ಮೇಘಾಲಯ: ಬಾಂಗ್ಲಾದೇಶಿ ನುಸುಳುಕೋರರು ಬುಡಕಟ್ಟು ಹಿಂದೂ ಮಹಿಳೆಯರನ್ನು ವಿವಾಹವಾಗಿ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ

‘ಗಾರೋ ಹಿಲ್ಸ್’ ಬುಡಕಟ್ಟು ಪ್ರದೇಶದ ಬಗ್ಗೆ ಭಾಜಪದ ಗಂಭೀರ ಆರೋಪ

ನವದೆಹಲಿ – ಮೇಘಾಲಯದ ಗಾರೋ ಹಿಲ್ಸ್ ಭಾಗದಲ್ಲಿ ಪ್ರಸ್ತುತ ದಂಗೆಯಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲಿ ಬಾಂಗ್ಲಾದೇಶಿ ಅಕ್ರಮ ವಲಸಿಗರು ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳಂತೆಯೇ, ಬಾಂಗ್ಲಾದೇಶಿ ವಲಸಿಗ ಮುಸಲ್ಮಾನರು ಅಲ್ಲಿಯೂ ಇಂತಹದ್ದೇ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ ಎಂದು ಭಾಜಪ ಸಂಸದ ರವಿಶಂಕರ ಪ್ರಸಾದ ಅವರು ಗಂಭೀರ ಆರೋಪ ಮಾಡಿದ್ದಾರೆ.

ಪ್ರಸಾದ ಅವರು ಮಾತು ಮುಂದುವರಿಸುತ್ತಾ, ಪ್ರಸ್ತುತ ಮೇಘಾಲಯದ ಗಾರೋ ಹಿಲ್ಸ್ ಭಾಗದಲ್ಲಿ ಹೆಚ್ಚಿನ ಅಶಾಂತಿ ಮತ್ತು ದಂಗೆಯಂತಹ ವಾತಾವರಣವಿದೆ. ಅಲ್ಲಿ ಬಾಂಗ್ಲಾದೇಶಿ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಗಾರೋ ಜಿಲ್ಲಾ ಪರಿಷತ್ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಭಾರತೀಯ ಸಂವಿಧಾನದ ಪ್ರಕಾರ ಆಡಳಿತಾತ್ಮಕ ಅಧಿಕಾರಗಳನ್ನು ಹೊಂದಿದೆ. ಕೇವಲ ಅಧಿಕೃತವಾಗಿ ಪ್ರಮಾಣೀಕರಿಸಲ್ಪಟ್ಟ ಬುಡಕಟ್ಟು ವ್ಯಕ್ತಿಗಳು ಮಾತ್ರ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳ ಪರಿಸ್ಥಿತಿಗೆ ಹೋಲಿಸಿದರೆ, ಬಾಂಗ್ಲಾದೇಶದಿಂದ ಬಂದಂತಹ ಮುಸಲ್ಮಾನರು ಈಗ ಹೊಸ ಕಾರ್ಯವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಈ ಮುಸಲ್ಮಾನರು ಸ್ಥಳೀಯ ಬುಡಕಟ್ಟು ಮಹಿಳೆಯರನ್ನು ವಿವಾಹವಾಗುತ್ತಾರೆ. ನಂತರ ಅವರಿಗೆ ವಿಚ್ಛೇದನ ನೀಡಿ ದೂರವಾಗುತ್ತಾರೆ ಮತ್ತು ಇದೇ ಆಧಾರದ ಮೇಲೆ ಅಗತ್ಯವಿರುವ ಪ್ರಮಾಣಪತ್ರಗಳನ್ನು ಪಡೆದು ಚುನಾವಣೆಯಲ್ಲಿ ಉಮೇದುವಾರಿಕೆಯನ್ನು ಸಲ್ಲಿಸುತ್ತಾರೆ, ಎಂದು ಪ್ರಸಾದ ಅವರು ಹೇಳಿದರು.

ಮತ್ತೊಂದು ಪೋಸ್ಟ್‌ನಲ್ಲಿ ಪ್ರಸಾದ ಅವರು, ಫುಲ್ಬಾರಿಯ ಮಾಜಿ ಶಾಸಕ ಎಸ್ಮಾತುರ್ ಮೊಮಿನಿನ್ ಅವರು ಈ ಸಂಪೂರ್ಣ ಸಮಸ್ಯೆಯ ಆರಂಭ ಮಾಡಿದರು. ಎಸ್ಮಾತುರ್ ಅವರು ತೃಣಮೂಲ ಕಾಂಗ್ರೆಸ್ ಸದಸ್ಯರಾಗಿದ್ದಾರೆ. ಅವರು ಮಾರ್ಚ್ 9 ರಂದು ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಪರಿಷತ್‌ ಗಾಗಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಅವರು ಬುಡಕಟ್ಟು ವ್ಯಕ್ತಿಯಲ್ಲದ ಕಾರಣ ಅವರ ಉಮೇದುವಾರಿಕೆಗೆ ವಿರೋಧ ವ್ಯಕ್ತವಾಯಿತು. ತದನಂತರ ಅವರ ಬೆಂಬಲಿಗರು ವಿರೋಧಿಸುವವರ ಮೇಲೆ ದಾಳಿ ಮಾಡಿದರು. ಇದರಿಂದಾಗಿ ಭುಗಿಲೆದ್ದ ದಂಗೆಯಲ್ಲಿ ಇಬ್ಬರು ಸಾವನ್ನಪ್ಪಿದರು. ಮೇಘಾಲಯದ ಗಾರೋ ಹಿಲ್ಸ್ ಭಾಗದ ಬುಡಕಟ್ಟು ಜನರ ಹಕ್ಕುಗಳನ್ನು ಕಸಿದುಕೊಳ್ಳುವ ಈ ‘ಬುಡಕಟ್ಟುಯೇತರ’ ಪಿತೂರಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ, ಎಂದು ಪ್ರಸಾದ ತಿಳಿಸಿದರು.

ಸಂಪಾದಕೀಯ ನಿಲುವು

  • ಜಿಲ್ಲಾ ಪರಿಷತ್ ಚುನಾವಣೆಗಾಗಿ ಬುಡಕಟ್ಟು ಪಂಗಡಕ್ಕೆ ಸೇರಿರುವುದು ಅನಿವಾರ್ಯವಾಗಿರುವುದರಿಂದ, ನುಸುಳುಕೋರ ಮುಸಲ್ಮಾನರು ಬುಡಕಟ್ಟು ಮಹಿಳೆಯರನ್ನು ವಿವಾಹವಾಗಿ ಉಮೇದುವಾರಿಕೆಯ ಹಕ್ಕನ್ನು ಪಡೆಯುತ್ತಿದ್ದಾರೆ.
  • ಸ್ವಂತ ರಾಜಕೀಯ ವರ್ಚಸ್ಸು ಸ್ಥಾಪಿಸಲು ಬಾಂಗ್ಲಾದೇಶಿ ವಲಸಿಗ ಮುಸಲ್ಮಾನರು ಎಷ್ಟು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಇದರಿಂದ ಅರ್ಥವಾಗುತ್ತದೆ ! ಹಿಂದೂಗಳು ಇನ್ನಾದರೂ ಜಾಗೃತರಾಗದಿದ್ದರೆ, ಶೀಘ್ರದಲ್ಲೇ ಇಡೀ ದೇಶಾದ್ಯಂತ ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಸಮಯ ಬೇಕಾಗುವುದಿಲ್ಲ.