|

ಮುಂಬಯಿ, ಮಾರ್ಚ್ ೧೦ (ಸುದ್ದಿ) – ಮುಂಬಯಿ ಮಹಾನಗರ ಪ್ರದೇಶದ (ಎಂ.ಎಂ.ಆರ್.) ಸರಕಾರಿ ಮಹಿಳಾ ಉದ್ಯೋಗಿಗಳ ಅನುಕೂಲಕ್ಕಾಗಿ ಮತ್ತು ಮಾತೃತ್ವವನ್ನು ಗೌರವಿಸುವ ಉದ್ದೇಶದಿಂದ ರಾಜ್ಯ ಸರಕಾರವು ಎರಡು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಮಹಿಳೆಯರಿಗೆ ಕಚೇರಿಗೆ ‘ಬೇಗ ಬಂದು, ಬೇಗ ಹೋಗುವ’ ಸೌಲಭ್ಯ ಹಾಗೂ ಮಹಿಳಾ ಉದ್ಯೋಗಿಗಳಿಗೆ ೧೮೦ ದಿನಗಳ ಪ್ರಸೂತಿ ರಜೆ ನೀಡುವ ಘೋಷಣೆಯನ್ನು ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು ಮಾರ್ಚ್ ೧೦ ರಂದು ವಿಧಾನ ಪರಿಷತ್ತಿನಲ್ಲಿ ಮಾಡಿದರು. ‘ಅಂತರರಾಷ್ಟ್ರೀಯ ಮಹಿಳಾ ದಿನ’ದ ನಿಮಿತ್ತ ವಿಧಾನ ಪರಿಷತ್ತಿನಲ್ಲಿ ನಡೆದ ವಿಶೇಷ ಚರ್ಚೆಗೆ ಉತ್ತರಿಸುವಾಗ, ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.
‘ಬೇಗ ಬನ್ನಿ – ಬೇಗ ಹೋಗಿ’ (Come Early – Go Early) ಯೋಜನೆ
ಮುಂಬಯಿನ ಪ್ರಯಾಣದ ದಟ್ಟಣೆ ಮತ್ತು ಮಹಿಳೆಯರಿಗಾಗುವ ಶ್ರಮವನ್ನು ಗಮನದಲ್ಲಿಟ್ಟುಕೊಂಡು ಉಪಮುಖ್ಯಮಂತ್ರಿಗಳು ಈ ಯೋಜನೆಯನ್ನು ಘೋಷಿಸಿದರು. ಮಹಿಳಾ ಉದ್ಯೋಗಿಗಳು ಬೆಳಿಗ್ಗೆ ೯.೧೫ ರಿಂದ ೯.೪೫ ರ ನಡುವೆ ಎಷ್ಟು ನಿಮಿಷ ಮುಂಚಿತವಾಗಿ ಕಚೇರಿಗೆ ಬಂದು ಕೆಲಸ ಆರಂಭಿಸುತ್ತಾರೋ, ಅಷ್ಟೇ ನಿಮಿಷ (ಗರಿಷ್ಠ ೩೦ ನಿಮಿಷ) ಮುಂಚಿತವಾಗಿ ಸಂಜೆ ಅವರು ಮನೆಗೆ ಹೋಗಬಹುದು. ಗರಿಷ್ಠ ದಟ್ಟಣೆಯ ಸಮಯದಲ್ಲಿ ಉಂಟಾಗುವ ಅನಾನುಕೂಲತೆಯನ್ನು ತಪ್ಪಿಸುವುದು ಮತ್ತು ಮಹಿಳೆಯರಿಗೆ ಕೌಟುಂಬಿಕ ಜವಾಬ್ದಾರಿಗಳಿಗಾಗಿ ಹೆಚ್ಚಿನ ಸಮಯ ಸಿಗುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
೧೮೦ ದಿನಗಳ ಪ್ರಸೂತಿ ರಜೆ
ಮಹಿಳಾ ಉದ್ಯೋಗಿಗಳಿಗೆ ಈಗ ಕೇಂದ್ರ ಸರಕಾರದ ಮಾದರಿಯಲ್ಲಿ ೧೮೦ ದಿನಗಳ (೬ ತಿಂಗಳು) ಪ್ರಸೂತಿ ರಜೆ ಸಿಗಲಿದೆ. ವಿಶೇಷವೆಂದರೆ, ಪ್ರಸೂತಿ ರಜೆಯ ನಂತರ ಅಗತ್ಯವಿದ್ದರೆ ವೈದ್ಯಕೀಯ ಪ್ರಮಾಣಪತ್ರವಿಲ್ಲದೆಯೇ ೧ ವರ್ಷದವರೆಗೆ ಅರ್ಧ ವೇತನದ ರಜೆ ನೀಡುವ ನಿರ್ಧಾರವನ್ನೂ ಸರಕಾರ ಕೈಗೊಂಡಿದೆ. ‘ಮಾತೃತ್ವದ ಗೌರವವನ್ನು ಎತ್ತಿಹಿಡಿಯುತ್ತಾ ಮಹಿಳೆಯರು ಕುಟುಂಬ ಮತ್ತು ವೃತ್ತಿ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳಲಿ ಎಂಬುದು ಈ ನಿರ್ಧಾರದ ಹಿಂದಿರುವ ಮುಖ್ಯ ಉದ್ದೇಶ’ ಎಂದು ಸುನೇತ್ರಾ ಪವಾರ್ ತಿಳಿಸಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!