ಛತ್ತೀಸಗಡದ ಭಾಜಪ ಸರಕಾರದ ಮಂತ್ರಿಮಂಡಲದಿಂದ ಮತಾಂತರ ವಿರೋಧಿ ವಿಧೇಯಕಕ್ಕೆ ಅನುಮೋದನೆ

ರಾಯಪುರ (ಛತ್ತೀಸಗಡ) – ಛತ್ತೀಸಗಡದ ಭಾಜಪ ಸರಕಾರದ ಮಂತ್ರಿಮಂಡಲವು ‘ಛತ್ತೀಸಗಡ ಧಾರ್ಮಿಕ ಸ್ವಾತಂತ್ರ್ಯ ವಿಧೇಯಕ ೨೦೨೬’ರ ಕರಡು ಪ್ರತಿಗೆ ಸಮ್ಮತಿ ನೀಡಿದೆ. ಈ ವಿಧೇಯಕವನ್ನು ಕೇವಲ ಕಾನೂನಾತ್ಮಕ ದಾಖಲೆಯಾಗಿ ನೋಡದೆ, ರಾಜ್ಯದ ಸಾಂಸ್ಕೃತಿಕ ಸಮಗ್ರತೆ, ಆದಿವಾಸಿ ಅಸ್ಮಿತೆ ಮತ್ತು ನಾಗರಿಕರ ಧಾರ್ಮಿಕ ಸ್ವಾತಂತ್ರ್ಯವನ್ನು ಸುರಕ್ಷಿತಗೊಳಿಸಲು ಒಂದು ಸಮಗ್ರ ರಕ್ಷಣಾ ವ್ಯವಸ್ಥೆಯಾಗಿ ನೋಡಲಾಗುತ್ತಿದೆ. ಪ್ರಸ್ತುತ ನಡೆಯುತ್ತಿರುವ ವಿಧಾನಸಭೆಯ ಅಧಿವೇಶನದಲ್ಲಿ ಈ ವಿಧೇಯಕವನ್ನು ಮಂಡಿಸಲಾಗುವುದು ಮತ್ತು ಸಮ್ಮತಿ ದೊರೆತ ನಂತರ ಅದು ಪರಿಣಾಮಕಾರಿ ಕಾಯಿದೆಯಾಗಿ ರೂಪಾಂತರಗೊಳ್ಳಲಿದೆ.

ಧಾರ್ಮಿಕ ನಂಬಿಕೆಯು ವೈಯಕ್ತಿಕ ವಿಷಯವಾಗಿದ್ದರೂ, ಅದರಲ್ಲಿ ಆಮಿಷ, ವಂಚನೆ ಅಥವಾ ಒತ್ತಡಗಳು ಸೇರಿದರೆ ಅದು ಸಾಮಾಜಿಕ ಸೌಹಾರ್ದತೆಗೆ ಅಪಾಯಕಾರಿಯಾಗುತ್ತದೆ ಎಂದು ಸರಕಾರ ಹೇಳಿದೆ. ಈ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಸರಕಾರವು ಹಳೆಯ ನಿಯಮಗಳಲ್ಲಿ ಬದಲಾವಣೆ ಮಾಡಿ, ಅಕ್ರಮ ಮತಾಂತರದ ಮೂಲಕ್ಕೆ ಹೊಡೆತ ನೀಡುವ ಹೊಸ ಸಂರಚನೆಯನ್ನು(ರೂಪುರೇಷೆ ?) ಸಿದ್ಧಪಡಿಸಿದೆ.

ಶಿಕ್ಷೆ ಕನಿಷ್ಠ ೧೦ ವರ್ಷ, ಗರಿಷ್ಠ ಜೀವಾವಧಿ

ಯಾವುದೇ ವ್ಯಕ್ತಿ ಅಥವಾ ಗುಂಪು ಸೇರಿಕೊಂಡು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಮತಾಂತರಿಸಿದ ಪ್ರಕರಣದಲ್ಲಿ ದೋಷಿ ಎಂದು ಕಂಡುಬಂದಲ್ಲಿ, ಅವರಿಗೆ ಕನಿಷ್ಠ ೧೦ ವರ್ಷ ಮತ್ತು ಗರಿಷ್ಠ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆಯಿದೆ. ಕೇವಲ ಕಾರಾಗೃಹವಾಸ ಮಾತ್ರವಲ್ಲದೆ, ಕನಿಷ್ಠ ೫ ಲಕ್ಷ ರೂಪಾಯಿ ದಂಡದ ನಿಬಂಧನೆಯನ್ನೂ ಮಾಡಲಾಗಿದೆ.

ಶಿಕ್ಷೆಯ ಹೊಸ ನಿಬಂಧನೆಗಳ ಪ್ರಕಾರ ಅಪ್ರಾಪ್ತರು, ಮಹಿಳೆಯರು, ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಅಥವಾ ಇತರ ಹಿಂದುಳಿದ ವರ್ಗದ ವ್ಯಕ್ತಿಗಳನ್ನು ಮತಾಂತರಿಸಿದರೆ, ಸಂಬಂಧಪಟ್ಟ ವ್ಯಕ್ತಿಗೆ ೧೦ ರಿಂದ ೨೦ ವರ್ಷಗಳವರೆಗೆ ಕಾರಾಗೃಹವಾಸ ಮತ್ತು ಕನಿಷ್ಠ ೧೦ ಲಕ್ಷ ರೂಪಾಯಿ ದಂಡದ ಶಿಕ್ಷೆಯಾಗಲಿದೆ. ಹಾಗೆಯೇ ಸಾಮಾನ್ಯ ಪ್ರಕರಣಗಳಲ್ಲಿ ಶಿಕ್ಷೆಯು ೭ ರಿಂದ ೧೦ ವರ್ಷಗಳ ಕಾರಾಗೃಹವಾಸ ಮತ್ತು ೫ ಲಕ್ಷ ರೂಪಾಯಿ ದಂಡ ಎಂದಿದೆ.

ಸಂಪಾದಕೀಯ ನಿಲುವು

ಒಂದೊಂದೇ ರಾಜ್ಯಗಳು ಇಂತಹ ಕಾಯಿದೆಯನ್ನು ಮಾಡುವ ಬದಲು ಕೇಂದ್ರದ ಭಾಜಪ ಸರಕಾರವು ಇಡೀ ದೇಶಕ್ಕಾಗಿ ಕಾಯಿದೆಯನ್ನು ಜಾರಿಗೆ ತರುವುದು ಅವಶ್ಯಕವಾಗಿದೆ. ಏಕೆಂದರೆ ಕಾಂಗ್ರೆಸ್ ಮತ್ತು ಇತರ ಹಿಂದೂದ್ವೇಷಿ ರಾಜಕೀಯ ಪಕ್ಷಗಳ ಸರಕಾರಗಳು ಎಂದಿಗೂ ಇಂತಹ ಕಾಯಿದೆಯನ್ನು ಮಾಡುವುದಿಲ್ಲ .