
ನವದೆಹಲಿ – ನಾಳೆ, ಶನಿವಾರ ಫೆಬ್ರವರಿ 7 ರಂದು ದೇಶಾದ್ಯಂತ ವಾಹನ ಸೇವೆ ಒದಗಿಸುವ ಓಲಾ, ಉಬರ್ ಮತ್ತು ರ‍್ಯಾಪಿಡೋ ಸಂಸ್ಥೆಗಳ ಚಾಲಕರು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಚಾಲಕರು ಈ ಆಂದೋಲನಕ್ಕೆ ‘ಆಲ್ ಇಂಡಿಯಾ ಬ್ರೇಕ್‌ಡೌನ್’ ಎಂದು ಹೆಸರಿಟ್ಟಿದ್ದು, ಅಂದು ತಮ್ಮ ಆಪ್‌ಗಳನ್ನು (App) ಸ್ಥಗಿತಗೊಳಿಸಲಿದ್ದಾರೆ. ಇದರಿಂದಾಗಿ ಟ್ಯಾಕ್ಸಿ, ರಿಕ್ಷಾ, ಆಟೋ ಅಥವಾ ದ್ವಿಚಕ್ರ ವಾಹನಗಳ ಸೇವೆ ಪಡೆಯುವಲ್ಲಿ ಸಾರ್ವಜನಿಕರಿಗೆ ದೊಡ್ಡ ತೊಂದರೆಯಾಗುವ ಸಾಧ್ಯತೆಯಿದೆ. ಈ ಮುಷ್ಕರವನ್ನು ಟಿಜಿಪಿಡಬ್ಲ್ಯೂಯು (ತೆಲಂಗಾಣ ಗಿಗ್ ವರ್ಕರ್ಸ್ ಯೂನಿಯನ್) ಮತ್ತು ಇತರ ಸಂಘಟನೆಗಳು ಜಂಟಿಯಾಗಿ ಕರೆ ನೀಡಿವೆ.
ಬಾಡಿಗೆಯ ದರಗಳಲ್ಲಿ ಯಾವುದೇ ಸ್ಥಿರತೆ ಇಲ್ಲದಿರುವುದು, ಸ್ಪಷ್ಟ ನಿಯಮಗಳ ಕೊರತೆ ಮತ್ತು ನಡೆಯುತ್ತಿರುವ ಶೋಷಣೆಯ ವಿರುದ್ಧ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ಸಂಘಟನೆಯು ತಮ್ಮ ದೂರುಗಳನ್ನು ಸಲ್ಲಿಸಿದೆ. ಸರಕಾರದಿಂದ ದರ ನಿಗದಿಯಾಗದ ಕಾರಣ ಕಂಪನಿಗಳು ಮನಬಂದಂತೆ ಕಮಿಷನ್ ಕಡಿತಗೊಳಿಸುತ್ತಿವೆ, ಇದರಿಂದ ಮನೆ ನಡೆಸುವುದೇ ಕಷ್ಟವಾಗಿದೆ ಮತ್ತು ಆದಾಯದ ಬಗ್ಗೆ ಅನಿಶ್ಚಿತತೆ ಮೂಡಿದೆ ಎಂದು ಚಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.
ದೇಶದ ಮೊದಲ ಸಹಕಾರಿ ತತ್ವದ ‘ಭಾರತ್ ಟ್ಯಾಕ್ಸಿ’ ಸೇವೆಗೆ ಚಾಲನೆ
ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾಹ ಅವರು ‘ಭಾರತ್ ಟ್ಯಾಕ್ಸಿ’ಯನ್ನು ಅಧಿಕೃತವಾಗಿ ಉದ್ಘಾಟಿಸಿದರು. ‘ಭಾರತ್ ಟ್ಯಾಕ್ಸಿ’ಯು ಶೂನ್ಯ ಕಮಿಷನ್ (Zero Commission) ಪದ್ಧತಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಚಾಲಕರಿಗೆ ಸಿಗಬೇಕಾದ ಪೂರ್ಣ ಮೊತ್ತವು ನೇರವಾಗಿ ಅವರ ಖಾತೆಗೆ ಜಮೆಯಾಗಲಿದೆ. ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡಲು ‘ಸಾರಥಿ ದೀದಿ’ ಎಂಬ ಯೋಜನೆಯನ್ನು ಆರಂಭಿಸಲಾಗಿದೆ. ಈ ಉಪಕ್ರಮದ ಅಡಿಯಲ್ಲಿ ಇದುವರೆಗೆ 150ಕ್ಕೂ ಹೆಚ್ಚು ಮಹಿಳಾ ಚಾಲಕರು ‘ಭಾರತ್ ಟ್ಯಾಕ್ಸಿ’ಯೊಂದಿಗೆ ಕೈಜೋಡಿಸಿದ್ದಾರೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !