|

ನವದೆಹಲಿ – ಭಾರತದಲ್ಲಿ ಕಳೆದ 20 ವರ್ಷಗಳಲ್ಲಿ ವಿಚ್ಛೇದನ ಪಡೆಯುವ ಪ್ರಮಾಣದಲ್ಲಿ ಏರಿಕೆಯಾಗಿದೆ. 20 ವರ್ಷಗಳ ಹಿಂದೆ ದೇಶದಲ್ಲಿ ಶೇ. 0.6 ರಷ್ಟು ಮಹಿಳೆಯರು ವಿಚ್ಛೇದನ ಪಡೆದಿದ್ದರು, ಈಗ ಈ ಪ್ರಮಾಣ ಶೇ. 1 ಕ್ಕೆ ತಲುಪಿದೆ. ‘ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ’ ವರದಿಯಿಂದ ಈ ಅಂಕಿಅಂಶಗಳು ಹೊರಬಂದಿವೆ. 1986-87 ರ ಪ್ರಕಾರ, ವಿಚ್ಛೇದನದ 849 ಪ್ರಕರಣಗಳ ಪೈಕಿ 570 ಪ್ರಕರಣಗಳಲ್ಲಿ ಪತಿಗಳೇ ವಿಚ್ಛೇದನಕ್ಕೆ ಬೇಡಿಕೆ ಇಟ್ಟಿದ್ದರು. ಇದು ಶೇ. 67 ರಷ್ಟಿತ್ತು; ಆದರೆ ಈಗ ಸುಮಾರು ಶೇ. 58 ರಷ್ಟು ಮಹಿಳೆಯರು ವಿಚ್ಛೇದನಕ್ಕಾಗಿ ಮುಂದೆ ಬರುತ್ತಿದ್ದಾರೆ. ಅಂದರೆ ಪುರುಷರು ವಿಚ್ಛೇದನ ಕೋರುವ ಪ್ರಮಾಣ ಶೇ. 67 ರಿಂದ ಶೇ. 42 ಕ್ಕೆ ಇಳಿಕೆಯಾಗಿದೆ.
1. ಮುಂಬಯಿ ಕೌಟುಂಬಿಕ ನ್ಯಾಯಾಲಯದ ಅಧ್ಯಯನದ ಪ್ರಕಾರ, ಶೇ. 40 ರಷ್ಟು ಪ್ರಕರಣಗಳಲ್ಲಿ ಮದುವೆಯಾದ 3 ವರ್ಷಗಳಲ್ಲೇ ಸಂಬಂಧಗಳು ಹದಗೆಡುತ್ತಿವೆ. ವಿಚ್ಛೇದನ ಕೋರುವ ಮಹಿಳೆಯರು 25 ರಿಂದ 34 ವರ್ಷ ವಯಸ್ಸಿನವರಾಗಿದ್ದಾರೆ.
2. ಮಹಾರಾಷ್ಟ್ರದಲ್ಲಿ ಶೇ. 18.7, ಕರ್ನಾಟಕದಲ್ಲಿ ಶೇ. 11.7, ಬಂಗಾಳದಲ್ಲಿ ಶೇ. 8.2, ದೆಹಲಿಯಲ್ಲಿ ಶೇ. 7.7, ತಮಿಳುನಾಡಿನಲ್ಲಿ ಶೇ. 7.1, ತೆಲಂಗಾಣದಲ್ಲಿ ಶೇ. 6.7 ಮತ್ತು ರಾಜಸ್ಥಾನದಲ್ಲಿ ಶೇ. 2.5 ರಷ್ಟು ವಿಚ್ಛೇದನದ ಪ್ರಮಾಣವಿದೆ.
3. ‘ಎಡ್ಜುಆ ಲೀಗಲ್ಸ್ ಗೂಗಲ್ ಅನಾಲಿಟಿಕ್ಸ್ 2025’ ರ ವರದಿಯ ಪ್ರಕಾರ ಲಕ್ಷಣಪುರಿ, ದೆಹಲಿ, ಮುಂಬಯಿ, ಕೋಲಕಾತಾ, ಹೈದರಾಬಾದ್ ಮತ್ತು ಬೆಂಗಳೂರು ನಗರಗಳಲ್ಲಿ ಕಳೆದ 3 ವರ್ಷಗಳಲ್ಲಿ ವಿಚ್ಛೇದನ ಪ್ರಕರಣಗಳು 3 ಪಟ್ಟು ಹೆಚ್ಚಾಗಿವೆ.
ಸಂಪಾದಕೀಯ ನಿಲುವುಆಧ್ಯಾತ್ಮಶಾಸ್ತ್ರ ಮತ್ತು ಧರ್ಮಶಾಸ್ತ್ರದ ಪ್ರಕಾರ, ವಿವಾಹ ಎಂದರೆ ‘ಪ್ರಾರಬ್ಧ’ವನ್ನು ಅನುಭವಿಸಲು ಒಂದಾಗುವುದು. ಈ ಫಲಗಳನ್ನು ಅನುಭವಿಸುವಾಗ ‘ಕ್ರಿಯಮಾಣ ಕರ್ಮ’ವನ್ನು ಬಳಸಿ ಪತಿ-ಪತ್ನಿಯರು ಸಾಧನೆ ಮಾಡಿದರೆ, ಅವರು ಈಶ್ವರನ ಕೃಪೆಯಿಂದ ಉತ್ತಮ ಸಂಸಾರ ನಡೆಸಿ ಆನಂದಮಯ ಜೀವನ ನಡೆಸಬಹುದು. ಇದು ಸಾಧ್ಯವಾಗಲು ಜನರಿಗೆ ಧರ್ಮಶಿಕ್ಷಣ ನೀಡುವುದು ಅತ್ಯಗತ್ಯವಾಗಿದೆ. |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”