ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಅವರ ‘ಘರ್ ವಾಪಸಿ’ ಹೇಳಿಕೆಗೆ ಮೌಲಾನಾ ಅರ್ಶದ ಮದನಿಯವರ ಆಕ್ರೋಶ! (‘ಘರ್ ವಾಪಸಿ’ ಎಂದರೆ ಹಿಂದೂ ಧರ್ಮಕ್ಕೆ ಪುನರ್ ಪ್ರವೇಶ)

ನವದೆಹಲಿ – ‘ಜಮಿಯತ್ ಉಲೇಮಾ-ಎ-ಹಿಂದ್’ನ ಅಧ್ಯಕ್ಷ ಮೌಲಾನಾ ಅರ್ಶದ ಮದನಿ ಅವರು ಸರಸಂಘಚಾಲಕ ಪ.ಪೂ. ಡಾ. ಮೋಹನಜಿ ಭಾಗವತ ಅವರ ‘ಘರ ವಾಪಸಿ’ ಕುರಿತಾದ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ದೇಶದಲ್ಲಿ ಪ್ರಸ್ತುತ ದ್ವೇಷದ ವಾತಾವರಣವನ್ನು ನಿರ್ಮಿಸಲಾಗುತ್ತಿದೆ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ‘ಭಾರತದಲ್ಲಿ ವಾಸಿಸುವ ಮುಸಲ್ಮಾನರೂ ಹಿಂದೂಗಳೇ ಆಗಿದ್ದಾರೆ. ಅವರನ್ನೂ ‘ಘರ್ ವಾಪಸಿ’ ಮಾಡಬೇಕಿದೆ’ ಎಂದು ಡಾ. ಮೋಹನಜಿ ಭಾಗವತ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. (ಪ.ಪೂ. ಸರಸಂಘಚಾಲಕರು ಸತ್ಯ ಇತಿಹಾಸವನ್ನು ಮಂಡಿಸಿದ್ದಾರೆ; ಆದರೆ ಮತಾಂತರಗೊಂಡವರು ಮೂಲಕ್ಕಿಂತ ಹೆಚ್ಚು ಕಟ್ಟರವಾದಿಗಳಾಗಿರುತ್ತಾರೆ. ಆದ್ದರಿಂದ ಇಂತಹ ವಿಚಾರಗಳನ್ನು ಅರಗಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ – ಸಂಪಾದಕರು!)
೧. ಮೌಲಾನಾ ಅರ್ಶದ ಮದನಿ ಅವರು ಫೆಬ್ರವರಿ ೧೮ ರಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸುತ್ತಾ, ೨೦ ಕೋಟಿ ಮುಸಲ್ಮಾನರ ‘ಘರ್ ವಾಪಸಿ’ಯ ವಿಚಾರವನ್ನು ಮಂಡಿಸುವ ಧೈರ್ಯವನ್ನು ಕಳೆದ ೭೦ ವರ್ಷಗಳಲ್ಲಿ ಯಾರೂ ಮಾಡಿರಲಿಲ್ಲ, ಅದನ್ನು ಇಂದು ಮಂಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. ದೇಶವನ್ನು ವಿನಾಶ, ಅಸ್ಥಿರತೆ ಮತ್ತು ಪರಸ್ಪರ ಹಗೆತನದತ್ತ ಕೊಂಡೊಯ್ಯುವ ಯಾವುದೇ ಕರೆ ದೇಶನಿಷ್ಠೆಯ ಕರೆಯಾಗಲು ಸಾಧ್ಯವಿಲ್ಲ ಎಂದಿದ್ದಾರೆ. (ದೇಶದ ಇತಿಹಾಸದ ಪುನರಾವರ್ತನೆ ಮಾಡುವುದು (ಗತವೈಭವವನ್ನು ಮರುಸ್ಥಾಪಿಸುವುದು) ರಾಷ್ಟ್ರನಿಷ್ಠೆಯೇ ಆಗಿದೆ! – ಸಂಪಾದಕರು)
೨. ದೇಶದಲ್ಲಿ ಹಸುವಿನ ಹೆಸರಿನಲ್ಲಿ ನಿರಪರಾಧಿಗಳನ್ನು ಹತ್ಯೆ ಮಾಡಲಾಗುತ್ತಿದೆ ಮತ್ತು ಸರಕಾರವು ಮೌನ ತಾಳಿದೆ ಎಂದು ಅವರು ಆರೋಪಿಸಿದ್ದಾರೆ.((?) ಇದು, ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಮತಾಂಧ ಮುಸಲ್ಮಾನರಿಂದ ಬಹಿರಂಗವಾಗಿ ಗೋಹತ್ಯೆಗಳು ನಡೆಯುತ್ತಿವೆ. ಅದನ್ನು ತಡೆಯಲು ಪ್ರಯತ್ನಿಸುವವರ ಮೇಲೆ ದಾಳಿ ಮಾಡಲಾಗುತ್ತಿದೆ. ಇದು ಸಂವಿಧಾನದ ಉಲ್ಲಂಘನೆಯಲ್ಲವೇ? – ಸಂಪಾದಕರು)
೩. ಧರ್ಮದ ಹೆಸರಿನಲ್ಲಿ ಯಾವುದೇ ಹಿಂಸೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಎಲ್ಲಾ ಧರ್ಮಗಳು ಮಾನವೀಯತೆ, ಸಹಿಷ್ಣುತೆ, ಪ್ರೀತಿ ಮತ್ತು ಏಕತೆಯ ಸಂದೇಶವನ್ನು ನೀಡುತ್ತವೆ. (ಹಿಂದೂಗಳನ್ನು ‘ಕಾಫಿರ್’ ಎಂದು ಕರೆದು ಅವರನ್ನು ಕೊಲ್ಲುವ ಇತಿಹಾಸ ಹೊಂದಿರುವವರು ಇತರರಿಗೆ ಮಾನವೀಯತೆ, ಸಹಿಷ್ಣುತೆ ಮತ್ತು ಪ್ರೀತಿಯನ್ನು ಕಲಿಸುವುದು ಹಾಸ್ಯಾಸ್ಪದವಲ್ಲವೇ? – ಸಂಪಾದಕರು) ಯಾರು ಧರ್ಮವನ್ನು ದ್ವೇಷ ಮತ್ತು ಹಿಂಸೆ ಹರಡಲು ಉಪಯೋಗಿಸುತ್ತಾರೆಯೋ, ಅವರು ತಮ್ಮ ಧರ್ಮದ ನಿಜವಾದ ಅನುಯಾಯಿಗಳಾಗಲು ಸಾಧ್ಯವಿಲ್ಲ ಎಂದು ಮದನಿ ಅವರು ಹೇಳಿದ್ದಾರೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”