ಆತ್ಮರಕ್ಷಣೆ ಮತ್ತು ಸ್ವಾವಲಂಬನೆಯ ಪ್ರೇರಣಾದಾಯಕ ಸಂದೇಶ!

ಜಳಗಾಂವ್, ಮಾರ್ಚ್ ೭ (ವಾರ್ತೆ) – ಹಿಂದೂ ಜನಜಾಗೃತಿ ಸಮಿತಿ ಪ್ರೇರಿತ ರಣರಾಗಿಣಿ ಶಾಖೆಯ ವತಿಯಿಂದ ಇಲ್ಲಿ ‘ನಾರಿ ಸಾಮರ್ಥ್ಯದ ಹೊಸ ಮುಂಜಾವು’ ಎಂಬ ಪ್ರೇರಣಾದಾಯಕ ಕಾರ್ಯಕ್ರಮವು ಅತ್ಯಂತ ಉತ್ಸಾಹಭರಿತ ವಾತಾವರಣದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿದ್ದರು. ಮೇಜರ್ ಮೈತ್ರೇಯಿ ದಾಂಡೇಕರ್ ಮತ್ತು ‘ಐರನ್‌ಮ್ಯಾನ್’ ಸೌ. ಮಹೇಶ್ವರಿ ಸರ್ನೋಬತ್ ಅವರ ಅಮೂಲ್ಯ ಮಾರ್ಗದರ್ಶನ ಎಲ್ಲರಿಗೂ ಲಭಿಸಿತು. ಮಹಿಳೆಯರಿಗಾಗಿ ಆತ್ಮರಕ್ಷಣೆಯ ತರಬೇತಿಯ ಪ್ರಮುಖ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು. ಆತ್ಮರಕ್ಷಣೆ ಮತ್ತು ಸ್ವಾವಲಂಬನೆಯ ಪ್ರೇರಣಾದಾಯಕ ಸಂದೇಶವನ್ನು ಈ ಮಾಧ್ಯಮದ ಮೂಲಕ ನೀಡಲಾಯಿತು. ಪ್ರಮುಖ ವಕ್ತಾರರಾದ ಮೇಜರ್ ಮೈತ್ರೇಯಿ ದಾಂಡೇಕರ್ ಅವರನ್ನು ಸೌ. ಪೂರ್ಣಿಮಾ ಜೋಶಿ ಅವರು, ಹಾಗೂ ಸೌ. ಮಹೇಶ್ವರಿ ಸರ್ನೋಬತ್ ಅವರನ್ನು ‘ಭರಾರಿ ಫೌಂಡೇಶನ್’ನ ಸೌ. ಚಿತ್ರಾ ಚೌಧರಿ ಅವರು ಸನ್ಮಾನಿಸಿದರು.
ಆತ್ಮರಕ್ಷಣೆಯ ತರಬೇತಿಯು ಪ್ರತಿಯೊಬ್ಬ ಮಹಿಳೆಗೆ ಅತ್ಯಗತ್ಯ!- ಮೇಜರ್ ಮೈತ್ರೇಯಿ ದಾಂಡೇಕರ್

ಮಹಿಳೆಯರು ಸಂಕಷ್ಟದ ಸಮಯದಲ್ಲಿ ಧೈರ್ಯ, ಆತ್ಮವಿಶ್ವಾಸ ಮತ್ತು ತತ್ಪರತೆಯನ್ನು ಹೊಂದಿರುವುದು ಅವಶ್ಯಕವಾಗಿದೆ. ಪ್ರಸ್ತುತದ ಪ್ರತಿಕೂಲ ಪರಿಸ್ಥಿತಿ ಮತ್ತು ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ, ‘ನಮ್ಮ ರಕ್ಷಣೆಯನ್ನು ಇತರರು ಮಾಡಲಿ’ ಎಂಬ ನಿರೀಕ್ಷೆ ಇಟ್ಟುಕೊಳ್ಳದೆ ಪ್ರತಿಯೊಬ್ಬ ಮಹಿಳೆಯೂ ಆತ್ಮರಕ್ಷಣೆಯ ತರಬೇತಿಯನ್ನು ಪಡೆಯುವುದು ಅತ್ಯಗತ್ಯವಾಗಿದೆ.
ಈಶ್ವರನ್ನು ಸ್ಮರಿಸಿ ಕೃತಿ ಮಾಡಿದರೆ ಖಂಡಿತ ಯಶಸ್ಸು ಸಿಗಲಿದೆ!- ಸೌ. ಮಹೇಶ್ವರಿ ಸರ್ನೋಬತ್, ಅಂತರರಾಷ್ಟ್ರೀಯ ‘ಐರನ್‌ಮ್ಯಾನ್’

‘ಐರನ್‌ಮ್ಯಾನ್’ ಸ್ಪರ್ಧೆಯಲ್ಲಿ ಸಮುದ್ರದಲ್ಲಿ ೪ ಕಿಲೋಮೀಟರ್ ಈಜುವುದು, ೧೮೦ ಕಿಲೋಮೀಟರ್ ಸೈಕಲ್ ಓಡಿಸುವುದು ಮತ್ತು ೭೨ ಕಿಲೋಮೀಟರ್ ಓಡುವುದು ಹೀಗೆ ಅತ್ಯಂತ ಕಠಿಣ ಹಂತಗಳನ್ನು ಏಕಕಾಲದಲ್ಲಿ ಪೂರ್ಣಗೊಳಿಸಬೇಕಾಗುತ್ತದೆ. ಅತ್ಯಂತ ಪ್ರತಿಕೂಲ ವಾತಾವರಣದಲ್ಲಿ ನಡೆಯುವ ಈ ಸ್ಪರ್ಧೆಯನ್ನು ನನಗೆ ಕೇವಲ ನಾಮಸ್ಮರಣೆ ಮತ್ತು ಸಾಧನೆಯ ಬಲದಿಂದಲೇ ಪೂರ್ಣಗೊಳಿಸಲು ಸಾಧ್ಯವಾಯಿತು. ಸ್ಪರ್ಧೆಯನ್ನು ಪೂರ್ಣಗೊಳಿಸಲು ೧೭ ಗಂಟೆಗಳ ಕಾಲಾವಕಾಶವಿರುತ್ತದೆ; ಆದರೆ ನಾನು ಗುರುಕೃಪೆಯ ಬಲದಿಂದ ೧೫ ಗಂಟೆಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿದೆ. ಅಭ್ಯಾಸ ಮಾಡುವಾಗ ನೀರಿನಲ್ಲಿ ಜಲದೇವತೆಯ ತತ್ವವನ್ನು ಕಾಣುವುದು, ಸೈಕಲ್ ಓಡಿಸುವಾಗ ಪ್ರಭು ಶ್ರೀರಾಮ ಮತ್ತು ಹನುಮಂತನನ್ನು ಸ್ಮರಿಸುವುದು, ಓಡುವಾಗ ಭಗವಂತನೊಂದಿಗೆ ಅನುಸಂಧಾನ ಸಾಧಿಸುವುದು ಹೀಗೆ ಮಾಡುವುದರಿಂದ ನನಗೆ ಆಯಾಸವಾಗುತ್ತಿರಲಿಲ್ಲ. ಯುವತಿಯರೂ ಸಹ ಪ್ರತಿಯೊಂದು ಕಾರ್ಯವನ್ನು ಮಾಡುವಾಗ ದೇವರನ್ನು ಸ್ಮರಿಸಿ ಮತ್ತು ಅನುಸಂಧಾನವಿಟ್ಟುಕೊಂಡೇ ಮಾಡಬೇಕು, ಆಗಲೇ ಅವರಿಗೆ ಖಚಿತ ಯಶಸ್ಸು ಸಿಗಲಿದೆ!
ಜಳಗಾಂವ್‌ನ ರಣರಾಗಿಣಿಯರಿಗೆ ವಿಶೇಷ ಸನ್ಮಾನ!

ವಯಸ್ಸನ್ನು ಮೀರಿ ಛಲದ ಬಲದಿಂದ ‘ಸೈಕ್ಲಿಂಗ್’ನಲ್ಲಿ ಗಮನಾರ್ಹ ಯಶಸ್ಸು ಗಳಿಸಿದ ಮತ್ತು ಇದುವರೆಗೆ ಸುಮಾರು ೫೦ ಸಾವಿರ ಕಿ.ಮೀ. ಸೈಕಲ್ ಓಡಿಸಿದ ಜಳಗಾಂವ್‌ನ ರಣರಾಗಿಣಿ ಕಾಮಿನಿ ಧಾಂಡೆ ಅವರನ್ನು ಗಣ್ಯ ವಕ್ತಾರರ ಹಸ್ತದಿಂದ ಸನ್ಮಾನಿಸಲಾಯಿತು.
ಇದರೊಂದಿಗೆ ೧೫೦ ನಿಮಿಷಗಳಲ್ಲಿ ೫೦೦ ಸೂರ್ಯನಮಸ್ಕಾರ, ೧೦೦ ಯೋಗಾಸನಗಳು ಮತ್ತು ೭೫ ಯೋಗ ಮುದ್ರೆಗಳನ್ನು ಮಾಡಿ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್’ ಮಾಡಿದ ಜಳಗಾಂವ್‌ನ ರಣರಾಗಿಣಿ ಹೇತಲ್ ಪಿಪರಿಯಾ ಅವರನ್ನು ಸಹ ಗಣ್ಯ ವಕ್ತಾರರ ಹಸ್ತದಿಂದ ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಪ್ರಾರಂಭವನ್ನು ಆದಿಶಕ್ತಿ ಶ್ರೀ ದುರ್ಗಾದೇವಿ ಮತ್ತು ಜಳಗಾಂವ್‌ನ ಗ್ರಾಮದೇವತೆ ಪ್ರಭು ಶ್ರೀರಾಮನ ಚರಣಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಮತ್ತು ಶ್ಲೋಕಗಳನ್ನು ಪಠಿಸುವ ಮೂಲಕ ಮಾಡಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಸೌ. ಕ್ಷಿತಿಜಾ ದೇಶಪಾಂಡೆ ಅವರು ಮಾಡಿದರು, ಹಾಗೂ ಕಾರ್ಯಕ್ರಮದ ಉದ್ದೇಶವನ್ನು ಗಾಯತ್ರಿ ಬಾರಿ ಅವರು ಸ್ಪಷ್ಟಪಡಿಸಿದರು. ಕಾರ್ಯಕ್ರಮದ ಸ್ಥಳದಲ್ಲಿ ಹಾಕಲಾಗಿದ್ದ ವಿಶೇಷ ಫಲಕ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಉಪಸ್ಥಿತ ಗಣ್ಯರು
ಭಾಜಪದ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೀತು ಪರದೇಶಿ, ಭಾಜಪ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ನೀಲಾ ಚೌಧರಿ, ಜಳಗಾಂವ್‌ನ ಮಾಜಿ ಮಹಾಪೌರರಾದ ಸೀಮಾ ಭೋಳೆ, ಭಾಜಪ ನಗರಸೇವಿಕೆ ಉಜ್ವಲಾ ಬೆಂಡಾಳೆ, ಭಾಜಪ ಪ್ರದೇಶ ಕಾರ್ಯಕಾರಿಣಿಯ ರೇಖಾ ವರ್ಮಾ ಮತ್ತು ಭಾಜಪದ ಕೇತಕಿ ಪಾಟೀಲ್
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!