ಕೊಲ್ಲಿ ರಾಷ್ಟ್ರಗಳಲ್ಲಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಭಾರತೀಯ ನಾವಿಕರಿಗೆ ಜಾಗರೂಕತೆಯ ಎಚ್ಚರಿಕೆ! India Issues Maritime Guidelines

‘ನೌಕಾಯಾನ ಮಹಾನಿರ್ದೇಶನಾಲಯ’ದ ಸಮುದ್ರ ಸಾರಿಗೆ ಮಾರ್ಗಸೂಚಿಗಳು

ಮುಂಬಯಿ – ಕೊಲ್ಲಿ ರಾಷ್ಟ್ರಗಳಲ್ಲಿನ (Gulf countries) ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ನೌಕಾಯಾನ ಮಹಾನಿರ್ದೇಶನಾಲಯವು (‘ಡಿಜಿ ಶಿಪ್ಪಿಂಗ್ – ಡೈರೆಕ್ಟೋರೇಟ್ ಜನರಲ್ ಆಫ್ ಶಿಪ್ಪಿಂಗ್’) ಎಲ್ಲಾ ಭಾರತೀಯ ನಾವಿಕರು ಮತ್ತು ನೌಕಾಯಾನ ಸಂಸ್ಥೆಗಳಿಗೆ ಜಾಗರೂಕತೆಯ ಎಚ್ಚರಿಕೆಯನ್ನು ನೀಡಿದೆ. ಈ ಕುರಿತಾದ ಸೂಚನೆಗಳನ್ನು ನೌಕಾಯಾನ ಮಹಾನಿರ್ದೇಶನಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಮಹಾನಿರ್ದೇಶನಾಲಯವು ನಾವಿಕರಿಗೆ ನೀಡಿರುವ ಸೂಚನೆಗಳು

1. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾವಿಕರು ಸದಾ ಜಾಗರೂಕರಾಗಿರಬೇಕು. ಇತ್ತೀಚಿನ ವಿದ್ಯಮಾನಗಳಿಗಾಗಿ ಸಂಬಂಧಿತ ಭಾರತೀಯ ರಾಯಭಾರ ಕಚೇರಿಗಳಿಂದ ಹೊರಡಿಸಲಾಗುವ ಸೂಚನೆಗಳನ್ನು ಗಮನಿಸುತ್ತಿರಬೇಕು.

2. ಯಾವುದೇ ರೀತಿಯ ಅಪಾಯ, ದಾಳಿ ಅಥವಾ ತೊಂದರೆ ಎದುರಾದಲ್ಲಿ, ನಾವಿಕರು ತಕ್ಷಣವೇ ತಮ್ಮ ಸಂಸ್ಥೆ, ಸಂಬಂಧಿತ ಪರವಾನಗಿ ಹೊಂದಿರುವ ಸಂಸ್ಥೆ, ಮಹಾನಿರ್ದೇಶನಾಲಯ, ಹಾಗೂ ಸಮುದ್ರ ರಕ್ಷಣಾ ಸಮನ್ವಯ ಕೇಂದ್ರ (ಮೆರಿಟೈಮ್ ರೆಸ್ಕ್ಯೂ ಕೋಆರ್ಡಿನೇಷನ್ ಸೆಂಟರ್) ಅಥವಾ ಹತ್ತಿರದ ನೌಕೆಗಳನ್ನು ಸಂಪರ್ಕಿಸಬೇಕು.

3. ತುರ್ತು ಪರಿಸ್ಥಿತಿಯಲ್ಲಿ ಉಪಯುಕ್ತವಾಗುವಂತೆ ಎಲ್ಲಾ ನವೀಕೃತ ಸಂಪರ್ಕ ಸಂಖ್ಯೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು.