Sangli Conversion Racket Busted : ಸಾಂಗ್ಲಿಯಲ್ಲಿ ಕ್ರೈಸ್ತರ ‘ಪ್ರೇಯರ್ ಫೆಸ್ಟಿವಲ್’ ಕಾರ್ಯಕ್ರಮ ಪೊಲೀಸರಿಂದ ರದ್ದು !

ಅಸಾಧ್ಯ ರೋಗ ವಾಸಿ ಮಾಡುವ ನೆಪ ಮತ್ತು ಹಿಂದೂಗಳ ಮತಾಂತರದ ಸಂಚು

ಸಾಂಗ್ಲಿ, ೧೪ ಮಾರ್ಚ್ (ವಾರ್ತೆ) – ಜಿಲ್ಲೆಯ ಕವಲಾಪುರ ವಿಮಾನ ನಿಲ್ದಾಣದ ಬಳಿ ಆಯೋಜಿಸಲಾಗಿದ್ದ ‘ಮಹಾರಾಷ್ಟ್ರ ಪ್ರೇಯರ್ ಫೆಸ್ಟಿವಲ್-೨೦೨೬’ ಎಂಬ ಕ್ರೈಸ್ತ ಮಿಷನರಿಗಳ ಕಾರ್ಯಕ್ರಮದಲ್ಲಿ ನಿಯಮ ಮತ್ತು ಷರತ್ತುಗಳನ್ನು ಗಾಳಿಗೆ ತೂರಿ, ಅಸಾಧ್ಯ ರೋಗಗಳನ್ನು ವಾಸಿ ಮಾಡುವ ಸುಳ್ಳು ದಾವೆ ಹೂಡಿ ಹಿಂದೂಗಳನ್ನು ಮತಾಂತರಿಸುವ ಪ್ರಯತ್ನ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕೆ ಸಕಲ ಹಿಂದೂ ಸಮಾಜ ಮತ್ತು ಹಿಂದುತ್ವನಿಷ್ಠರ ಪ್ರಖರ ವಿರೋಧ ಹಾಗೂ ನಿಯಮಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಸಾಂಗ್ಲಿ ಗ್ರಾಮಾಂತರ ಪೊಲೀಸರು ಕಾರ್ಯಕ್ರಮದ ಅನುಮತಿಯನ್ನು ರದ್ದುಗೊಳಿಸಿದ್ದಾರೆ.

ಏನಿದು ಪ್ರಕರಣ ?

ಕವಲಾಪುರದಲ್ಲಿ (ತಾಲ್ಲೂಕು ಮಿರಜ) ಮಾರ್ಚ್ ೧೩ ರಿಂದ ೧೫ ರವರೆಗೆ ಚೆನ್ನೈನ ‘ಜೀಸಸ್ ಕಾಲ್ಸ್’ ಸಂಸ್ಥೆಯ ಡಾ. ಪಾಲ್ ದಿನಕರನ್, ಸ್ಯಾಮ್ಯುಯೆಲ್ ದಿನಕರನ್ ಮತ್ತು ಅವರ ಸಹಚರರು ‘ಮಹಾರಾಷ್ಟ್ರ ಪ್ರೇಯರ್ ಫೆಸ್ಟಿವಲ್’ ಹೆಸರಿನ ಭವ್ಯ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಕಥಿತ ಪವಾಡಗಳು, ‘ಚಂಗಾಯಿ’ (ರೋಗಮುಕ್ತಿ ಸಭೆ) ಮತ್ತು ಪ್ರಾರ್ಥನೆಗಳ ಮೂಲಕ ಅಸಾಧ್ಯ ರೋಗಗಳನ್ನು ವಾಸಿ ಮಾಡುವುದಾಗಿ ದಾವೆ ಮಾಡಲಾಗಿತ್ತು. ಆಡಳಿತ ವರ್ಗವು ವಿಧಿಸಿದ್ದ ಷರತ್ತುಗಳನ್ನು ಆಯೋಜಕರು ಉಲ್ಲಂಘಿಸಿದ್ದರು. ಮುಗ್ಧ ಹಿಂದೂಗಳನ್ನು ಮತಾಂತರಿಸುವ ಸಂಚು ಇದೆಂದು ತಿಳಿದ ತಕ್ಷಣ ಸ್ಥಳೀಯ ಸಂಘಟನೆಗಳು ಧ್ವನಿ ಎತ್ತಿದ್ದವು.

ಕಾರ್ಯಕ್ರಮದಲ್ಲಾದ ಸುಳ್ಳು ದಾವೆಗಳೇನು ?

ಈ ಸಭೆಯಲ್ಲಿ ಹಿಂದೂಗಳನ್ನು ಹಾದಿ ತಪ್ಪಿಸಲು ಕೆಲವು ವ್ಯಕ್ತಿಗಳನ್ನು ವೇದಿಕೆಗೆ ಕರೆಸಿ ಅವರ ‘ಅನುಭವ’ಗಳನ್ನು ಹೇಳಿಸಲಾಯಿತು. ವ್ಯಕ್ತಿಯೊಬ್ಬರು, ‘ನನಗೆ ನಾಲ್ಕನೇ ಹಂತದ ಕ್ಯಾನ್ಸರ್ ಇತ್ತು, ವೈದ್ಯರು ನಾನು ಕೇವಲ ೧೫ ದಿನ ಬದುಕುತ್ತೇನೆ ಎಂದಿದ್ದರು; ಆದರೆ ಡಾ. ಪಾಲ್ ದಿನಕರನ್ ಪ್ರಾರ್ಥನೆ ಮಾಡಿದ ಕೂಡಲೇ ನನ್ನ ಶರೀರದಲ್ಲಿದ್ದ ದುಷ್ಟ ಶಕ್ತಿಗಳು ಹೊರಟುಹೋದವು ಮತ್ತು ನಾನು ಗುಣಮುಖನಾದೆ’ ಎಂದು ಹೇಳಿಕೆ ನೀಡಿದರು. ಸುಜಿ ಎಂಬ ಮಹಿಳೆಯೊಬ್ಬರು, ‘ಡಾ. ಪಾಲ್ ದಿನಕರನ್ ನನ್ನ ತಲೆಯ ಮೇಲೆ ಕೈ ಇಟ್ಟ ತಕ್ಷಣ ನನ್ನ ರಕ್ತದ ಕಾಯಿಲೆ ವಾಸಿಯಾಯಿತು ಮತ್ತು ಓದಿನಲ್ಲಿ ದಡ್ಡಳಾಗಿದ್ದರೂ ಪದವಿ ಪರೀಕ್ಷೆಯಲ್ಲಿ ಶೇ. ೯೯ ಅಂಕಗಳು ಬಂದವು’ ಎಂದು ದಾವೆ ಮಾಡಿದರು.

ಪೊಲೀಸರಿಂದ ಕಠಿಣ ಕ್ರಮ !

‘ವೈದ್ಯಕೀಯ ಚಿಕಿತ್ಸೆ ಬಿಟ್ಟು ಕೇವಲ ಪ್ರಾರ್ಥನೆಯಿಂದ ಗಂಭೀರ ಕಾಯಿಲೆಗಳು ವಾಸಿಯಾಗುತ್ತವೆ’ ಎಂದು ಅಪಪ್ರಚಾರ ಮಾಡಿ ಸಮಾಜಕ್ಕೆ ವಂಚಿಸಿದ ಹಿನ್ನೆಲೆಯಲ್ಲಿ ಸಾಂಗ್ಲಿ ಗ್ರಾಮಾಂತರ ಪೊಲೀಸರು ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾರ್ಯಕ್ರಮ ರದ್ದುಗೊಳಿಸಿದ್ದಾರೆ ಎಂದು ಪೊಲೀಸ್ ನಿರೀಕ್ಷಕ ಬಿ.ಎ. ತಳೇಕರ ತಿಳಿಸಿದ್ದಾರೆ. ಡಾ. ದಿಲೀಪ ಭೋರೆ, ಡಾ. ರಾವ್ ಸಾಹೇಬ್ ವಾಘಮಾರೆ, ಬಿಷಪ್ ಡಾ. ಪಾಲ್ ದಿನಕರನ್, ಸ್ಯಾಮ್ಯುಯೆಲ್ ದಿನಕರನ್(ಇಬ್ಬರೂ ಚೆನ್ನೈ, ತಮಿಳುನಾಡು), ಸುಜಿ ಮತ್ತು ಇನ್ನೊಬ್ಬ ಅಪರಿಚಿತ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿದೆ. (ದಿಲೀಪ್ ಭೋರೆ ಮತ್ತು ರಾವ್ ಸಾಹೇಬ್ ವಾಘಮಾರೆ ಇವರು ಮತಾಂತರಿ ಕ್ರೈಸ್ತರು. ಇವರು ಮತಾಂತರ ಹೊಂದಿದ್ದರೂ ತಮ್ಮ ಹಿಂದೂ ಹೆಸರುಗಳನ್ನೇ ಉಳಿಸಿಕೊಂಡಿದ್ದಾರೆ; ಏಕೆಂದರೆ ಹಿಂದೂ ಹೆಸರಿನೊಂದಿಗೆ ಮತಾಂತರ ಮಾಡುವುದು ಸುಲಭವಾಗುತ್ತದೆ. ಇಂತಹ ಸಂಚುಗಾರರಿಂದ ಹಿಂದೂಗಳು ಜಾಗರೂಕರಾಗಿರುವುದು ಅವಶ್ಯಕ! – ಸಂಪಾದಕರು)

ಅಂಧಶ್ರದ್ಧಾ ನಿರ್ಮೂಲನಾ ಸಮಿತಿ ಮತ್ತು ಹಮೀದ್ ದಾಭೋಲ್ಕರ್ ಈಗ ಯಾವ ಬಿಲದಲ್ಲಿದ್ದಾರೆ ? – ಮಾಜಿ ಶಾಸಕ ನಿತಿನ್ ಶಿಂದೆ

ಸಾಂಗ್ಲಿ, ೧೪ ಮಾರ್ಚ್ (ವಾರ್ತೆ) – ಹಿಂದೂ ಧರ್ಮದ ಪರಂಪರೆಗಳನ್ನು ‘ಅಂಧಶ್ರದ್ಧೆ’ ಎಂದು ಟೀಕಿಸುವ ಡಾ. ಹಮೀದ್ ದಾಭೋಲ್ಕರ್ ಮತ್ತು ಅವರ ಸಮಿತಿಯು ಈಗ ಪಾಲ್ ದಿನಕರನ್ ಕಾರ್ಯಕ್ರಮದ ವೇಳೆ ಎಲ್ಲಿ ಅಡಗಿದೆ? ಎಂದು ‘ಹಿಂದೂ ಏಕತಾ ಆಂದೋಲನ’ದ ರಾಜ್ಯಾಧ್ಯಕ್ಷ ನಿತಿನ್ ಶಿಂದೆ ಪ್ರಶ್ನಿಸಿದ್ದಾರೆ. ಕ್ರೈಸ್ತ ಸಭೆಯ ಹೆಸರಿನಲ್ಲಿ ನಡೆಯುವ ಅಂಧಶ್ರದ್ಧೆಯ ಪ್ರಚಾರದ ಬಗ್ಗೆ ಸಮಿತಿಯ ಮೌನವನ್ನು ಅವರು ಖಂಡಿಸಿದರು.

‘ಅಂನಿಸ’ನ ದ್ವಂದ್ವ ನೀತಿ ಬಯಲು !

ನಿತಿನ್ ಶಿಂದೆ ಮಾತನಾಡಿ, “ಪಾಲ್ ದಿನಕರನ್ ಅಂತಹವರು ಪ್ರಾರ್ಥನೆಯ ಮೂಲಕ ರೋಗ ವಾಸಿ ಮಾಡುವ ಸುಳ್ಳು ದಾವೆಗಳ ಮೂಲಕ ಅಂಧಶ್ರದ್ಧೆಗೆ ಪ್ರೋತ್ಸಾಹ ನೀಡುತ್ತಿರುವಾಗ ‘ಅಂನಿಸ’ನ ಪದಾಧಿಕಾರಿಗಳು ಎಲ್ಲಿ ಮಾಯವಾಗುತ್ತಾರೆ? ಡಾ. ಹಮಿದ ದಾಭೊಲಕರ್ ಇವರಿಗೆ ಕಾಣುವುದಿಲ್ಲವೇ? ಕೇವಲ ಹಿಂದೂಗಳನ್ನು ಗುರಿಯಾಗಿಸುವ ಇವರ ನಿಜವಾದ ಮುಖ ಈಗ ಬಯಲಾಗಿದೆ. ಮಹಾರಾಷ್ಟ್ರದ ಸರಕಾರದ ಅಧಿವೇಶನ ನಡೆಯುತ್ತಿರುವಾಗ ಇಂತಹ ವಿವಾದಿತ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದಿತ್ತು, ಇದೊಂದು ಗಂಭೀರ ವಿಷಯವಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಆಡಳಿತವು ಅವಕಾಶ ಕೊಡಬಾರದಿತ್ತು. ರಾಜ್ಯದಲ್ಲಿ ಮಾಟ-ಮಂತ್ರ ವಿರೋಧಿ ಕಾಯ್ದೆ ಉಲ್ಲಂಘಿಸುವವರ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದರು.

ಸಂಪಾದಕೀಯ ನಿಲುವು

  • ಇಂತಹ ಅಸಾಧ್ಯ ರೋಗಗಳನ್ನು ಗುಣಪಡಿಸುವ ಸುಳ್ಳು ದಾವೆಗಳನ್ನು ಮಾಡಿ ಹಿಂದೂಗಳನ್ನು ಮತಾಂತರಿಸುವ ಇದು ಒಂದು ಷಡ್ಯಂತ್ರವಾಗಿದೆ. ಆಡಳಿತ ವರ್ಗವು ಕೇವಲ ಪ್ರಕರಣ ದಾಖಲಿಸಿ ಸುಮ್ಮನಾಗದೆ, ಇಂತಹ ಕಪಟ ಧರ್ಮಪ್ರಚಾರಕರ ಮೇಲೆ ಶಾಶ್ವತವಾಗಿ ನಿಷೇಧ ಹೇರಬೇಕು ಎಂದು ಹಿಂದುತ್ವನಿಷ್ಠರು ಬಯಸುತ್ತಾರೆ !
  • ಯಾವಾಗಲೂ ಹಿಂದೂಗಳ ಆಚಾರ-ವಿಚಾರ, ಪರಂಪರೆಗಳನ್ನು ಟೀಕಿಸುವ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯವರು, ಪವಾಡಗಳ ಸುಳ್ಳು ದಾವೆಗಳ ಮೂಲಕ ಜನರಿಗೆ ವಂಚಿಸುತ್ತಿರುವಾಗ ಯಾವ ಬಿಲದಲ್ಲಿ ಅಡಗಿರುತ್ತಾರೆ ?