ರಾಜಸ್ಥಾನದ ೩ ನಗರಗಳ ಮರುನಾಮಕರಣ

ಜಯಪುರ (ರಾಜಸ್ಥಾನ) – ರಾಜಸ್ಥಾನ ಸರಕಾರವು ೩ ನಗರಗಳ ಹೆಸರುಗಳನ್ನು ಬದಲಾಯಿಸುವುದಾಗಿ ಘೋಷಿಸಿದೆ. ಮೌಂಟ್ ಅಬೂ ಅನ್ನು ‘ಅಬೂರಾಜ’, ಜಹಾಜಪುರವನ್ನು ‘ಯಜ್ಞಪುರ’ ಮತ್ತು ಕಾಮಾ ನಗರದ ಹೆಸರನ್ನು ‘ಕಾಮವನ’ ಎಂದು ಮರುನಾಮಕರಣ ಮಾಡಲಾಗಿದೆ. ಮುಖ್ಯಮಂತ್ರಿ ಭಜನಲಾಲ್ ಶರ್ಮಾ ಅವರು ವಿಧಾನಸಭೆಯಲ್ಲಿ ರಾಜ್ಯದ ಬಜೆಟ್ ಚರ್ಚೆಯ ಸಂದರ್ಭದಲ್ಲಿ ಈ ಘೋಷಣೆ ಮಾಡಿದರು.
ಸ್ಥಳೀಯ ನಾಗರಿಕರ ಬೇಡಿಕೆ, ಐತಿಹಾಸಿಕ ಸಂದರ್ಭ ಮತ್ತು ಸಾಂಸ್ಕೃತಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಅಧಿಕೃತ ಅಧಿಸೂಚನೆಯನ್ನು ಶೀಘ್ರದಲ್ಲೇ ಹೊರಡಿಸಿ ಮರುನಾಮಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಭಜನಲಾಲ್ ಶರ್ಮಾ ಹೇಳಿದರು.
ಕಾಂಗ್ರೆಸ್ ವಿರೋಧ
ರಾಜಸ್ಥಾನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ವರ್ಣಿಮ್ ಚತುರ್ವೇದಿ ಅವರು ಈ ಬಗ್ಗೆ ಮಾತನಾಡಿ, ಈ ನಗರಗಳಲ್ಲಿ ರಸ್ತೆ, ನೀರು, ಆರೋಗ್ಯ ಮತ್ತು ಉದ್ಯೋಗದಂತಹ ಮೂಲಭೂತ ಸೌಕರ್ಯಗಳನ್ನು ಬಲಪಡಿಸುವುದು ಹೆಸರುಗಳನ್ನು ಬದಲಾಯಿಸುವುದಕ್ಕಿಂತ ಹೆಚ್ಚು ಅಗತ್ಯವಾಗಿದೆ ಎಂದು ಟೀಕಿಸಿದರು. ಸರಕಾರವು ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು. (ಅತ್ಯಾಚಾರಿ ಮುಸಲ್ಮಾನರು ಮತ್ತು ಬ್ರಿಟಿಷರು ನೀಡಿದ ಹೆಸರುಗಳನ್ನು ಬದಲಾಯಿಸಿ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿಡುವುದು ಸ್ವಾತಂತ್ರ್ಯದ ನಂತರವೇ ಮಾಡಬೇಕಿತ್ತು; ಆದರೆ ಮೊಘಲರು ಮತ್ತು ಬ್ರಿಟಿಷರ ವೈಚಾರಿಕ ಗುಲಾಮಗಿರಿ ಮಾಡುವ ಕಾಂಗ್ರೆಸ್ ಈ ಕೆಲಸ ಮಾಡಲು ಬಯಸಲಿಲ್ಲ. ಈಗಿನ ನಾಯಕರು ಅದನ್ನು ಮಾಡುತ್ತಿದ್ದರೆ ಕಾಂಗ್ರೆಸ್ಸಿಗೆ ಅಸೂಯೆಯಾಗುತ್ತಿದೆ. ಇಂತಹ ಕಾಂಗ್ರೆಸ್ಸಿನಿಂದ ಭಾರತವನ್ನು ಮುಕ್ತಗೊಳಿಸುವುದು ಅತ್ಯಂತ ಅವಶ್ಯಕವಾಗಿದೆ- ಸಂಪಾದಕರು).
ಸಂಪಾದಕೀಯ ನಿಲುವುಹೀಗೆ ಒಂದೊಂದಾಗಿ ಮರುನಾಮಕರಣ ಮಾಡುವ ಬದಲು ದೇಶಾದ್ಯಂತ ಒಂದೇ ಆದೇಶದ ಮೂಲಕ ಎಲ್ಲಾ ಹೆಸರುಗಳನ್ನು ಬದಲಾಯಿಸುವ ನಿರ್ಧಾರವನ್ನು ಯಾಕೆ ತೆಗೆದುಕೊಳ್ಳಬಾರದು? |
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ