ನಾಸಿಕ್‌ನ ‘ಸಂದೀಪ್ ಫೌಂಡೇಶನ್’ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ನಮಾಜ್ ! Namaz Sadip Foundation Hanuman Chalisa

ಹಿಂದೂ ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ ಮಾಡಿ  ಕ್ರಮಕ್ಕೆ ಒತ್ತಾಯ

ನಾಸಿಕ್ – ನಗರದ ತ್ರಯಂಬಕ್ ರಸ್ತೆಯಲ್ಲಿರುವ ‘ಸಂದೀಪ್ ಫೌಂಡೇಶನ್’ ಎಂಬ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕೋರ್ಸ್‌ಗಳ ವಿಶ್ವವಿದ್ಯಾಲಯದ ಕೋಣೆಯೊಂದರಲ್ಲಿ ಅನೇಕ ಮುಸ್ಲಿಂ ವಿದ್ಯಾರ್ಥಿಗಳು ನಮಾಜ್ ಮಾಡಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಹಿಂದುತ್ವವಾದಿ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಘಟನೆಯ ನಂತರ ಹಿಂದೂ ವಿದ್ಯಾರ್ಥಿಗಳು ಮತ್ತು ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಕಾಲೇಜಿನ ಮೈದಾನದಲ್ಲೇ ‘ಹನುಮಾನ್ ಚಾಲೀಸಾ’ ಪಠಿಸಿದರು. ‘ಈ ವಿಶ್ವವಿದ್ಯಾಲಯದಲ್ಲಿ ಹಿಂದೂ ಹಬ್ಬಗಳನ್ನು ಆಚರಿಸಲು ನಿಷೇಧವಿದೆ. ಹೀಗಿರುವಾಗ ಮುಸ್ಲಿಂ ವಿದ್ಯಾರ್ಥಿಗಳ ನಮಾಜ್ ಹೇಗೆ ನಡೆಯುತ್ತದೆ?’ ಎಂದು ಹಿಂದೂ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.

೧. ‘ಈ ಪ್ರಕರಣದಲ್ಲಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಪ್ರಕರಣ ದಾಖಲಿಸಲು ಪ್ರಯತ್ನಿಸಬೇಕು’ ಎಂದು ಹಿಂದೂ ವಿದ್ಯಾರ್ಥಿಗಳು ಒತ್ತಾಯಿಸಿದರು.

೨. ಹಿಂದುತ್ವವಾದಿಗಳು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಇದು ಗಂಭೀರವಾದ ಘಟನೆ ಎಂದು ಹೇಳಿದ್ದಾರೆ. ಇದರಿಂದ ಕಾಲೇಜಿನ ವಾತಾವರಣ ಕೆಡುತ್ತಿದೆ ಎಂದು ತಿಳಿಸಿರುವ ಅವರು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

  • ವಿಶ್ವವಿದ್ಯಾಲಯದಲ್ಲಿ ಹಿಂದೂ ಹಬ್ಬಗಳನ್ನು ಆಚರಿಸಲು ನಿಷೇಧವಿರುವಾಗ ನಮಾಜ್ ಹೇಗೆ ಸಹಿಸಿಕೊಳ್ಳಲಾಗುತ್ತದೆ? – ಹಿಂದೂ ವಿದ್ಯಾರ್ಥಿಗಳ ಆಕ್ರೋಶದ ಪ್ರಶ್ನೆ
  • ಇಂತಹ ಘಟನೆ ನಡೆಯಲು ನಾಸಿಕ್ ಇರುವುದು ಭಾರತದಲ್ಲೋ ಅಥವಾ ಬಾಂಗ್ಲಾದೇಶ ಅಥವಾ ಪಾಕಿಸ್ತಾನದಲ್ಲೋ?
  • ಮುಸ್ಲಿಮರ ಬದಲಿಗೆ ಯಾರಾದರೂ ಹಿಂದೂ ವಿದ್ಯಾರ್ಥಿಗಳು ಈ ರೀತಿ ಸಾಮೂಹಿಕ ಪೂಜೆ ಮಾಡಿದ್ದರೆ, ಇಷ್ಟೊತ್ತಿಗೆ ‘ಸಂದೀಪ್ ಫೌಂಡೇಶನ್’ ಆಡಳಿತ ಮಂಡಳಿ ಅವರ ಮೇಲೆ ಕ್ರಮ ಕೈಗೊಳ್ಳುತ್ತಿತ್ತು. ಇದಲ್ಲದೆ ಪ್ರಗತಿಪರತೆಯ ಡೋಂಗಿ ಪ್ರದರ್ಶಿಸುವವರಲ್ಲಿ ಈ ವಿದ್ಯಾರ್ಥಿಗಳನ್ನು ನಿಂದಿಸುವ ಸ್ಪರ್ಧೆಯೇ ಏರ್ಪಡುತ್ತಿತ್ತು. ಈಗ ನಮಾಜ್ ವಿಷಯವಾಗಿರುವುದರಿಂದ ಇಡೀ ಜಗತ್ತು ಸುಮ್ಮನಿದೆ. ಹಿಂದೂ ವಿದ್ಯಾರ್ಥಿಗಳೇ, ಇಂತಹ ಘಟನೆಗಳಿಂದ ಮುಸ್ಲಿಮರಲ್ಲಿನ ಸಂಘಟನೆ ಮತ್ತು ಧರ್ಮಪ್ರೇಮವನ್ನು ಕಲಿಯಿರಿ!
  • ಕಾಲೇಜಿನಲ್ಲಿನ ಅಕ್ರಮ ನಮಾಜ್ ಅನ್ನು ತಡೆಯಲು ಒಗ್ಗೂಡಿದ ಹಿಂದೂ ವಿದ್ಯಾರ್ಥಿಗಳಿಗೆ ಅಭಿನಂದನೆಗಳು! ಯುವಶಕ್ತಿಯಲ್ಲಿನ ಧರ್ಮಪ್ರೇಮದ ಈ ಉದಾಹರಣೆ ಅನುಕರಣೀಯವಾಗಿದೆ!