Karnataka Bangladeshi Arrest : ಬೆಂಗಳೂರು – ಇಲ್ಲಿ ೧೨೪ ಕ್ಕೂ ಹೆಚ್ಚು ಬಾಂಗ್ಲಾದೇಶಿ ನುಸುಳುಕೋರರ ಬಂಧನ !

ಬೆಂಗಳೂರು – ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲು ನಗರ ಪೊಲೀಸರು ಬೃಹತ್ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯ ಅಡಿಯಲ್ಲಿ ೨೦೦ ಕ್ಕೂ ಹೆಚ್ಚು ನುಸುಳುಕೋರರನ್ನು ವಶಕ್ಕೆ ಪಡೆಯಲಾಗಿದೆ. (ಸರಕಾರೀ ವ್ಯವಸ್ಥೆಯ ವೈಫಲ್ಯ ! ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳನ್ನು ತಕ್ಷಣವೇ ಹಿಡಿದು ಅವರನ್ನು ಸಂಬಂಧಿತ ದೇಶಗಳಿಗೆ ಕಳುಹಿಸುವುದು ಒಂದು ನಿಯಮಿತ ಪ್ರಕ್ರಿಯೆಯಾಗಿದೆ. ಇದಕ್ಕಾಗಿ ವಿಶೇಷ ಕಾರ್ಯಾಚರಣೆಯ ದಾರಿಯನ್ನು ಯಾಕೆ ಕಾಯುತ್ತಿದ್ದಾರೆ? – ಸಂಪಾದಕರು) ಇವರಲ್ಲಿ ಬಾಂಗ್ಲಾದೇಶಿ ಪ್ರಜೆಗಳ ಸಂಖ್ಯೆ ೧೨೪ ಕ್ಕೂ ಹೆಚ್ಚು ಇರುವುದು ಬೆಳಕಿಗೆ ಬಂದಿದೆ.

೧. ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿಯ (ಎಫ್.ಆರ್.ಆರ್.ಒ.) ಅಧಿಕಾರಿಗಳ ಸಹಯೋಗದೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ.

೨. ತಪಾಸಣೆಯ ವೇಳೆ ಅನೇಕರ ಬಳಿ ನಕಲಿ ಆಧಾರ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಸ್ಥಳೀಯ ವಿಳಾಸವಿರುವ ನಿವಾಸಿ ದಾಖಲೆಗಳು ಪತ್ತೆಯಾಗಿವೆ.

೩. ಈ ಜನರು ಸ್ಥಳೀಯರೆಂದು ನಟಿಸಿ ನಗರದ ವಿವಿಧ ಭಾಗಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನ ವರ್ತೂರು, ಕಾಡುಗೋಡಿ ಸೇರಿದಂತೆ ಪೂರ್ವ ವಿಭಾಗದ ವಿವಿಧೆಡೆ ಈ ದಾಳಿಗಳನ್ನು ನಡೆಸಲಾಗಿದೆ. ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

  • ಭಾರತದಲ್ಲಿ ಬಾಂಗ್ಲಾದೇಶಿ ನುಸುಳುಕೋರರಿಲ್ಲದ ಒಂದೇ ಒಂದು ಪ್ರಮುಖ ನಗರವೂ ಇಲ್ಲ. ಭಾರತವನ್ನು ‘ಬಾಂಗ್ಲಾದೇಶಿ ನುಸುಳುಕೋರರ ತವರ’ನ್ನಾಗಿ ಮಾಡಲು ಜವಾಬ್ದಾರರಾದವರೆಲ್ಲರಿಗೂ ಈ ನಿಟ್ಟಿನಲ್ಲಿ ಕಠಿಣ ಶಿಕ್ಷೆಯಾಗುವುದು ಅವಶ್ಯಕವಾಗಿದೆ !
  • ಬೆಂಗಳೂರಿನಲ್ಲಿ ಪತ್ತೆಯಾದ ಬಾಂಗ್ಲಾದೇಶಿ ನುಸುಳುಕೋರರು ೧೨೪ ಕ್ಕೂ ಹೆಚ್ಚು ಜನರಿದ್ದಾರೆ, ಇನ್ನು ಪತ್ತೆಯಾಗದವರು ಎಷ್ಟಿರಬಹುದು ಎಂಬುದನ್ನು ಊಹಿಸದಿರುವುದೇ ಲೇಸು !