
ಮುಂಬಯಿ – ಹಿಂದೂ ಹೃದಯಸಾಮ್ರಾಟ ಬಾಳಾಸಾಹೇಬ ಠಾಕ್ರೆ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಇಂದ್ರೇಶ ಕುಮಾರ್ ಅವರಂತಹ ನಾಯಕರನ್ನು ತಮ್ಮ ಅಧಿಕಾರಾವಧಿಯ ವಿವಿಧ ಹಂತಗಳಲ್ಲಿ ಬಂಧಿಸಲು ಒತ್ತಡ ಹೇರಲಾಗಿತ್ತು. ಹಾಗೆ ಮಾಡದಿದ್ದಕ್ಕಾಗಿ ಅದರ ಪರಿಣಾಮ ಎದುರಿಸಬೇಕಾಯಿತು ಎಂದು ‘ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ದಳ’ದ (‘ಎಟಿಎಸ್’) ಮಾಜಿ ಮುಖ್ಯಸ್ಥ ಕೆ.ಪಿ. ರಘುವಂಶಿ ಅವರು ತಮ್ಮ ‘ಟ್ರಬಲ್ ಶೂಟರ್’ ಎಂಬ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ. ರಘುವಂಶಿ ಅವರ ಅಧಿಕಾರಾವಧಿ ಪೂರ್ಣಗೊಳ್ಳುವ ಮೊದಲೇ, ಅಂದರೆ ೨೦೧೦ ರಲ್ಲಿ ಅವರನ್ನು ‘ಎಟಿಎಸ್’ ಮುಖ್ಯಸ್ಥ ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಕೊನೆಗೆ ೨೦೧೫ ರಲ್ಲಿ ‘ಮಹಾರಾಷ್ಟ್ರ ಭದ್ರತಾ ಪಡೆ’ಯ ಮಹಾನಿರ್ದೇಶಕರಾಗಿ ಅವರು ನಿವೃತ್ತರಾದರು.
ಮಾಜಿ ಪೊಲೀಸ್ ಮಹಾನಿರ್ದೇಶಕ ಎ.ಎನ್. ರಾಯ್ ಅವರ ಹಸ್ತದಿಂದ ರಘುವಂಶಿ ಅವರ ಆತ್ಮಚರಿತ್ರೆಯ ಪುಸ್ತಕ ಬಿಡುಗಡೆ ಮಾಡಲಾಯಿತು. ಮುಂಬಯಿ ಪೊಲೀಸ್ ಆಯುಕ್ತ ದೇವನ ಭಾರ್ತಿ, ಮಾಜಿ ಸಿಬಿಐ ನಿರ್ದೇಶಕ ಸುಬೋಧ ಜೈಸ್ವಾಲ್, ಮಾಜಿ ಪೊಲೀಸ್ ಮಹಾನಿರ್ದೇಶಕಿ ರಶ್ಮಿ ಶುಕ್ಲಾ ಮತ್ತು ‘ಎ.ಟಿ.ಎಸ್.’ ಮುಖ್ಯಸ್ಥ ನವಲ ಬಜಾಜ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಪುಸ್ತಕದಲ್ಲಿ, ಅಂದಿನ ‘ಯುಪಿಎ’ (ಸಂಯುಕ್ತ ಪ್ರಗತಿಪರ ಮೈತ್ರಿಕೂಟ) ಸರಕಾರದ ಒಬ್ಬ ಹಿರಿಯ ಸಚಿವರು ೨೦೦೮ ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇಂದ್ರೇಶ ಕುಮಾರ್ ಅವರನ್ನು ಬಂಧಿಸಲು ತಮ್ಮ ಮೇಲೆ ಒತ್ತಡ ಹೇರಿದ್ದರು ಎಂದು ಹೇಳಲಾಗಿದೆ. ಪುರಾವೆಗಳ ಕೊರತೆಯಿಂದಾಗಿ ರಘುವಂಶಿ ಅವರು ಇದನ್ನು ನಿರಾಕರಿಸಿದ್ದರು. ಇದಕ್ಕೂ ಮೊದಲು ಮಹಾರಾಷ್ಟ್ರದ ಒಬ್ಬ ಹಿರಿಯ ಸಚಿವರು ೧೯೯೩ ರ ಮುಂಬಯಿ ದಂಗೆ ಪ್ರಕರಣದಲ್ಲಿ ಬಾಳಾಸಾಹೇಬ್ ಠಾಕ್ರೆ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದರು. (ರಘುವಂಶಿ ಅವರು ಈ ಇಬ್ಬರೂ ಸಚಿವರ ಹೆಸರುಗಳನ್ನು ಬಹಿರಂಗಪಡಿಸುವರೇ?-ಸಂಪಾದಕರು) ಪತ್ರಕರ್ತ ಜಿತೇಂದ್ರ ದೀಕ್ಷಿತ್ ಅವರು ಈ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ರಘುವಂಶಿ ಅವರು ಪ್ರಸ್ತುತ ‘ಐಪಿಎಲ್ ಫ್ರಾಂಚೈಸಿ ರಾಜಸ್ಥಾನ ರಾಯಲ್ಸ್’ಗಾಗಿ ವಿಜಿಲೆನ್ಸ್ ಯುನಿಟ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!