ರಾಜಸ್ಥಾನ ಉಚ್ಚ ನ್ಯಾಯಾಲಯದಿಂದ ಪರಿಶಿಷ್ಟ ಜಾತಿ-ಪಂಗಡ ಕಾಯ್ದೆಯಡಿ ದಾಖಲಾಗಿದ್ದ ಅಪರಾಧ ರದ್ದುಗೊಳಿಸಿ ನಿರ್ಣಾಯಕ ತೀರ್ಪು

ಜೋಧಪುರ (ರಾಜಸ್ಥಾನ) – ‘ನೀಚ’ ಎಂಬ ಪದದ ಅರ್ಥ ಕೀಳು ಅಥವಾ ಅಧಮ ಎಂದಾಗುತ್ತದೆ, ಇದನ್ನು ವ್ಯಕ್ತಿಯೊಬ್ಬನ ಕೆಟ್ಟ ನೈತಿಕ ಚಾರಿತ್ರ್ಯವನ್ನು ವಿವರಿಸಲು ಬಳಸಲಾಗುತ್ತದೆ. ಇದು ಯಾವುದೇ ನಿರ್ದಿಷ್ಟ ಸಮುದಾಯ ಅಥವಾ ಜಾತಿಯ ಹೆಸರಲ್ಲ. ‘ನೀಚ’ ಎಂದು ಕರೆಯುವುದು ಜಾತಿ ಆಧಾರಿತ ಅವಮಾನದ ವರ್ಗಕ್ಕೆ ಬರುವುದಿಲ್ಲ ಎಂದು ಹೇಳುತ್ತಾ ರಾಜಸ್ಥಾನ ಉಚ್ಚ ನ್ಯಾಯಾಲಯವು ‘ಐಐಟಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ – ಭಾರತೀಯ ತಂತ್ರಜ್ಞಾನ ಸಂಸ್ಥೆ) ಜೋಧಪುರ’ದ ನಿರ್ದೇಶಕರು ಮತ್ತು ಸಹ ಪ್ರಾಧ್ಯಾಪಕ ಡಾ. ದೀಪಕ ಅರೋರಾ ಅವರ ಅರ್ಜಿಯ ವಿಚಾರಣೆ ನಡೆಸುವಾಗ ಪರಿಶಿಷ್ಟ ಜಾತಿ-ಪಂಗಡ ಕಾಯ್ದೆಯಡಿಯ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿದೆ.
ನ್ಯಾಯಾಲಯವು ‘ಸ್ವರ್ಣ ಸಿಂಗ್ ವಿರುದ್ಧ ರಾಜ್ಯ’ ಪ್ರಕರಣವನ್ನು ಉಲ್ಲೇಖಿಸಿ, ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಯ್ದೆಯಡಿ ಅವಮಾನವು ಸಾರ್ವಜನಿಕ ಸ್ಥಳದಲ್ಲಿ ನಡೆದಿರಬೇಕು ಎಂದು ಹೇಳಿದೆ. ಈ ಘಟನೆಯು ನಿರ್ದೇಶಕರ ಮುಚ್ಚಿದ ಕೊಠಡಿಯಲ್ಲಿ ನಡೆದಿತ್ತು, ಅಲ್ಲಿ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. ಆದ್ದರಿಂದ ಇದನ್ನು ‘ಸಾರ್ವಜನಿಕ ದೃಶ್ಯ’ ಎಂದು ಪರಿಗಣಿಸಲು ಸಾಧ್ಯವಿಲ್ಲ, ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಯಾವ ಪ್ರಕರಣ?
ಈ ಸಂಪೂರ್ಣ ಪ್ರಕರಣವು ಸೆಪ್ಟೆಂಬರ್ ೨, ೨೦೨೫ ರಂದು ನಡೆದಿದೆ. ‘ಐಐಟಿ ಜೋಧಪುರ’ದ ಹಂಗಾಮಿ ಕುಲಸಚಿವ ಅಂಕುರ ಗುಪ್ತಾ ಅವರು ಪೊಲೀಸರಿಗೆ ದೂರು ನೀಡಿದ್ದರು. ಸಹ ಪ್ರಾಧ್ಯಾಪಕ ಡಾ. ದೀಪಕ ಅರೋರಾ ಅವರು ಸಂಸ್ಥೆಯ ನಿರ್ದೇಶಕ ಪ್ರಾಧ್ಯಾಪಕ ಅವಿನಾಶ ಅಗರ್ವಾಲ್ ಅವರ ಕಚೇರಿಯಲ್ಲಿ ಚರ್ಚೆ ನಡೆಸುತ್ತಿದ್ದಾಗ ಅವರ ನಡುವೆ ವಾಗ್ವಾದ ಉಂಟಾಗಿತ್ತು ಎಂಬುದು ಆರೋಪವಾಗಿತ್ತು. ಪ್ರಾಧ್ಯಾಪಕ ದೀಪಕ ಅರೋರಾ ಅವರು ನಿರ್ದೇಶಕರ ಮೇಲೆ ಆಕ್ರಮಣ ಮಾಡಿದ್ದರು. ಅಲ್ಲಿ ಉಪಸ್ಥಿತರಿದ್ದ ಕಚೇರಿ ಸಹಾಯಕ ವಿವೇಕ ಗೌತಮ್ ಮತ್ತು ಇತರರು ಮಧ್ಯಸ್ಥಿಕೆ ವಹಿಸಿದಾಗ, ಪ್ರಾಧ್ಯಾಪಕ ಡಾ. ದೀಪಕ ಅರೋರಾ ಅವರು ವಿವೇಕ ಗೌತಮ್ ಅವರೊಂದಿಗೆ ಜಗಳವಾಡಿ, ‘ನೀಚ’ ಎಂಬಂತಹ ಪದಗಳನ್ನು ಬಳಸಿ ನಿಂದಿಸಿದ್ದರು ಎಂದು ದೂರು ನೀಡಲಾಗಿತ್ತು. ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಯ್ದೆಯ ಕಲಂಗಳಡಿ ಪ್ರಕರಣ ದಾಖಲಿಸಿದ್ದರು. ಇದನ್ನು ಡಾ. ದೀಪಕ ಅರೋರಾ ಅವರ ಪರವಾಗಿ ಉಚ್ಚ ನ್ಯಾಯಾಲಯದಲ್ಲಿ ಸವಾಲು ಮಾಡಲಾಗಿತ್ತು.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!