ಕಲಬೆರಕೆ ಆಹಾರ ಪದಾರ್ಥ ಮಾರಾಟ ಮಾಡುತ್ತಿದ್ದ ಮೊಹಮ್ಮದ್ ಫಾರೂಕ್ ಬಂಧನ

ಭಾಗ್ಯನಗರ ಪೊಲೀಸರಿಂದ ವಿಷಕಾರಿ ಮಾಲು ವಶ !

ಭಾಗ್ಯನಗರ (ತೆಲಂಗಾಣ) – ಇತ್ತೀಚೆಗೆ ಭಾಗ್ಯನಗರ ಪೊಲೀಸರು ಮಲ್ಲೇಪಲ್ಲಿ ಪ್ರದೇಶದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ, ಕಲಬೆರಕೆಯಿಂದ ಕೂಡಿದ್ದ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ತಯಾರಿಸುತ್ತಿದ್ದ ‘ಶಹಜಾದಾ ಫುಡ್ ಮಾಸ್ಟರ್’ ಎಂಬ ಸಂಸ್ಥೆಯ ಮೇಲೆ ದಾಳಿ ಮಾಡಿದ್ದಾರೆ. ಪೊಲೀಸರು ಘಟನಾ ಸ್ಥಳದಿಂದ 1 ಸಾವಿರದ 90 ಕೆಜಿ ಕಲಬೆರಕೆ ಪೇಸ್ಟ್ ಮತ್ತು 875 ಕೆಜಿ ವಿಷಕಾರಿ ಕಚ್ಚಾ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮಾಲಿನ ಮೌಲ್ಯ ಸುಮಾರು 2 ಲಕ್ಷದ 2 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.

ಈ ದಾಳಿಯಲ್ಲಿ ಸಂಸ್ಥೆಯ ಮಾಲೀಕ 50 ವರ್ಷದ ಮೊಹಮ್ಮದ್ ಫಾರೂಕ್ ಎಂಬಾತನನ್ನು ಬಂಧಿಸಲಾಗಿದೆ. ಅತ್ಯಂತ ಅಶುಚಿಯಾದ ವಾತಾವರಣದಲ್ಲಿ, ಧೂಳು ಮತ್ತು ನೊಣಗಳ ನಡುವೆ ತೆರೆದ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಈ ಪೇಸ್ಟ್ ತಯಾರಿಸಲಾಗುತ್ತಿತ್ತು ಎಂಬುದು ತನಿಖೆಯ ವೇಳೆ ಕಂಡುಬಂದಿದೆ. (ಸಾಮಾನ್ಯವಾಗಿ ಅಲ್ಪಸಂಖ್ಯಾತರಾಗಿರುವ ಮುಸ್ಲಿಮರು ಅಕ್ರಮ ದಂಧೆ ಅಥವಾ ಅಕ್ರಮ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ ಎಂಬುದನ್ನು ಗಮನಿಸಿ! – ಸಂಪಾದಕರು)

ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಗಟ್ಟಿಯಾಗಿ ಮತ್ತು ಹೊಳೆಯುವಂತೆ ಕಾಣಲು ಅದರಲ್ಲಿ ‘ಅಸಿಟಿಕ್ ಆಸಿಡ್’, ಕೃತಕ ಆಹಾರದ ಬಣ್ಣಗಳು, ಗಮ್ ಪೌಡರ್ (ಜಿಗುಟು ಪುಡಿ) ಮತ್ತು ಪಿಷ್ಟ ಪದಾರ್ಥಗಳನ್ನು (ಸ್ಟಾರ್ಚ್) ಬಳಸಲಾಗುತ್ತಿತ್ತು. ಪೊಲೀಸರ ಮಾಹಿತಿ ಪ್ರಕಾರ, ಈ ಸಂಸ್ಥೆಯ ‘ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ’ (FSSAI) ಪರವಾನಗಿಯು 2018 ರಲ್ಲೇ ಮುಕ್ತಾಯಗೊಂಡಿತ್ತು. ಆರೋಪಿಯು ಅಕ್ರಮವಾಗಿ ಹೆಚ್ಚಿನ ಹಣ ಗಳಿಸಲು ಈ ವಿಷಕಾರಿ ಪೇಸ್ಟ್ ಅನ್ನು ಭಾಗ್ಯನಗರದ ದೊಡ್ಡ ದಿನಸಿ ಅಂಗಡಿಗಳು, ಹೋಟೆಲ್ ಮತ್ತು ಉಪಹಾರ ಮಂದಿರಗಳಿಗೆ ಪೂರೈಸುತ್ತಿದ್ದನು. ಈ ಪ್ರಕರಣದಲ್ಲಿ ಪೊಲೀಸರು ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.