ಭಾಗ್ಯನಗರದ ಉದ್ಧಟ ಮುಲ್ಲಾನಿಂದ ರಸ್ತೆಗಳಲ್ಲಿ ನಮಾಜ್ ಮಾಡಲು ಮುಸಲ್ಮಾನರಿಗೆ ಕರೆ! – Syed Ayub

ಭಾಗ್ಯನಗರ (ತೆಲಂಗಾಣ) – ಈದ್ ಮುನ್ನ ನಗರದ ಮುಲ್ಲಾ (‘ಮುಲ್ಲಾ’ ಎಂದರೆ ಶರಿಯತ್ ಮತ್ತು ಇಸ್ಲಾಮಿಕ್ ಸಿದ್ಧಾಂತಗಳ ಅಭ್ಯಾಸಿ) ಸೈಯದ್ ಅಯೂಬ್ ಎಂಬಾತನ ವಿವಾದಾತ್ಮಕ ವಿಡಿಯೋವೊಂದು ಪ್ರಸಾರವಾಗಿದೆ. ಈ ವಿಡಿಯೋದಲ್ಲಿ ಆತ ಮುಸಲ್ಮಾನರಿಗೆ ರಸ್ತೆಗಳಲ್ಲಿ ನಮಾಜ್ ಮಾಡುವಂತೆ ಕರೆ ನೀಡಿದ್ದಾನೆ. ‘ಹೈದರಾಬಾದ್ ಯೂತ್ ಕರೇಜ್’ ಎಂಬ ಸ್ವಯಂಸೇವಾ ಸಂಸ್ಥೆಯ ಆಯೋಜಕನೆಂದು ಹೇಳಿಕೊಳ್ಳುವ ಸೈಯದ್ ಅಯೂಬ್‌ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುಮಾರು 20 ಲಕ್ಷ ಅನುಯಾಯಿಗಳಿದ್ದಾರೆ.

1. ಈ ವಿಡಿಯೋದಲ್ಲಿ ಅಯೂಬ್, ರಸ್ತೆಗಳಲ್ಲಿ ನಮಾಜ್ ಮಾಡುವ ಕರೆ ಕೇವಲ ಸಂಭಲ್ (ಉತ್ತರ ಪ್ರದೇಶ) ಮುಸಲ್ಮಾನರಿಗೆ ಮಾತ್ರವಲ್ಲದೆ ಇಡೀ ದೇಶದ ಮುಸಲ್ಮಾನರಿಗೆ ನೀಡಲಾಗಿದೆ ಎಂದು ಹೇಳಿದ್ದಾನೆ.

2. ರಸ್ತೆಗಳಲ್ಲಿ ನಮಾಜ್ ಮಾಡುವುದರ ಬಗ್ಗೆ ಎಚ್ಚರಿಕೆ ನೀಡುವ ಆಡಳಿತಾಧಿಕಾರಿಗಳಿಗೂ ಆತ ಸವಾಲು ಹಾಕಿದ್ದಾನೆ. ವಿಡಿಯೋದಲ್ಲಿ ಅವನು, “ಮುಸಲ್ಮಾನರನ್ನು ರಸ್ತೆಗಳಲ್ಲಿ ನಮಾಜ್ ಮಾಡುವುದರಿಂದ ತಡೆಯಬಹುದು ಎಂದು ಯಾರಿಗಾದರೂ ಅನಿಸಿದರೆ, ಅವರು ಪ್ರಯತ್ನಿಸಿ ನೋಡಲಿ. ಮುಸಲ್ಮಾನರು ಮೊಕದ್ದಮೆಗಳಿಗೆ ಅಥವಾ ಜೈಲಿನ ಬೆದರಿಕೆಗಳಿಗೆ ಹೆದರುವುದಿಲ್ಲ” ಎಂದು ಹೇಳಿದ್ದಾನೆ.

3. ಅಯೂಬ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಗ್ಗೆಯೂ ಅವಹೇಳನಕಾರಿ ಶಬ್ದಗಳನ್ನು ಬಳಸಿದ್ದಾನೆ. ಯೋಗಿ ಸರಕಾರದ ಬಗ್ಗೆ ಟೀಕೆ ಮಾಡುತ್ತಾ, ಮುಸಲ್ಮಾನರ ಮೇಲೆ ಅನಗತ್ಯ ನಿರ್ಬಂಧಗಳನ್ನು ಹೇರಲಾಗುತ್ತಿದೆ ಎಂದು ಆರೋಪಿಸಿದ್ದಾನೆ.

4. ಉತ್ತರ ಪ್ರದೇಶದ ಸಂಭಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಕುಲದೀಪ್ ಕುಮಾರ್ ಅವರು ‘ಶಾಂತಿ ಸಮಿತಿ’ಯ ಸಭೆ ನಡೆಸಿ, ಸಾರ್ವಜನಿಕ ರಸ್ತೆಗಳಲ್ಲಿ ನಮಾಜ್ ಮಾಡಲು ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಮಸೀದಿಗಳ ಹೊರಗಿನ ಸಾರ್ವಜನಿಕ ರಸ್ತೆಗಳಲ್ಲಿ ನಮಾಜ್ ಮಾಡುವುದು ಕಂಡುಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.

ಸಂಪಾದಕೀಯ ನಿಲುವು

ದೇಶದ ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲು ಹಾಕುವವರು ದೇಶದ್ರೋಹಿಗಳೇ ಆಗಿದ್ದಾರೆ. ಇಂತಹವರ ವಿರುದ್ಧ ದೇಶದ್ರೋಹದ ಮೊಕದ್ದಮೆಗಳನ್ನು ದಾಖಲಿಸಿ ಅವರನ್ನು ಜೈಲಿಗೆ ಅಟ್ಟಬೇಕು!