|

ಮುಂಬಯಿ, ಫೆಬ್ರವರಿ 26 (ವಾರ್ತೆ) – ಸ್ವಾತಂತ್ರ್ಯವೀರ ಸಾವರ್ಕರ್ ಅವರ ಪುಣ್ಯತಿಥಿಯ ಸಂದರ್ಭದಲ್ಲಿ ಅವರಿಗೆ ಮರಣೋತ್ತರ ‘ಭಾರತರತ್ನ’ ಪ್ರಶಸ್ತಿಯನ್ನು ನೀಡಬೇಕು. ರಾಜ್ಯ ಸರಕಾರದ ಸಂಸದೀಯ ವ್ಯವಹಾರಗಳ ಸಚಿವರು ಈ ಕುರಿತ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಬೇಕು ಮತ್ತು ಸಭಾಪತಿಗಳು ಈ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಬೇಕು ಎಂದು ಭಾಜಪ ಶಾಸಕ ಶ್ರೀ. ಪ್ರಸಾದ ಲಾಡ್ ಅವರು ಫೆಬ್ರವರಿ 26 ರಂದು ವಿಧಾನ ಪರಿಷತ್ತಿನಲ್ಲಿ ಒತ್ತಾಯಿಸಿದರು.
ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಂಸದೀಯ ವ್ಯವಹಾರಗಳ ಸಚಿವ ಶ್ರೀ. ಚಂದ್ರಕಾಂತ ಪಾಟೀಲ್ ಅವರು, “ಸರಕಾರವು ಇಂತಹ ಪ್ರಸ್ತಾವನೆಯನ್ನು ತರಬೇಕಾಗುತ್ತದೆ. ನಾನು ಈ ಪರಿಷತ್ತಿನಲ್ಲಿ ಈ ಪ್ರಸ್ತಾವನೆಯನ್ನು ಮಂಡಿಸುತ್ತೇನೆ. ಅದರ ನಂತರ ಸಭಾಪತಿಯವರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿ,” ಎಂದು ಹೇಳಿದರು.
ಹಿಂದೂತ್ವನಿಷ್ಠ ಸರಕಾರದಿಂದ ಜನರ ನಿರೀಕ್ಷೆ!
ಕಳೆದ 10 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಕೇಂದ್ರ ಮತ್ತು ರಾಜ್ಯದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ಅವರ ಹಿಂದೂತ್ವನಿಷ್ಠ ವಿಚಾರಧಾರೆಗಳನ್ನು ಅನುಸರಿಸುವ ಸರಕಾರವೇ ಅಧಿಕಾರದಲ್ಲಿದೆ; ಆದರೂ ಸ್ವಾತಂತ್ರ್ಯವೀರ ವಿನಾಯಕ ದಾಮೋದರ್ ಸಾವರ್ಕರ್ ಅವರಿಗೆ ಇದುವರೆಗೆ ‘ಭಾರತರತ್ನ’ ಸಿಕ್ಕಿಲ್ಲ. ಈ ಬಗ್ಗೆ ಹಿಂದೂತ್ವನಿಷ್ಠ ಸಂಘಟನೆಗಳು ಬೇಸರ ವ್ಯಕ್ತಪಡಿಸುತ್ತಲೇ ಬಂದಿವೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್ ಅವರೂ ಈ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದರು. ಈಗ ವಿಧಾನ ಪರಿಷತ್ತಿನಲ್ಲಿ ಈ ಬೇಡಿಕೆ ಕೇಳಿಬಂದಿರುವುದರಿಂದ ಸಾವರ್ಕರ್ ಪ್ರೇಮಿಗಳಲ್ಲಿ ಹೊಸ ಭರವಸೆ ಚಿಗುರೊಡೆದಿದೆ.
ಸಂಪಾದಕೀಯ ನಿಲುವುಸ್ವಾತಂತ್ರ್ಯವೀರ ಸಾವರ್ಕರ್ ಅವರು ಕೇವಲ ಪದವಿಗಾಗಿಯಲ್ಲ, ಬದಲಾಗಿ ಈ ದೇಶದ ಅಸ್ಮಿತೆಗಾಗಿ ಬದುಕಿದವರು. ಅವರಿಗೆ ‘ಭಾರತರತ್ನ’ ಲಭಿಸುವುದು ಸಾವರ್ಕರ್ ಅವರಿಗಲ್ಲ, ಬದಲಾಗಿ ಆ ಪುರಸ್ಕಾರಕ್ಕೇ ಸಿಗುವ ನಿಜವಾದ ಗೌರವವಾಗಿದೆ. ರಾಜ್ಯ ಸರಕಾರವು ಕೇವಲ ಭರವಸೆ ನೀಡದೆ, ಪ್ರತ್ಯಕ್ಷವಾಗಿ ಕ್ರಮ ಕೈಗೊಂಡು ಈ ಪ್ರಸ್ತಾವನೆಯನ್ನು ಆದಷ್ಟು ಬೇಗ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಬೇಕೆಂಬುದೇ ದೇಶಪ್ರೇಮಿ ನಾಗರಿಕರ ಆಶಯವಾಗಿದೆ! |
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!