ಆಡಳಿತದಲ್ಲಿ ‘ಐ.ಎ.ಎಸ್.’, ‘ಐ.ಪಿ.ಎಸ್.’ ಮತ್ತು ‘ಐ.ಎಫ್.ಎಸ್.’ನಂತಹ ಪ್ರತಿಷ್ಠಿತ ಸೇವೆಗಳಲ್ಲಿ ಒಟ್ಟು 2 ಸಾವಿರದ 834 ಹುದ್ದೆಗಳು ಖಾಲಿ

ನವದೆಹಲಿ – ‘ಭಾರತೀಯ ಕಮ್ಯುನಿಸ್ಟ್ ಪಕ್ಷ’ ಅಥವಾ ಭಾಕಪದ ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಅವರು ದೇಶದ ‘ಐ.ಎ.ಎಸ್.’ (ಭಾರತೀಯ ಆಡಳಿತ ಸೇವೆ), ‘ಐ.ಪಿ.ಎಸ್.’ (ಭಾರತೀಯ ಪೊಲೀಸ್ ಸೇವೆ) ಮತ್ತು ‘ಐ.ಎಫ್.ಎಸ್.’ (ಭಾರತೀಯ ವಿದೇಶಾಂಗ ಸೇವೆ) ಅಧಿಕಾರಿಗಳ ಖಾಲಿ ಹುದ್ದೆಗಳ ಕುರಿತು ಕೇಂದ್ರ ಸರಕಾರಕ್ಕೆ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸುತ್ತಾ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ರಾಜ್ಯಸಭೆಯಲ್ಲಿ ಮಾಹಿತಿ ನೀಡಿ, ‘ಐ.ಎ.ಎಸ್.’, ‘ಐ.ಪಿ.ಎಸ್.’ ಮತ್ತು ‘ಐ.ಎಫ್.ಎಸ್.’ ಪ್ರತಿಷ್ಠಿತ ಸೇವೆಗಳಲ್ಲಿ ಒಟ್ಟು 2 ಸಾವಿರದ 834 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದ್ದಾರೆ.

ಕೇಂದ್ರ ಸಚಿವರು,

1. ಜನವರಿ 1, 2025 ರವರೆಗಿನ ಲಭ್ಯವಿರುವ ಮಾಹಿತಿಯ ಪ್ರಕಾರ, ‘ಐ.ಎ.ಎಸ್.’ನ 1 ಸಾವಿರದ 300 ಹುದ್ದೆಗಳು, ‘ಐ.ಪಿ.ಎಸ್.’ನ 505 ಹುದ್ದೆಗಳು ಮತ್ತು ‘ಐ.ಎಫ್.ಎಸ್.’ನ 1 ಸಾವಿರದ 29 ಹುದ್ದೆಗಳು ಖಾಲಿ ಇವೆ.

2. ಕೇಂದ್ರ ಸರಕಾರವು ಘೋಷಿಸಿರುವ ಅಂಕಿಅಂಶಗಳ ಪ್ರಕಾರ, ಈ ಮೂರೂ ಅಖಿಲ ಭಾರತ ಸೇವೆಗಳಲ್ಲಿ ಮಂಜೂರಾದ ಹುದ್ದೆಗಳ ಸಂಖ್ಯೆ ಮತ್ತು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಸಂಖ್ಯೆಯ ನಡುವೆ ದೊಡ್ಡ ವ್ಯತ್ಯಾಸವಿದೆ.

3. ಐ.ಎ.ಎಸ್. ನ ಒಟ್ಟೂ ಮಂಜೂರಾದ ಹುದ್ದೆಗಳು 6 ಸಾವಿರದ 877 ಗಳಿದ್ದು, 5 ಸಾವಿರ 577 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಐ.ಪಿ.ಎಸ್. ನಲ್ಲಿ 5 ಸಾವಿರ 99 ಮಂಜೂರಾದ ಹುದ್ದೆಗಳಲ್ಲಿ 4 ಸಾವಿರ 594 ಅಧಿಕಾರಿಗಳು ನಿಯುಕ್ತರಾಗಿದ್ದಾರೆ. ಐ.ಎಫ್ಎಸ್. ನಲ್ಲಿ 3 ಸಾವಿರ 193 ಮಂಜೂರಾದ ಹುದ್ದೆಗಳಲ್ಲಿ 2 ಸಾವಿರ 164 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

4. ಉತ್ತರ ಪ್ರದೇಶದಲ್ಲಿ ‘ಐ.ಎ.ಎಸ್.’ನ 652 ಹುದ್ದೆಗಳನ್ನು ಅಂಗೀಕರಿಸಲಾಗಿದ್ದು, 571 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ 459 ಹುದ್ದೆಗಳ ಪೈಕಿ 391 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ, ಮಹಾರಾಷ್ಟ್ರದಲ್ಲಿ 435 ಹುದ್ದೆಗಳ ಪೈಕಿ 359 ಅಧಿಕಾರಿಗಳು ನೇಮಕಗೊಂಡಿದ್ದಾರೆ ಹಾಗೂ ಬಿಹಾರದಲ್ಲಿ ಐ.ಎ.ಎಸ್. ನ 359 ಹುದ್ದೆಗಳ ಪೈಕಿ 303 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

೫. ಕೇಂದ್ರದ ಮೋದಿ ಸರಕಾರವು ಮೀಸಲಾತಿ ಪ್ರವರ್ಗಗಳಿಂದಾದ ನೇಮಕಾತಿಯ ಅಂಕಿಅಂಶಗಳನ್ನು ಘೋಷಿಸಿದೆ. ಇತರ ಹಿಂದುಳಿದ ವರ್ಗದ ೨೪೫, ಪರಿಶಿಷ್ಟ ಜಾತಿಯ ೧೩೫, ಹಾಗೆಯೇ ಪರಿಶಿಷ್ಟ ಪಂಗಡದ ೬೭ ‘ಐ.ಎ.ಎಸ್.’ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತರ ಹಿಂದುಳಿದ ವರ್ಗದ ೨೫೫, ಪರಿಶಿಷ್ಟ ಜಾತಿಯ ೧೪೧ ಮತ್ತು ಪರಿಶಿಷ್ಟ ಪಂಗಡದ ೭೧ ‘ಐ.ಪಿ.ಎಸ್.’ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇತರ ಹಿಂದುಳಿದ ವರ್ಗದ ೨೩೧, ಪರಿಶಿಷ್ಟ ಜಾತಿಯ ೯೫ ಮತ್ತು ಪರಿಶಿಷ್ಟ ಪಂಗಡದ ೪೮ ‘ಐ.ಎಫ್.ಎಸ್.’ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.