‘ವಂದೇ ಮಾತರಂ’ ಕುರಿತು ‘ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್’ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ಅವರ ಹೇಳಿಕೆ !

ನವದೆಹಲಿ – ಕೇಂದ್ರ ಸರಕಾರವು ‘ವಂದೇ ಮಾತರಂ’ ರಾಷ್ಟ್ರಗೀತೆ ಹಾಡುವುದನ್ನು ಅನಿವಾರ್ಯಗೊಳಿಸಿದ ನಂತರ ಮುಸಲ್ಮಾನರಿಂದ ವಿರೋಧ ವ್ಯಕ್ತವಾಗುತ್ತಿದೆ. ‘ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್’ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ಅವರು ‘ವಂದೇ ಮಾತರಂ’ನ ಎಲ್ಲ ೬ ಚರಣಗಳನ್ನು ಹಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅವರು, ನಾವು ತಲೆ ಕತ್ತರಿಸಿಕೊಳ್ಳಲು ಸಿದ್ಧರಿದ್ದೇವೆ; ಆದರೆ ರಾಷ್ಟ್ರೀಯ ಗೀತೆಯ ಆ (‘ದುರ್ಗಾ ಮಾತೆ’ ಮತ್ತು ‘ಸರಸ್ವತಿ ಮಾತೆ’ಯ ಉಲ್ಲೇಖವಿರುವ) ವಿಶಿಷ್ಟ ಸಾಲುಗಳನ್ನು ಹಾಡುವುದಿಲ್ಲ ಎಂದು ಹೇಳಿದ್ದಾರೆ.
Nation First – Or Faith Above Nation? 🇮🇳
“Even if our heads are severed, we will not sing the lines referring to Goddess Durga and Goddess Saraswati in Vande Mataram.”
– Maulana Sajid Rashidi, President, All India Imam Association.When a religious leader openly rejects Vande… https://t.co/46roh7pcNn pic.twitter.com/EYSFdHKL0D
— Sanatan Prabhat (@SanatanPrabhat) February 13, 2026
‘ವಂದೇ ಮಾತರಂ’ ವರ್ಷ ೧೯೩೭ ರಿಂದ ವಿವಾದಾತ್ಮಕವಾಗಿದೆ! (ಅಂತೆ)
ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಮೌಲಾನಾ ಸಾಜಿದ್ ರಶೀದಿ ಅವರು ಹೀಗೆ ಹೇಳಿದರು:
೧. ‘ವಂದೇ ಮಾತರಂ’ ವರ್ಷ ೧೯೩೭ ರಿಂದ ವಿವಾದದ ವಿಷಯವಾಗಿದೆ. ೧೯೩೭ ರಲ್ಲಿ ಅಂದಿನ ಪ್ರಮುಖ ನಾಯಕರಾದ ಮೌಲಾನಾ ಅಬುಲ್ ಕಲಾಂ ಆಜಾದ್ ಮತ್ತು ಹುಸೇನ್ ಅಹ್ಮದ್ ಮದನಿ ಅವರು ಕಾಂಗ್ರೆಸ್ಸಿಗೆ ಪತ್ರ ಬರೆದು ‘ವಂದೇ ಮಾತರಂ’ನಲ್ಲಿರುವ ಕೆಲವು ಸಾಲುಗಳು ಮುಸಲ್ಮಾನ್ ಸಮುದಾಯದ ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿವೆ ಎಂದು ತಿಳಿಸಿದ್ದರು. ತದನಂತರ ಕಾಂಗ್ರೆಸ್ ನಿರ್ಣಯವನ್ನು ಅಂಗೀಕರಿಸಿ ಆ ಕೆಲವು ಸಾಲುಗಳನ್ನು ಕೈಬಿಟ್ಟಿತು. (ಕಾಂಗ್ರೆಸ್ಸಿನ ಇದೇ ಮಾನಸಿಕತೆಯಿಂದಾಗಿ ಭಾರತದಲ್ಲಿ ಮತಾಂಧ ಮುಸಲ್ಮಾನರು ಮಿತಿಮೀರಿ ಬೆಳೆದರು ಮತ್ತು ರಾಷ್ಟ್ರಘಾತಕ ಕೃತ್ಯಗಳನ್ನು ಮಾಡಲು ಪ್ರಾರಂಭಿಸಿದರು! – ಸಂಪಾದಕರು)
೨. ವರ್ಷ ೨೦೧೬ ರಲ್ಲಿ ಸುಪ್ರೀಂ ಕೋರ್ಟ್ನ ಒಂದು ತೀರ್ಪಿನಲ್ಲಿ, ‘ವಂದೇ ಮಾತರಂ’ ಪಠಣದ ಸಮಯದಲ್ಲಿ ಯಾರಾದರೂ ಎದ್ದು ನಿಲ್ಲದಿದ್ದರೆ ಅವರನ್ನು ದೇಶದ್ರೋಹಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿತ್ತು. (ತಮ್ಮ ಅನುಕೂಲಕ್ಕೆ ತಕ್ಕಂತೆ ನ್ಯಾಯಾಲಯದ ತೀರ್ಪನ್ನು ಬಳಸಿಕೊಳ್ಳುವ ಮುಸಲ್ಮಾನರು! ಶ್ರೀರಾಮಜನ್ಮಭೂಮಿ ಪ್ರಕರಣದ ತೀರ್ಪು ಮುಸಲ್ಮಾನರ ವಿರುದ್ಧ ಬಂದಾಗ ಅವರು ಅದನ್ನು ಯಾವಾಗಲೂ ನಿರಾಕರಿಸುತ್ತಾರೆ, ಇದರಿಂದ ಇದು ಸ್ಪಷ್ಟವಾಗುತ್ತದೆ! – ಸಂಪಾದಕರು)
೩. ರಾಷ್ಟ್ರೀಯ ಗೀತೆಯ ಯಾವ ಸಾಲುಗಳಲ್ಲಿ ದೇಶವನ್ನು ‘ದುರ್ಗಾ ಮಾತೆ’ಮತ್ತು ‘ಸರಸ್ವತಿ ಮಾತೆ’ಎಂದು ಸಂಬೋಧಿಸಲಾಗಿದೆ, ಅವು ನಮ್ಮ ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿವೆ. (ಇಂತಹ ಮುಸಲ್ಮಾನರು ಎಂದಾದರೂ ಸರ್ವಧರ್ಮ ಸಮಭಾವವನ್ನು ಪಾಲಿಸುತ್ತಾರೆಯೇ? ಇದರಿಂದ ‘ಹಿಂದೂ-ಮುಸಲ್ಮಾನ್ ಭಾಯಿ ಭಾಯಿ’ (‘ಹಿಂದೂ-ಮುಸ್ಲಿಂ ಸಹೋದರತ್ವ’ದ ಅಸಂಬದ್ಧತೆಯನ್ನು) ಎಂಬ ನಾಟಕವು ಸ್ಪಷ್ಟವಾಗಿ ತೋರಿಸುತ್ತದೆ! – ಸಂಪಾದಕರು) ಮುಸಲ್ಮಾನರು ತಮ್ಮ ಪ್ರಾಣವನ್ನು ನೀಡಬಲ್ಲರು; ಆದರೆ ಧಾರ್ಮಿಕ ನಂಬಿಕೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಯಾರಾದರೂ ನಮ್ಮ ಮೇಲೆ ಇಂತಹ ಆದೇಶವನ್ನು ಹೇರಲು ಪ್ರಯತ್ನಿಸಿದರೆ ಅದನ್ನು ಸಹಿಸುವುದಿಲ್ಲ.
‘ಎ.ಐ.ಎಮ್.ಐ.ಎಮ್.’ನಿಂದಲೂ ವಿರೋಧ
‘ಎ.ಐ.ಎಮ್.ಐ.ಎಮ್.’ನ (ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ- ಅಖಿಲ ಭಾರತೀಯ ಮುಸ್ಲಿಂ ಏಕತಾ ಸಂಘ) ರಾಷ್ಟ್ರೀಯ ವಕ್ತಾರ ವಾರಿಸ್ ಪಠಾಣ್ ಮಾತನಾಡಿ, ನಾನು ‘ವಂದೇ ಮಾತರಂ’ ಅನ್ನು ಗೌರವಿಸುತ್ತೇನೆ; ಆದರೆ ‘ಅದನ್ನು ಹಾಡುವುದು ಅನಿವಾರ್ಯ’ಎಂದು ಹೇಳುವುದು ಸಂವಿಧಾನ ವಿರೋಧಿಯಾಗಿದೆ. ಭಾಜಪ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘವು ‘ನೀವು ವಂದೇ ಮಾತರಂ ಹಾಡದಿದ್ದರೆ ನೀವು ದೇಶ ವಿರೋಧಿಗಳು’ಎಂದು ಹೇಳುವುದು ತಪ್ಪು. ನಾವು ರಾಷ್ಟ್ರಗೀತೆಯನ್ನು ಸಂತೋಷದಿಂದ ಹಾಡುತ್ತೇವೆ. ಇತರ ಎಲ್ಲ ವಿಷಯಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲಾಗುತ್ತಿದೆ” ಎಂದು ಹೇಳಿದರು.
ಸಂಪಾದಕೀಯ ನಿಲುವು
|
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”