‘ಮಹಿಳೆಯರನ್ನು ಗ್ರಂಥ-ಪುರಾಣಗಳಲ್ಲಿ ಸಿಲುಕಿಸಲಾಗಿದೆ!’ – ರೂಪಾಲಿ ಚಾಕಣಕರ್, ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ

‘ಮಹಿಳೆಯರಿಗೆ ಸಂವಿಧಾನದ ಅರಿವಾಗಬೇಕು’ ಎಂದೂ ಹೇಳಿಕೆ

ಮುಂಬಯಿ – ಸಮಾಜದ ಮಹಿಳೆಯರಿಗೆ ಸಂವಿಧಾನದ ಅರಿವಾಗಬೇಕು. ನಾವು ಮಹಿಳೆಯರನ್ನು ಪೋಥಿ-ಪುರಾಣಗಳಲ್ಲಿ ಸಿಲುಕಿಸಿದ್ದೇವೆ; ಆದರೆ ಸಂವಿಧಾನವನ್ನು ಓದುವುದನ್ನು ನಾವು ಮರೆತಿದ್ದೇವೆ. ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ಆಕೆಯ ಕೈಗೆ ಸಂವಿಧಾನವನ್ನು ನೀಡಿ ಎಂದು ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಣಕರ್ ಹೇಳಿದ್ದಾರೆ. ಆಯೋಗದ ವತಿಯಿಂದ ‘ಜಾಗತಿಕ ಮಹಿಳಾ ದಿನಾಚರಣೆ’ಯ ಅಂಗವಾಗಿ ಮುಂಬಯಿನ ರವೀಂದ್ರ ನಾಟ್ಯಮಂದಿರದಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. (ಇಂದು ಧರ್ಮಶಿಕ್ಷಣದ ಅಭಾವದಿಂದಾಗಿ ಮೂಲತಃ ಹಿಂದೂ ಸಮಾಜ, ಅದರಲ್ಲೂ ಯುವ ಪೀಳಿಗೆ ಹಿಂದೂ ಧರ್ಮದಿಂದ ದೂರವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಈ ರೀತಿಯ ಹೇಳಿಕೆಯು ಹಿಂದೂ ವಿರೋಧಿ ಕಥಾನಕಕ್ಕೆ (ನರೇಟಿವ್) ನೀರೆರೆಯುವ ಪ್ರಯತ್ನವಾಗಿದೆ. ಇದರಿಂದಾಗಿ ‘ರೂಪಾಲಿ ಚಾಕಣಕರ್ ಅವರು ಡೀಪ್ ಸ್ಟೇಟ್‌ನ (Deep state) ಕೈಗೊಂಬೆಯೇ?’ ಎಂಬ ಪ್ರಶ್ನೆಯನ್ನು ಯಾರಾದರೂ ಎತ್ತಿದರೆ ಅದರಲ್ಲಿ ತಪ್ಪೇನಿದೆ? – ಸಂಪಾದಕರು)

(ಡೀಪ್ ಸ್ಟೇಟ್ ಎಂದರೆ ಸರ್ಕಾರಿ ಅಧಿಕಾರಿಗಳು, ಸೇನಾಧಿಕಾರಿಗಳು, ಖಾಸಗಿ ಸಂಸ್ಥೆಗಳು ಮತ್ತು ಬಿಲಿಯನೇರ್ ಉದ್ಯಮಿಗಳ ಗುಪ್ತ ಜಾಲ. ಈ ವ್ಯವಸ್ಥೆಯ ಮೂಲಕ ಸರ್ಕಾರಿ ನೀತಿಗಳನ್ನು ಖಾಸಗಿ ಸಂಸ್ಥೆಗಳಿಗೆ ಪೂರಕವಾಗುವಂತೆ ರೂಪಿಸಲಾಗುತ್ತದೆ ಅಥವಾ ದೇಶದಲ್ಲಿ ಅವರಿಗೆ ಅನುಕೂಲಕರವಾದ ವಾತಾವರಣವನ್ನು ನಿರ್ಮಿಸಲಾಗುತ್ತದೆ.)

ಸಂಪಾದಕೀಯ ನಿಲುವು

  • ಗ್ರಂಥ-ಪುರಾಣಗಳಲ್ಲಿನ ಬೋಧನೆಗಳಿಂದಲೇ ಮಹಿಳೆಯರಿಗೆ ನೈತಿಕ ಮತ್ತು ಧಾರ್ಮಿಕ ಅಧಿಷ್ಠಾನ ಲಭಿಸುತ್ತದೆ. ಅದರಿಂದಲೇ ಸದೃಢ ಕುಟುಂಬ ವ್ಯವಸ್ಥೆ ನಿರ್ಮಾಣವಾಗಲು ಸಾಧ್ಯ. ಇಂದು ಮಹಿಳೆಯರಿಗೆ ನಿಜವಾದ ಅರ್ಥದಲ್ಲಿ ಅಂತಹ ಅಧಿಷ್ಠಾನದ ಅಗತ್ಯವಿದೆ. ಹೀಗಿರುವಾಗ ‘ಅದರಲ್ಲಿ ಮಹಿಳೆಯರನ್ನು ಸಿಲುಕಿಸಲಾಗಿದೆ’ ಎಂಬ ಹೇಳಿಕೆಯು ಖಂಡನೀಯ, ತರ್ಕಹೀನ ಮತ್ತು ಹಿಂದೂ ದ್ವೇಷದಿಂದ ಕೂಡಿದ್ದಾಗಿದೆ! ಚಾಕಣಕರ್ ಅವರು ಹಿಂದೂಗಳ ಬಳಿ ಬಹಿರಂಗವಾಗಿ ಕ್ಷಮೆಯಾಚಿಸುವವರೆಗೆ ಹಿಂದೂಗಳು ಇದನ್ನು ಸಂಘಟಿತವಾಗಿ ವಿರೋಧಿಸಬೇಕು!
  • ಚಾಕಣಕರ್ ಅವರು ‘ಕುರಾನ್-ಬೈಬಲ್‌ಗಳಲ್ಲಿ ಮಹಿಳೆಯರನ್ನು ಸಿಲುಕಿಸಲಾಗಿದೆ’ ಎಂದು ಏಕೆ ಹೇಳುವುದಿಲ್ಲ? ಅಥವಾ ಮಹಿಳಾ ದಿನಾಚರಣೆಯ ನೆಪದಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಸೋಗಿನಲ್ಲಿ ಅವರು ತಮ್ಮ ಹಿಂದೂ ದ್ವೇಷದ ತುರಿಕೆಯನ್ನು ತೀರಿಸಿಕೊಳ್ಳುತ್ತಿದ್ದಾರೆಯೇ?