೯೦ ಸಾವಿರ ಜನರ ಉಪಸ್ಥಿತಿ, ೨ ಸಾವಿರದ ೩೦೦ ಚರ್ಚ್‌ಗಳ ಸಹಭಾಗ !

ಲಿಮಾ (ಪೆರು) – ಅಮೆರಿಕದ ಕ್ರೈಸ್ತ ಧರ್ಮಪ್ರಚಾರಕ ಫ್ರಾಂಕ್ಲಿನ್ ಗ್ರಹಾಂ ಅವರ ನೇತೃತ್ವದಲ್ಲಿ ಇಲ್ಲಿ ನಡೆದ ಬೃಹತ್ ‘ಇವಾಂಜೆಲಿಕಲ್’ ಕಾರ್ಯಕ್ರಮದಲ್ಲಿ ೯೦ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇವರಲ್ಲಿ ಬರೋಬ್ಬರಿ ೧೦ ಸಾವಿರ ಜನರು ಸಾರ್ವಜನಿಕವಾಗಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರು. ಇವರಲ್ಲಿ ಬಹುತೇಕರು ೧೦ ರಿಂದ ೨೫ ವರ್ಷ ವಯಸ್ಸಿನ ಯುವಕರಾಗಿದ್ದರು. ‘ಬಿಲ್ಲಿ ಗ್ರಹಾಂ ಇವಾಂಜೆಲಿಸ್ಟಿಕ್ ಅಸೋಸಿಯೇಷನ್’ ಎಂಬ ಕ್ರೈಸ್ತ ಸಂಸ್ಥೆಯು ಈ ದಾವೆಯನ್ನು ಮಾಡಿದೆ. ಸಂಸ್ಥೆಯ ಜಾಲತಾಣದಲ್ಲಿ (ವೆಬ್‌ಸೈಟ್) ಈ ಕಾರ್ಯಕ್ರಮದ ಛಾಯಾಚಿತ್ರಗಳನ್ನು ಪ್ರಕಟಿಸಲಾಗಿದೆ. ಲಿಮಾದ ‘ನ್ಯಾಷನಲ್ ಸ್ಟೇಡಿಯಂ’ನಲ್ಲಿ ಆಯೋಜಿಸಲಾಗಿದ್ದ ಈ ೨ ದಿನಗಳ ಮೇಳದಲ್ಲಿ ಬರೋಬ್ಬರಿ ೨ ಸಾವಿರದ ೩೦೦ ಚರ್ಚ್‌ಗಳು ಪಾಲ್ಗೊಂಡಿದ್ದವು. ಈ ಜನರು ಮೂಲತಃ ಯಾವ ಧರ್ಮಕ್ಕೆ ಸೇರಿದವರು ಎಂಬುದು ತಿಳಿದುಬಂದಿಲ್ಲ.
ಸಂಪಾದಕೀಯ ನಿಲುವುಉತ್ತರ ಅಮೆರಿಕ ಮತ್ತು ಯುರೋಪ್ ಬಳಿಕ ಕ್ರೈಸ್ತ ಚರ್ಚ್‌ಗಳು ಈಗ ಬಲವಂತ, ಆಮಿಷ ಹಾಗೂ ಕಥಿತ ಪವಾಡಗಳ ಆಧಾರದ ಮೇಲೆ ದಕ್ಷಿಣ ಅಮೆರಿಕ, ಆಫ್ರಿಕಾ ಮತ್ತು ಏಷ್ಯಾ ಖಂಡಗಳನ್ನು ಗುರಿಯಾಗಿಸುತ್ತಿವೆ. ಈ ಘಟನೆಯು ಅದರ ಉದಾಹರಣೆಯಾಗಿದೆ. ಭಾರತದಲ್ಲೂ ಇದೇ ರೀತಿ ಧರ್ಮಶಿಕ್ಷಣ ಇಲ್ಲದ ಸಾವಿರಾರು ಹಿಂದೂಗಳು ಕ್ರೈಸ್ತರಾಗಲು ತೊಡಗಿದರೆ ಆಶ್ಚರ್ಯವಿಲ್ಲ! ಆದ್ದರಿಂದ ಕೇಂದ್ರ ಸರಕಾರವು ಮುಂಚಿತವಾಗಿಯೇ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರುವುದು ಅವಶ್ಯಕ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara