ಕಾ. ಗೋವಿಂದ ಪಾನ್ಸರೆ ಹತ್ಯೆ ಪ್ರಕರಣ

ಕೊಲ್ಲಾಪುರ, 16 ಮಾರ್ಚ್ (ವಾರ್ತೆ.) – ಕಾರ್ಮಿಕರ ಸಂಘಟನೆಯಾದ ‘ಐಟಕ್’, ‘ಭಾರತೀಯ ಕಮ್ಯುನಿಸ್ಟ್ ಪಕ್ಷ’ ಭಾರತದಲ್ಲಿ ಸಮಾನ ನಾಗರಿಕ ಕಾನೂನು ಜಾರಿಗೆ ಬರಲು ಎಂದಿಗೂ ಹೋರಾಟ ಮಾಡಿಲ್ಲ. ನಮ್ಮ ಸಭೆಗಳಲ್ಲಿ ಸಮಾನ ನಾಗರಿಕ ಕಾನೂನು ತರುವ ಕುರಿತು ಎಂದಿಗೂ ಚರ್ಚೆಯಾಗಿಲ್ಲ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಕಾ. ಗೋವಿಂದ ಪಾನ್ಸರೆ ಹತ್ಯೆಯ ಸಾಕ್ಷಿದಾರರಾದ ಶಶಿಕಾಂತ್ ಪಾಟೀಲ್ ಉತ್ತರಿಸಿದರು. ವಕೀಲ ಸೋಮನಾಥ್ ಭರಮಗುಂಡೆ ಅವರು ಪಾಟೀಲ್ ಅವರನ್ನು ಅಡ್ಡವಿಚಾರಣೆ ಮಾಡುತ್ತಿದ್ದು, ಆ ಸಂದರ್ಭದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವಾಗ ಪಾಟೀಲ್ ಮೇಲಿನಂತೆ ಉತ್ತರಿಸಿದರು. ಕಾ. ಪಾನ್ಸರೆ ಹತ್ಯೆ ಪ್ರಕರಣದ ವಿಚಾರಣೆಯು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಸ್. ತಾಂಬೆ ಅವರ ಮುಂದೆ ನಡೆಯುತ್ತಿದೆ.
ಈ ವೇಳೆ ರಕ್ಷಣಾ ಪಕ್ಷದ ಪರವಾಗಿ ವಕೀಲ ಸಮೀರ್ ಪಟವರ್ಧನ್, ವಕೀಲ ವೀರೇಂದ್ರ ಇಚಲಕರಂಜಿಕರ್, ವಕೀಲ ನಾಗೇಶ್ ಜೋಶಿ, ಹಾಗೂ ಸರಕಾರಿ ಪಕ್ಷದ ಪರವಾಗಿ ವಕೀಲ ಶಿವಾಜಿರಾವ್ ರಾಣೆ ಉಪಸ್ಥಿತರಿದ್ದರು. ಈ ಪ್ರಕರಣದ ಮುಂದಿನ ವಿಚಾರಣೆಯು ಏಪ್ರಿಲ್ 8 ರಂದು ನಡೆಯಲಿದೆ.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!