ಇಸ್ಲಾಂ ಧರ್ಮವನ್ನು ನಿಂದಿಸುವ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ನಾಜಿಯಾ ಇಲಾಹಿ ಖಾನ್ ಅವರು ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ

ಖರಗೋನ್ (ಮಧ್ಯಪ್ರದೇಶ) – ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಮತ್ತು ಇಸ್ಲಾಂನ ತತ್ವನಿಷ್ಠ ವಿಮರ್ಶಕಿ ನಾಜಿಯಾ ಇಲಾಹಿ ಖಾನ್ ಅವರು ನಟಿ ಮೊನಾಲಿಸಾ ಮತ್ತು ಫರಮಾನ್ ಖಾನ್ ಅವರ ವಿವಾಹದ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ವಿವಾಹವು ಕಾನೂನುಬದ್ಧವಾಗಿ ಮಾನ್ಯವಾಗಿಲ್ಲ. ಇದರಿಂದ ಹಿಂದೂ ವಿವಾಹ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದರು. ಮೊನಾಲಿಸಾಳನ್ನು ಸಿರಿಯಾಕ್ಕೆ ಕಳುಹಿಸಲು ಸಿದ್ಧತೆ ನಡೆಯುತ್ತಿದೆ ಎಂಬ ಸಂಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ನಾಜಿಯಾ ಇಲಾಹಿ ಖಾನ್ ಅವರು ಎತ್ತಿರುವ ಗಂಭೀರ ಅಂಶಗಳು!
೧. ಈ ವಿವಾಹದಲ್ಲಿ ಹಿಂದೂ ಪರಂಪರೆಗಳನ್ನು ದುರ್ಬಳಕೆ ಮಾಡಿಕೊಂಡು ಅವುಗಳನ್ನು ಅಪಹಾಸ್ಯ ಮಾಡಲಾಗಿದೆ. ಫರಮಾನ್ ತನ್ನನ್ನು ಇಂದಿಗೂ ಮುಸಲ್ಮಾನ ಎಂದು ಕರೆದುಕೊಳ್ಳುತ್ತಿದ್ದರೆ, ಅವನು ಹಿಂದೂ ವಿಧಿವಿಧಾನಗಳ ಪ್ರಕಾರ ದೇವಸ್ಥಾನದಲ್ಲಿ ಹೇಗೆ ವಿವಾಹವಾಗಬಲ್ಲನು?
೨. ಹಿಂದೂ ವಿವಾಹ ಕಾಯ್ದೆಯ ಪ್ರಕಾರ ವಿವಾಹಕ್ಕಾಗಿ ಎರಡೂ ಪಕ್ಷಗಳು ಹಿಂದೂಗಳಾಗಿರುವುದು ಅವಶ್ಯಕವಾಗಿರುವುದರಿಂದ, ಈ ವಿವಾಹವು ಕಾನೂನುಬದ್ಧವಾಗಿ ಸಂಶಯಾಸ್ಪದವಾಗಿ ಕಾಣುತ್ತದೆ.
೩. ಈ ಇಡೀ ಪ್ರಕರಣವು ಯೋಜಿತ ‘ಲವ್ ಜಿಹಾದ್’ ಆಗಿದ್ದು, ನಿಷೇಧಿತ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ (ಪಿ.ಎಫ್.ಐ.ನ) ಮತ್ತು ಇಸ್ಲಾಮಿಕ್ ಉಗ್ರಗಾಮಿ ಸಿದ್ಧಾಂತದ ಪಾಲ್ಗೊಳ್ಳುವಿಕೆ ಇದರಲ್ಲಿರುವ ಸಾಧ್ಯತೆಯಿದೆ.
೪. ‘ಪಿ.ಎಫ್.ಐ.’ನ ದೊಡ್ಡ ಜಾಲದಿಂದಾಗಿ ಕೇರಳವು ಇಂತಹ ಘಟನೆಗಳಿಗೆ ಅನುಕೂಲಕರ ಸ್ಥಳವಾಗುತ್ತಿದೆ. ಮೊನಾಲಿಸಾಳಿಗಾಗಿ ತುರ್ತಾಗಿ ಮಾಡಲಾದ ಪಾಸ್‌ಪೋರ್ಟ್ ಅವಳನ್ನು ಸಿರಿಯಾಕ್ಕೆ ಕಳುಹಿಸುವ ದೊಡ್ಡ ಪಿತೂರಿಯ ಭಾಗವಾಗಿರಬಹುದು.
ಸಂಪಾದಕೀಯ ನಿಲುವುಲವ್ ಜಿಹಾದಿಗಳ ಸಾಮಾನ್ಯ ‘ಮೋಡಸ್ ಆಪರೆಂಡಿ’ (ಕಾರ್ಯವೈಖರಿ)ಯನ್ನು ಅಧ್ಯಯನ ಮಾಡಿದರೆ ನಾಜಿಯಾ ಖಾನ್ ಅವರು ವ್ಯಕ್ತಪಡಿಸಿದ ಸಾಧ್ಯತೆಯು ಖಂಡಿತವಾಗಿಯೂ ನಿಜವಾಗಬಹುದು ಎಂಬುದನ್ನು ಗಮನಿಸಬೇಕು ! |
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
ಹಸು ಹಿಂದೂಗಳಿಗೆ ಪವಿತ್ರ: ಅದರ ಹತ್ಯೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು! – ಗುಜರಾತ್ ಹೈಕೋರ್ಟ್
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್