್ತಿದೆ. ಮಹಿಳೆಯರು ಮತ್ತು ಪರಿಶಿಷ್ಟ ಜಾತಿ-ಪಂಗಡಗಳ ಬಗ್ಗೆ ಭಾಜಪದ ಮಾನಸಿಕತೆಯು ವರ್ಣಭೇದ ಮಾಡುವುದಾಗಿದೆ ಎಂದೂ ಅವರು ಆರೋಪಿಸಿದರು.
‘ಧರ್ಮ ಸ್ವಾತಂತ್ರ್ಯ ಅಧಿನಿಯಮ ೨೦೨೬’ ವಿಧೇಯಕದ ಬಗ್ಗೆ ಕಾಂಗ್ರೆಸ್ಸಿನ ಸಚಿನ ಸಾವಂತ ಅವರು, ‘‘ಭಾಜಪ ಪರವಾಗಿ ಮಹಿಳೆಯರು ಮತ್ತು ಪರಿಶಿಷ್ಟ ಜಾತಿ-ಪಂಗಡದ ಜನರು ಆಮಿಷಗಳಿಗೆ ಒಳಗಾಗಿ ಮತಾಂತರ ಅಥವಾ ‘ಲವ್ ಜಿಹಾದ್’ಗೆ ಬಲಿಯಾಗುತ್ತಾರೆ ಎಂಬ ಕಲ್ಪನೆಯನ್ನು ಬಹಿರಂಗವಾಗಿ ಮಂಡಿಸಲಾಗುತ್ತದೆ. ‘ಢೋಲ್, ಗವಾರ್, ಶೂದ್ರ ಔರ್ ನಾರಿ, ಸಬ್ ತಾಡನ್ ಕೆ ಅಧಿಕಾರಿ’ ಎಂಬ ಮಾನಸಿಕತೆಯು ನಿಜವಾಗಿ ಮನುಸ್ಮೃತಿಯಿಂದ ಬಂದಿದೆ’ ಎಂದರು. (ಈ ಸಾಲು ‘ಮನುಸ್ಮೃತಿ’ಯದ್ದಲ್ಲ, ಇದು ಗೋಸ್ವಾಮಿ ತುಳಸೀದಾಸರು ರಚಿಸಿದ ‘ರಾಮಚರಿತಮಾನಸ’ದ ‘ಸುಂದರಕಾಂಡ’ದ್ದಾಗಿದೆ. ಸಮುದ್ರವು ಶ್ರೀರಾಮನಿಗೆ ದಾರಿ ಬಿಡದಿದ್ದಾಗ ಮತ್ತು ಕೊನೆಗೆ ಶರಣಾದಾಗ, ಸಮುದ್ರವು ತನ್ನ ಜಡತ್ವದ ಬಗ್ಗೆ ಹೇಳುವಾಗ ಮೇಲಿನ ಮಾತನ್ನು ಹೇಳುತ್ತದೆ. ‘ಢೋಲ್, ಗವಾರ್, ಶೂದ್ರ, ಪಶು, ನಾರಿ | ಸಕಲ ತಾಡನಾ ಕೆ ಅಧಿಕಾರಿ ||’ ಇಲ್ಲಿ ‘ತಾಡನ’ ಎಂಬ ಪದಕ್ಕೆ ‘ಶಿಕ್ಷಿಸುವುದು ಅಥವಾ ವಾದ ಮಾಡುವುದು’ ಎಂಬ ಅರ್ಥವನ್ನು ತೆಗೆದುಕೊಳ್ಳಲಾಗುತ್ತದೆ; ಆದರೆ ವಿದ್ವಾಂಸರ ಪ್ರಕಾರ ‘ತಾಡನ’ ಎಂದರೆ ‘ಸಂಭಾಳಿಸುವುದು ಅಥವಾ ಮಾರ್ಗದರ್ಶನ ಮಾಡುವುದು’ ಎಂಬ ಇನ್ನೊಂದು ಅರ್ಥವೂ ಇದೆ. ಹೇಗೆ ‘ಢೋಲ್’ (ಚರ್ಮವಾದ್ಯ) ಎಂಬ ವಾದ್ಯದಿಂದ ಸರಿಯಾದ ಸ್ವರ ಬರಲು ಅದರ ಮೇಲೆ ಗಮನ ಹರಿಸಬೇಕಾಗುತ್ತದೆಯೋ, ಹಾಗೆಯೇ ಈ ಘಟಕಗಳಿಗೆ ಮಾರ್ಗದರ್ಶನ ನೀಡಿ ಸಂಭಾಳಿಸಬೇಕು ಎಂಬುದು ಇದರ ಅರ್ಥವಾಗಿದೆ. ಸಾವಂತ ಅವರ ಪ್ರಕಾರವೇ ಅರ್ಥ ಮಾಡಿಕೊಳ್ಳುವುದಾದರೆ, ಸರಕಾರವು ಈ ವಿಧೇಯಕದ ಮೂಲಕ ಮೇಲಿನ ಘಟಕಗಳ ‘ತಾಡನ’ವನ್ನು (ಹಿಂಸೆಯನ್ನು) ತಡೆದು ಅವರ ‘ತಾರಣಹಾರ’ (ರಕ್ಷಕ) ಆಗಿದೆ ಎಂದಲ್ಲವೇ?)
ಈ ವಿಧೇಯಕವು ನಾಗರಿಕರ ಸ್ವಂತ ಜೀವನಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕನ್ನು ಕಸಿದುಕೊಳ್ಳುವಂತಿದೆ. ೧೮ ವರ್ಷ ಮೇಲ್ಪಟ್ಟ ವ್ಯಕ್ತಿಗೆ ಮತದಾನದ ಹಕ್ಕಿದೆ, ಹಾಗಿರುವಾಗ ಅವರು ಸ್ವಂತ ನಿರ್ಧಾರ ತೆಗೆದುಕೊಳ್ಳುವುದನ್ನು ತಡೆಯುವುದು ತಪ್ಪು. ಬಲವಂತದ ಮತಾಂತರಕ್ಕೆ ವಿರೋಧ ಇರಲೇಬೇಕು; ಆದರೆ ಈ ವಿಧೇಯಕದಲ್ಲಿ ಬಳಸಿರುವ ‘ಮುಗ್ಧ ವ್ಯಕ್ತಿ’ ಎಂಬ ಪದ ಅಸ್ಪಷ್ಟವಾಗಿದೆ. ಸರಕಾರ ಇದರ ವ್ಯಾಖ್ಯಾನವನ್ನು ಸ್ಪಷ್ಟಪಡಿಸಬೇಕು. ಪ್ರಾಪ್ತ ವಯಸ್ಕ ವ್ಯಕ್ತಿಗೆ ಕೇವಲ ಮತಾಂತರದ ಬಗ್ಗೆ ಸಲಹೆ ನೀಡಿದರೆ, ಇನ್ನೊಬ್ಬ ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸುವುದು ಸರಿಯಲ್ಲ. ‘ವ್ಯಕ್ತಿಗಳು ಮತ್ತು ಕುಟುಂಬಗಳು ಆರ್ಥಿಕ ದೌರ್ಬಲ್ಯದಿಂದಾಗಿ ಮತಾಂತರಕ್ಕೆ ಬಲಿಯಾಗುತ್ತಾರೆ’ ಎಂಬುದು ಸರಕಾರದ ವಾದವಾಗಿದ್ದರೆ, ಅವರ ಈ ದೌರ್ಬಲ್ಯವನ್ನು ಹೋಗಲಾಡಿಸಲು ಸರಕಾರ ಏನು ಪ್ರಯತ್ನ ಮಾಡಲಿದೆ? ಎಂದು ಸಾವಂತ ಪ್ರಶ್ನಿಸಿದರು. (‘ಮುಗ್ಧ ವ್ಯಕ್ತಿ’ ಎಂಬ ಪದದ ಮೇಲೆ ತಾಂತ್ರಿಕ ವಾದ ಮಾಡುವ ಬದಲಿ ಆಮಿಷ ಮತ್ತು ವಂಚನೆಯ ಮೂಲಕ ನಡೆಯುವ ಹಿಂದೂಗಳ ಮತಾಂತರವನ್ನು ತಡೆಯುವುದು ಹೆಚ್ಚು ಮಹತ್ವದ್ದಾಗಿದೆ. ಹಿಂದೂಗಳ ರಕ್ಷಣೆಗಾಗಿ ತೆಗೆದುಕೊಂಡ ನಿರ್ಧಾರವನ್ನು ‘ಧಾರ್ಮಿಕ ಧ್ರುವೀಕರಣ’ ಎಂದು ಕರೆಯುವುದು ಕಾಂಗ್ರೆಸ್ಸಿನ ಹಳೆಯ ನೀತಿಯ ಭಾಗವಾಗಿದೆ! – ಸಂಪಾದಕರು)
ಸಂಪಾದಕೀಯ ನಿಲುವುಮತಾಂತರ ತಡೆಯಲು ತಂದಿರುವ ಕಾಯ್ದೆಯನ್ನು ‘ಸಂವಿಧಾನ ಬಾಹಿರ’ ಎಂದು ಕರೆಯುವುದು ಒಂದು ರೀತಿಯಲ್ಲಿ ಮತಾಂತರ ಮಾಡುವ ಶಕ್ತಿಗಳಿಗೆ ಬಲ ನೀಡಿದಂತೆಯೇ ಸರಿ! ಆದ್ದರಿಂದ ವಾಸ್ತವವಾಗಿ ಇದೇ ಸಂವಿಧಾನ ಬಾಹಿರವಾಗಿದೆ! ಆದರೆ ಪಕ್ಷದ ಹುಟ್ಟಿನಿಂದಲೇ ಮತಾಂಧರ ಓಲೈಕೆ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಬಲವಂತವಾಗಿ ಮತಾಂತರಕ್ಕೆ ಒಳಗಾಗುವ ಹಿಂದೂಗಳ ವೇದನೆ ಹೇಗೆ ತಾನೇ ಅರ್ಥವಾಗಲು ಸಾಧ್ಯ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!